ಜನವರಿಯಿಂದ ಶಾಲೆ ಆರಂಭ, ಶಿಕ್ಷಕರಿಗೆ ಕೊರೋನಾ ಪರೀಕ್ಷೆ

ಕೊಟ್ಟೂರು ಡಿ 30:ಜನವರಿ ಒಂದರಿಂದ ಶಾಲೆಗಳು ಆರಂಭವಾಗುವ ಹಿನ್ನಲೆಯಲ್ಲಿ ಶಾಲೆಗಳಿಗೆ ತೆರಳುವ ಮುನ್ನ ಶಿಕ್ಷಕರು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿ ಇದರ ವರದಿ ಸಲ್ಲಿಸಿ ಶಾಲೆಗಳಿಗೆ ತೆರಳಬೇಕು ಎಂಬ ಸರ್ಕಾರದ ಆದೇಶದ ಅನ್ವಯ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿಕ್ಷಕರು ಕೊರೋನಾ ಪರೀಕ್ಷೆ ಮಾಡಿಸಿದರು.
ಶಿಕ್ಷಕ ಗಿರೀಶ್ ಮಾತನಾಡಿ ರಾಜ್ಯ ಸರ್ಕಾರದ ಆದೇಶದಿಂದ ಕೊರೋನಾ ಪರೀಕ್ಷೆ ಮಾಡಿಸಿದ್ದು ಇದರಿಂದ ಆರೋಗ್ಯಕೂಡ ದೃಡಪಟ್ಟಿದೆ ಇದು ಸ್ವಗತರ್ಹವಾಗಿದೆ ಎಂದರು.