ಜನವರಿಯಲ್ಲಿ ಪುಣ್ಯಕೋಟಿ ಮಠದಲ್ಲಿ ತುಂಗಾರತಿ


 ಹರಿಹರ.ನ.೧೭;  ಸಮೀಪದ ಕುಮಾರಪಟ್ಟಣದ ತುಂಗಭದ್ರ ನದಿ ತೀರದ ಅವಿಮುಕ್ತ ತಪೋಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರು ವೀರಗಂಗಾಧರ ಭಗವತ್ಪಾದರ ಪುಣ್ಯಸ್ಮರಣೋತ್ಸವ. ಶ್ರೀ  ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಐತಿಹಾಸಿಕ ತುಂಗಾರತಿ ಸಮಾರಂಭ ಜ. 22  ಮತ್ತು 23 ರಂದು ನಡೆಯಲಿದೆ.ವೀರಶೈವ ಧರ್ಮ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರಿಂದ ಮಲಯಾಚಲದ ತಪೋಭೂಮಿಯಲ್ಲಿ ಸ್ಪಾಪನೆಗೊಂಡ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಪೀಠದ ಶಾಖಾ ಮಠವೇ ಪುಣ್ಯಕೋಟಿಮಠ. 2011ರ ಯುಗಾದಿಯ ಶುಭ ಪರ್ವಕಾಲದಲ್ಲಿ 21 ದಿನಗಳಕಾಲ ಅನ್ನ, ಆಹಾರ, ಗಾಳಿ, ನೀರು ಬೆಳಕಿಲ್ಲದೇ ಭೂ ಸಮಾಧಿ ಕಠೋರ ತಪೋ ಅನುಷ್ಠಾನ ಗೈದು ನಾಡಿನ ಭಕ್ತಪ್ರಿಯರಾಗಿ ಜನಜಾಗೃತಿ ಮೂಡಿಸಿದ್ದಾರೆ. ಪ್ರತಿವರ್ಷ ವಿಶಿಷ್ಟ ಹಾಗೂ ವಿನೂತನವಾದ ಧಾರ್ಮಿಕ ಕಾರ್ಯಗಳ ಮೂಲಕ ದಾವಣಗೆರೆ ಮತ್ತು ಹಾವೇರಿ ನಾಡಿನ ಭಕ್ತಸಂಕುಲಕ್ಕೆ ಪುಣ್ಯಕೋಟಿ ಅಪ್ಪಾಜಿಯೆಂದೇ ಪ್ರಸಿದ್ದಿ ಪಡೆದ ಬಾಲಯೋಗಿ  ಜಗದೀಶ್ವರ ಶ್ರೀಗಳು ಸರಳ, ಸಜ್ಜನಿಕೆ ಮೃದು-ಮಧುರ ನಡೆನುಡಿಗಳಿಂದ ಭಕ್ತರ ಪಾಲಿಗೆ ನಡೆದಾಡುವ, ಮಾತನಾಡುವ ದೇವರಾಗಿ ಪೂಜಿಪರಾಗಿದ್ದಾರೆ. ಸದಾವಕಾಲ ದೊಡ್ಡೇರಿ ದತ್ತಾಶ್ರಮದ ಪರಮಹಂಸ ಸದ್ಗುರು ಶ್ರೀ ಸತ್ ಉಪಾಸಿ ಅವಧೂತ ಯತಿಶ್ರೇಷ್ಠರಾದ, ಆಧ್ಯಾತ್ಮಿಕ ಸ್ಪರ್ಷಮಣಿಯಂತಹ ತ್ರಿಕಾಲ ಜ್ಞಾನಿಯ ಒಡನಾಟದಲ್ಲಿ ಬೆಳೆದ ಪುಣ್ಯಕೋಟಿ ಶ್ರೀಗಳು ಸದ್ಗುರುಗಳೊಂದಿಗೆ ಕೇದಾರನಾಥ ಯಾತ್ರೆಯ ಶುಭ ಸಂದರ್ಭದಲ್ಲಿ ಹರಿದ್ವಾರ-ಹೃಷಿಕೇಶ ಕ್ಷೇತ್ರಗಳಲ್ಲಿ ಸಂಚರಿಸಿ ತ್ರೀವೇಣಿ ಘಾಟ್‌ನಲ್ಲಿ ನಡೆಯುತ್ತಿರುವ ಗಂಗಾರತಿಯನ್ನು ನೋಡಿ ಆನಂದಪಟ್ಟ ಅವರು ಇಲ್ಲಿ ಹರಿಯುವುದು ಗಂಗಾ ನದಿ ಅದಕ್ಕಾಗಿ ಇಲ್ಲಿ ಪ್ರತಿದಿನ ಗಂಗಾರತಿಯನ್ನು ಮಾಡುತ್ತಾರೆ. ನಿಮ್ಮ ಮಠದ ಬಳಿ ಹರಿಯುವುದು ತುಂಗಭದ್ರಾ ನದಿ ಆ ನದಿದಡದಲ್ಲಿ ನೀನು ತುಂಗಾರತಿಯನ್ನು ಮಾಡಿ ಪ್ರಸಿದ್ಧನಾಗು ಇದು ದತ್ತನಿಚ್ಚೆ, ಇದು ಶ್ರೀಪಾದ ವಲ್ಲಭರ ಸದಿಚ್ಛೆಯಾಗಿದೆ. ಇಂತಹ ಪವಿತ್ರ ಸಮಾರಂಭಕ್ಕೆ ಆಗಮಿಸುವ ಸಕಲ ಸದ್ಭಕ್ತರ ಕಷ್ಟಗಳು ದೂರವಾಗಿ ಇಷ್ಟಾರ್ಥದ ಫಲ ದೊರೆಯುವಂತಾಗಲಿ ಎಂದು ಅಭಯ ನೀಡಿದ್ದರ ಪ್ರತಿಫಲವಾಗಿ 2019 ರ ಮಾಘಮಾಸದ ಶುಭ ಪರ್ವಕಾಲದಲ್ಲಿ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳವರಿಂದ ಪ್ರಾರಂಭಗೊಂಡು 2020ರಲ್ಲಿ ಶ್ರೀಮದ್ ಶ್ರೀಶೈಲ ಜಗದ್ಗುರುಗಳವರ ಪಾವನ ಸನ್ನಿಧಿಯಲ್ಲಿ ಉತ್ತುಂಗಾರತಿಯಾಗಿ ಪ್ರಸಿದ್ಧಿಯನ್ನು ಪಡೆದ ಈ ಶುಭ ಘಳಿಗೆಯಲ್ಲಿ ಗಂಗಾಮಾತೆಯನ್ನು ಪೂಜಿಸುವ, ಗೋಮಾತೆಯನ್ನು ಗೌರವಿಸುವ, ನಿಸರ್ಗ ಮಾತೆಯನ್ನು ಸ್ಮರಿಸುವಂತಹ ಸರ್ವಶ್ರೇಷ್ಠ ಸಮಾರಂಭವನ್ನು ಏರ್ಪಡಿಸುತ್ತ ಬರಲಾಗಿದೆ. ಇಂತಹ ಪರಮ ಪವಿತ್ರ  ಐತಿಹಾಸಿಕ ಹೆಜ್ಜೆಯನ್ನಿಟ್ಟ ಪುಣ್ಯಕೋಟಿ ಶ್ರೀಗಳು ತುಂಗಾರತಿ ಶ್ರೀಗಳು ಎಂದೆ ಜನಮಾನಸದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಕಾರ್ಯಕ್ರಮದ ವಿಶೇಷತೆ:ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಸಾರೋಟೋತ್ಸವ ಮತ್ತು ಗೋಮಾತಾ ಸಂರಕ್ಷಣಾ ವಿಜಯ ಸಂಕಲ್ಪ ಯಾತ್ರೆಯಲ್ಲಿ 1008 ಜನ ಮುತ್ತೈದೆಯರು ಹಸಿರು ಸೀರೆ, ಹಸಿರು ಬಳೆ ತೊಟ್ಟು ಭಾಗವಹಿಸಲಿದ್ದಾರೆ.ಲಂಬಾಣಿ ಸಮುದಾಯದ ತಾಯಂದಿರು ತಮ್ಮ ಸಾಂಸ್ಕೃತಿಕ ಉಡುಗೆಯೊಂದಿಗೆ ಭಾಗಿಯಾಗಲಿದ್ದಾರೆ. ಕೇರಳದಿಂದ ಆಗಮಿಸುವ ಗೊಂಬೆ ಕುಣಿತ, ಮಂಗಳೂರಿನ ಚಂಡೆವಾಧ್ಯ, ಉತ್ತರ ಕರ್ನಾಟಕದ ಜಗ್ಗಲಗಿ ಮೇಳ, ಕರಡಿ ಮಜಲು, ನಂದಿಕೋಲು, ಡೊಳ್ಳು ಕುಣಿತ, ಭಜನಾ ಮೇಳ, ಕೋಲಾಟ, ವೇದಮಂತ್ರ ಘೋಷಣಿ, ಪಂಚಾಚಾರ್ಯಾ ದ್ವಜ, ಭಗವಾದ್ವಜ, ವೀರಗಾಸೆ, ಗೋಮಾತೆ ಮಹತ್ವ ಸಾರುವಂತಹ ಸ್ತಬ್ದಚಿತ್ರಗಳ ಪ್ರದರ್ಶನ ನಡೆಯಲಿದೆ.ಹೀಗೆ ಹಲವಾರು ವಿಶೇಷತೆಗಳಿಂದ ಕಾರ್ಯಕ್ರಮ ಜರುಗಲಿದೆ.
Attachments area