ಜನವರಿಯಲ್ಲಿ ಕೊರೋನಾ ಲಸಿಕೆ ಲಭ್ಯ

ನವದೆಹಲಿಯ, ನ. 8- ವಿಶ್ವದಾದ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿರುವ ಕೊರೊನಾ ಸೊಂಕಿಗೆ ಲಸಿಕೆ ಜನರವರಿಯಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ‌

ಆಸ್ಟ್ರೆಜೆನಕಾ ಸೇರಿದಂತೆ ವಿವಿಧ ಲಸಿಕೆಗಳು ಹೊಸ ವರ್ಷದಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದಲ್ಲಿ ಸೋಂಕಿನ ಪ್ರಮಾಣ 5 ಕೋಟಿ ಸಮೀಪಿಸಿದ್ದು ಇದುವರೆಗೂ 12 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಭಾರತ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಲಸಿಕೆ ಕಂಡುಹಿಡಿಯುವ ಪ್ರಯತ್ನ‌ ಸಾಗಿದ್ದು ಅಂತಿಮ ಹಂತದ ಪ್ರಯೋಗದಲ್ಲಿ ಪ್ರಯೋಗಳಗಳಿವೆ.

ಈ ನಡುವೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ನಲ್ಲಿ ಯುರೋಪ್ ನಲ್ಲಿ ಹೊಸದಾಗಿ ಲಾಕ್ ಡೌನಗ ಘೋಷಣೆ ಮಾಡಲಾಗಿದೆ‌.ಡೆನ್ಮಾರ್ಕ್ ನಿಂದ ಇಂಗ್ಲೆಂಡ್‌ ಪ್ರಯಾಣಿಕರು ಬರುವುದನ್ನಿ ನಿಷೇದಿಸಲಾಗಿದೆ.

ರಷ್ಯಾದ ಹಾರ್ವಡ್ ಕ್ಲಬ್ ಲಸಿಕೆ ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ನಿರತರಾಗಿದ್ದು ಸಂಸ್ಥೆ ಯ ಪ್ರಾಧ್ಯಾಪಕ ಡಿಮಿಟ್ರಿ ಕುಲಿಷ್ ಅವರು ಮುಂದಿನ ವರ್ಷ ಜನವರಿಯಲ್ಲಿ ಲಸಿಕೆ ಸಿದ್ದವಾಗುವ ಸಾದ್ಯೆತೆಗಳಿವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆದರೆ ಜನವರಿ ಆರಂಭದಲ್ಲಿ ಲಸಿಕೆ ಸಿದ್ಧವಾಗಲಿದೆ. ಆ ಬಳಿಕ ಅದನ್ನು ಅಭಿವೃದ್ಧಿಗೊಳಿಸಿ ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ಲ್ಲಿ ತಯಾರಾಗುತ್ತಿರುವ ಸ್ಪುಟ್ನಿಕ್ -ವಿ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಪ್ರಯೋಗ ಹಂತದಲ್ಲಿರುವ ಲಸಿಕೆ ಜನವರಿಯಲ್ಲಿ ಬಹುತೇಕ ಸಿಗುವ ಸಾದ್ಯತೆಗಳು ಹೆಚ್ಚಿವೆ ಎಂದು ಅವರು ತಿಳಿಸಿದ್ದಾರೆ‌.

ಈಗಾಗಲೇ ವಿಶ್ವದ ಅನೇಕ ದೇಶಗಳು ಆಸ್ಟ್ರಾ ಜೆನಕಾ ಸಂಸ್ಥೆಯಿಂದ ಲಸಿಕೆ ಪಡೆಯುವ ಒಪ್ಪತ ಮಾಡಿಕೊಂಡಿವೆ. ಲಸಿಕೆಗೆ ಅನುಮತಿ ದೊರೆಯುತ್ತಿದ್ದಂತೆ ಅದನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಪರಿಚಯಿಸಲು ಉದ್ದೇಶಿಸಲಾಗಿದೆ.

ವಿಶ್ವವನ್ನು ಕಾಡುತ್ತಿರುವ ಕೊರೋನಾ ಸೋಂಕಿಗೆ ಜನವರಿಯಲ್ಲಿ ಬಹುತೇಕ ಲಸಿಕೆ ಲಭ್ಯವಾಗಲಿದೆ.