ಜನರ ಸೇವೆಗೆ ಸದಾ ಬದ್ದ- ದದ್ದಲ್

ರಾಯಚೂರು,ಮೇ.೩೦-
ಗ್ರಾಮೀಣ ಕ್ಷೇತ್ರದಲ್ಲಿ ಎರಡನೇ ಭಾರಿಗೆ ನನ್ನ ಗೆಲುವಿಗೆ ಶ್ರಮಿಸಿದ ಗ್ರಾಮೀಣ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ, ಕಾರ್ಯಕರ್ತರಿಗೂ, ಮುಖಂಡರುಗಳಿಗೂ ಹೃದಯ ಪೂರಕ ಅಭಿನಂದನೆಗಳೆಂದು ಶಾಸಕ ಬಸನಗೌಡ ದದ್ದಲ್ ಅವರು ಹೇಳಿದರು.
ಸೋಮವಾರ ಮೇ. ೨೯ ರಂದು ನಗರದ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರ ಕಾರ್ಯಕ್ರಮದಲ್ಲಿ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದರು.
ಈ ಗೆಲುವು ನನ್ನ ಗೆಲುವು ಅಲ್ಲ, ಗ್ರಾಮೀಣ ಕ್ಷೇತ್ರದ ಜನರ ಗೆಲುವು, ನಿಮ್ಮ ಆರ್ಶಿವಾದವೇ ನನಗೆ ಶ್ರೀರಕ್ಷೆ ರಾಯಚೂರು ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ.
ರಾಯಚೂರು ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲಿ ಸತತ ಎರಡು ಬಾರಿ ಯಾರು ಕೂಡ ಶಾಸಕರಾಗಿಲ್ಲ ಈ ಕ್ಷೇತ್ರದಿಂದ ಒಮ್ಮೆ ಗೆದ್ದದರೆ ಮತ್ತೊಮ್ಮೆ ಗೆಲ್ಲೋದಿಲ್ಲ ಎಂಬ ಹಣೆ ಪಟ್ಟಿ ಇದೆ ಈ ಹಣೆಪಟ್ಟಿಯನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಜನರು ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಬಸನಗೌಡ ದದ್ದಲ್ ರವರನ್ನು ಗೆಲ್ಲಿಸಿ ಆ ಹಣಿಪಟ್ಟಿಯನ್ನು ಹಳಿಸಿ ಹಾಕಿದ್ದಾರೆ ಎಂದರೆ ಸುಳ್ಳಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ, ಕ್ಷೇತ್ರಕ್ಕೆ ಬೇಕಾದ ಅನುದಾನವನ್ನು ತಂದು ಮಾದರಿ ಕ್ಷೇತ್ರವಾನ್ನಾಗಿ ಮಾಡಲು ಶ್ರಮಿಸುತ್ತೇನೆ.
ಕಾಂಗ್ರೆಸ್ ಪಕ್ಷದ ೫ ಗ್ಯಾರೆಂಟಿಗಳನ್ನು ಸಧ್ಯದಲ್ಲಿಯೇ ಜಾರಿಗೆ ತರಲಾಗುತ್ತದೆ, ಸಾಧಕ ಬಾಧಕಗಳನ್ನು ಚರ್ಚಿಸಿ ಜಾರಿಗೆ ತರಲಾಗುತ್ತದೆ ಎಂದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಲ್ಲಿಕಾರ್ಜುನ ಗೌಡ, ಕೆ. ಪಂಪಾಪತಿ, ಬಸವರಾಜ ವಕೀಲ್, ಚಂದ್ರಶೇಖರ ಪಾಟೀಲ್, ತಾಯಣ್ಣ ನಾಯಕ, ಜಯಂತರಾವ್ ಪತಂಗಿ ಪವನ್ ಪಾಟೀಲ್, ಅಂಬಣ್ಣ ಅರೋಲಿಕರ್ ಜಾಫರ್ ಅಲಿ ಪಟೇಲ್, ಶಿವಪ್ಪನಾಯಕ, ತಾಪಂ,ಜಿಪಂ ಮಾಜಿ ಸದಸ್ಯರುಗಳು,ಗ್ರಾ.ಪಂ ಸದಸ್ಯರುಗಳು, ಹಾಗೂ ಗಿಲ್ಲೆಸೂಗೂರು ಬ್ಲಾಕ್ ಕಾಂಗ್ರೆಸ್, ಮತ್ತು ದೇವಸೂಗೂರು ಬ್ಲಾಕ್ ಕಾಂಗ್ರೆಸ್‌ನ ವಿವಿಧ ಘಟಕಗಳ ಅಧ್ಯಕ್ಷರು, ಸರ್ವ ಸದಸ್ಯರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಇದ್ದರು.