ಜನರ ಸಹಕಾರದಿಂದ ಶಾರದಾಂಬೆ ಸಹಕಾರಿ ಪ್ರಗತಿಯತ್ತಾ

ಮಾನ್ವಿ,ಏ.೧೧- ಪಟ್ಟಣದ ಶಾರದಾಂಬೆ ಮಾನವಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಆವರಣದಲ್ಲಿ ಬೇಸಿಗೆ ಅಂಗವಾಗಿ ಸಾರ್ವಜನಿಕರಿಗೆ ನೀರಿನ ಅರವಟಿಗೆ ಸೇವೆಯನ್ನು ಸಂಸ್ಥೆಯ ಅಧ್ಯಕ್ಷರಾದ ವೈ.ಸುರೇಶಗೌಡ ಚಾಲನೆ ನೀಡಿ ಮಾತನಾಡಿ ಸಹಕಾರಿಯು ೨೦೨೨-೨೩ನೇ ಸಾಲಿನಲ್ಲಿ ಸದಸ್ಯರಿಗೆ ಅರ್ಥಿಕ ನೇರವನ್ನು ನೀಡುವುದರೊಂದಿಗೆ ೨೬.೩ಕೋಟಿ ವ್ಯವಹಾರವನ್ನು ನಡೆಸಿದ್ದು ೫೪.೨೧ಲಕ್ಷ ಷೇರು ಬಂಡವಾಳ,೩.೧೦ಕೋಟಿ ಠೇವಣಿ ಹೊಂದಿದ್ದು. ಸದಸ್ಯರಿಗೆ ೧೨.೬೦ಕೋಟಿ ರೂ ಸಾಲ ಮತ್ತು ಮುಂಗಡಗಳನ್ನು ನೀಡಲಾಗಿದೆ.
೫.೯೮ ಲಕ್ಷ ನಿಧಿ,೨೩.೭೦ಕೋಟಿ ದುಡಿಯುವ ಬಂಡವಾಳ ಹೊಂದಿದ್ದು.೩೯.೧೦ಲಕ್ಷ ಲಾಭ ಹೊಂದಿದ್ದು ಸಹಕಾರಿಯ ಸದಸ್ಯರಿಗೆ ಲಾಭಂಶವನ್ನು ಹಂಚಲಾಗುವುದು ಸಹಕಾರಿಯ ವತಿಯಿಂದ ಅನೇಕ ಸಮಾಜ ಸೇವ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಪ್ರತಿ ವರ್ಷ ಬೇಸಿಗೆ ಅಂಗವಾಗಿ ಸಾರ್ವಜನಿಕರಿಗೆ ನೀರಿನ ಅರವಟಿಗೆ ಸೇವೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರಿಯ ಉಪಾಧ್ಯಕ್ಷರಾದ ಸುರೇಶ ಸಂಗಾಪುರ,ನಿರ್ದೇಶಕರಾದ ಮೌನೇಶ, ಮಲ್ಲಮ್ಮ, ಮಾಲಶ್ರೀ. ಚಂದ್ರಶೆಖರಗೌಡ, ಶಿವರಾಮಕೃಷ್ಣ, ವಿಜಯಕುಮಾರ, ಪ್ರಕಾಶ ಹಿರೇಮಠ, ಸತ್ಯಪ್ಪ, ಗಂಗಮ್ಮ, ಮಲ್ಲಿನಾಥ, ಈರಣ್ಣ, ಪರಶುರಾಮ ಕೇಸರಿ, ಇ.ಸಿ.ಒ.ರಾಜಕುಮಾರ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಕೃಷ್ಣ, ಬಸವರಾಜ. ಮುದ್ದಯ್ಯಸ್ವಾಮಿ ,ರಾಜು, ಆಶೋಕ, ಶಿವುಕುಮಾರ, ಶಿವಶಂಕರ, ಶಂಕರ ಶೆಟ್ಟಿ,ಸೇರಿದಂತೆ ಇನ್ನಿತರರು ಇದ್ದರು.