ಜನರ ಸಮಸ್ಯೆಗೆ ಸ್ಪಂದಿಸುವಂತೆ ಮುಖ್ಯ ಅಧಿಕಾರಿಗೆ ತಾಕಿತು : ಶಾಸಕ ಡಾ. ಸಿದ್ದು ಪಾಟೀಲ್

(ಸಂಜೆವಾಣಿ ವಾರ್ತೆ)
ಹುಮನಾಬಾದ :ಆ.2: ಸಾರ್ವಜನಿಕರು ಸಮಸ್ಯಗಳನ್ನು ತೆಗೆದುಗೊಂಡು ಬಂದವರಿಗೆ ಪುರಸಭೆ ಸಿಬ್ಬಂಧಿವರ್ಗ ಸೌಜನ್ಯದಿಂದ ವರ್ತಿಸಬೇಕೆಂದು ಶಾಸಕ ಡಾ. ಸಿದ್ದು ಪಾಟೀಲ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಪುರಸಭೆಯಲ್ಲಿ ಸಾರ್ವಜನಿಕರ ಕುಂದು ಕೋರತೆ ವಿಚರಣೆ ಹಾಗೂ ಪುರಸಭೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು ಸಿಬ್ಬಂಧಿವರ್ಗದವರಿಗೆ ಕಿವಿ ಮಾತು ಹೆಳಿದರು.
ಪುರಸಭೆಯ ಎಸ್,ಎಫ್,ಸಿ, ಯೋಜನೆಯ ರಸ್ತೆ ನಿಮಾರ್ಣ ಸೇರಿದಂತೆ ಹಲವಾರು ಕಾಮಗಾರಿಗಳು ಟೆಂಡರ ಆದರು ಕೂಡಾ ಕಾಮಗಾರಿ ಆರಂಭಿಸದೆ ಇದ್ದುದ್ದಕ್ಕೆ ತರಾಟೆಗೆ ತೆಗೆದು ಕೊಂಡರು. ಪಟ್ಟಣದ ಸಾರ್ವಜನಿಕರು ಸಭೆಯಲ್ಲಿ ಕಳಪೆ ಮಟ್ಟದ ರಸ್ತೆ ನಿಮಾರ್ಣ ಮಾಡಿದ್ದಾರೆ ಎಂದು ಶಾಸಕರಿಗೆ ದೂರಿದಾಗ ಸಿದ್ದು ಪಾಟೀಲ ರಸ್ತೆ ನಿಮಾರ್ಣದ ಮಾರ್ಗಸೂಚಿ ಯಂತೆ ನಿರ್ಮಿಸಲು ಗುತ್ತಿಗೆ ದಾರರಿಗೆ ತಿಳಿಸಲು ಇಂಜಿನಿಯರಗಳಿಗೆ ಸೂಚಿಸಿದರು. ಇಲ್ಲಿಯ ಢಣಕೆ ಲೇಔಟನಲ್ಲಿ ಪಶು ಆಸ್ಪತ್ರೆ ನಿಮಾರ್ಣ ಮಾಡಿದ್ದಾರೆ. ಇಲ್ಲಿಯಿಂದ ಬದಲಾವಣೆ ಮಾಡಬೇಕೆಂದು ಪ್ರಭಾಕರ ಹಿಬಾರೆ, ರವಿಕುಮಾರ ಖರ್ಗೆ ಸಭೆಯಲ್ಲಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಬದಲಾವಣೆ ಮಾಡಲು ಆಗ್ರಹಿಸಿದರು. ಪಟ್ಟಣದ ಅಭಿವೃದ್ಧಿಗೆ ನೀಡುವ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅತ್ಯಂತ ಚುರುಕಿನಿಂದ ಕಾರ್ಯನಿರ್ವಹಿಸಲು ಸಿದ್ದು ಪಾಟೀಲ ಸೂಚನೆ ನೀಡಿದರು.
ಪುರಸಭೆ ನೂತನ ಕಟ್ಟಡ ಮಳೆಯಿಂದ ಸೋರುತಿರುವುದನ್ನು ಶಾಸಕರಿಗೆ ಸಾರ್ವಜನಿಕರು ತಿಳಿಸಿದರು.
ಪುರಸಭೆ ಸದಸ್ಯರಾದ ಸುಶೀಲಕುಮಾರ ಮರಪಳ್ಳಿ, ರೇವಪ್ಪ ವೊಲದೋಡ್ಡಿ, ಮುಖಂಡರಾದ ಓಂಪ್ರಕಾಶ ಪ್ರಭಾ, ಬಸವರಾಜ ನಿರಾಳೆ, ಮುರಳಿ ಪೆÇೀಷನಗೀರ್, ನರಸಿಂಗ್ ನಿರಾಳೆ, ರಾಜು ಪಾಟೀಲ್, ಸಂಜುಕುಮಾರ ಪ್ರಭಾ, ಶಿವಕುಮಾರ ತೀರ್ಥಾ, ನಾಗರಾಜ ಚಂದನಕೇರಿ, ಸುನಿಲ್ ಚನ್ನಶಟ್ಟಿ, ಯುವರಾಜ ಬಿರಾದಾರ, ಚಂದ್ರಪ್ಪ ಸಾಗರ, ಅಮೃತ ಸಿರಂಜಿ, ಎಂ.ಡಿ. ಸಿದ್ಧಿಕಿ, ಮುರಳಿ ಪೆÇಸಂಗಿ, ಸುಶೀಲ ಮರಪಳ್ಳಿ, ನಾಗರಾಜ ಚಂದನಕೇರಿ, ಸಂಜುಕುಮಾರ ಪ್ರಭಾ. ಇಂಜಿನಿಯರ ಅರುಣ, ಪರಿಸರ ಅಭಿಯಂತರರಾದ ವಿಜಯ ದೀಪ ಸೇರಿದಂತೆ ಇದ್ದರು.