ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪಿಡಿಒ: ಗ್ರಾಮಸ್ಥರ ಮೆಚ್ಚುಗೆ

ಕಲಬುರಗಿ:ಜೂ.10: ನೂತನ ಶಹಾಬಾದ್ ತಾಲೂಕಿನ ರಾವೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಕಾವೇರಿ ರಾಠೋಡ್ ಅವರ ವಿರುದ್ಧ ಈಗ ಗ್ರಾಮದ ಕೆಲವರು ಗ್ರಾಮದ ಅಭಿವೃದ್ಧಿ ಕೆಲಸ ಬಿಟ್ಟು ತಮ್ಮ ಸ್ವಹಿತಾಸಕ್ತಿ ಗಳಿಗಾಗಿ ಶಾಸಕರ ಮೇಲೆ ಒತ್ತಡ ಹಾಕಿ ಪಿಡಿಒ ಅವರನ್ನು ವರ್ಗಾವಣೆ ಮಾಡುವಂತೆ ಮೇಲಧಿಕಾರಿಗಳಿಗೆ ದೂರು ಅರ್ಜಿಯನ್ನು ಹಾಕುತ್ತಿರುವುದು ಕಂಡು ಗ್ರಾಮಸ್ಥರು ಪಿಡಿಒ ಅವರು ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಹೀಗಾಗಿ ಸೇವೆ ಮುಂದುವರಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಯಾದ ಮಹಮ್ಮದ್ ಇಸ್ಮಾಯಿಲ್ ಅವರಿಗೆ ಒತ್ತಾಯಿಸಿದರು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು ಪಿಡಿಒ ಅವರು ಗ್ರಾಮದಲ್ಲಿ ಒಳ್ಳೆಯ ಕಾಮಗಾರಿಗಳನ್ನು ಕೈಗೊಂಡು ಮಾದರಿ ಗ್ರಾಮ ಪಂಚಾಯತ್ ಮಾಡುವಲ್ಲಿ ಯಶಸ್ವಿಯಾಗಿ ಕಳೆದ ವರ್ಷ ಗಾಂಧಿ ಗ್ರಾಮ ಪುರಸ್ಕಾರ ಲಭಿಸುವಂತೆ ಮಾಡಿದ್ದಾರೆ ಕೊರೊನ್ ಸಂದರ್ಭದಲ್ಲಿ ಗ್ರಾಮದ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಕೊರೊನ್ ಸೋಂಕಿನ ಕುರಿತು ಜಾಗೃತಿ ಮೂಡಿಸಿದ್ದಾರೆ.
ಒಂದು ವೇಳೆ ಪಿಡಿಒ ಅವರನ್ನು ರಾವೂರ ಗ್ರಾಮ ಪಂಚಾಯಿತಿಯಿಂದ ವರ್ಗಾವಣೆ ಮಾಡಿದರೆ ಸಂಘ ಸಂಘಟನೆಗಳು ಮತ್ತು ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆಯಲ್ಲಿ ಶ್ರೀನಿವಾಸ್ ಸಾಗರ್, ಅಬ್ದುಲ್ ಅಜೀಜ್ ಸೆಟ್, ಗುರುನಾಥ್ ಗುದಗಲ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದೇವಕಿ ನಾರಾಯಣ ದೊರೆ, ಗ್ರಾಮ ಪಂಚಾಯತ್ ಸದಸ್ಯರಾದ ಗೋವಿಂದ ಸಾಗರ್, ಮೀನಾಕ್ಷಿ ರಾಠೋಡ್, ವಿಕಾಸ್ ಚವ್ಹಾಣ, ವೆಂಕಟೇಶ್ ಚವ್ಹಾಣ, ಶಾಂತ ರಾಜೋಳ್ಳಿ, ತಿಮ್ಮಯ್ಯ ಸೇಡಂ, ತಿಮ್ಮಯ್ಯ ಸಿರವಾಳ, ವಿಜಯಲಕ್ಷ್ಮಿ ಮಾಡಗಿ, ಯುನುಸ್ ಪ್ಯಾರೆ, ಸುಮಿತ್ರ ತುಮಕೂರು, ರಫೀಕ್ ಶೇಟ್, ಕೃಷ್ಣ ಬೊಮ್ಮಣ್ಣ, ಶಾಂತಾಬಾಯಿ ಕಟ್ಟಿಮನಿ, ಸುಲೋಚನ ದೊರೆ, ಸವಿತಾ, ಶಾಂತಮ್ಮ, ಶಾಹಿದಾ ಬೇಗಂ, ಶಿವಯೋಗಿ ಸೋಲಹಳ್ಳಿ, ಚಂದ್ರಶೇಖರ ಅಂಗಡಿ, ಗಂಗಮ್ಮ ಕೊಸ್ನಾ ಗ್ರಾಮಸ್ಥರಾದ ಸಾಬು ತುಮಕೂರು, ಪುರುಷೋತ್ತಮ್ ರಾಠೋಡ್ ಗುರಪ್ಪ ಗುತ್ತೇದಾರ್, ಶ್ರೀನಿವಾಸ್ ವಗ್ಗರ್, ಯುವರಾಜ್ ರಾಠೋಡ್, ಖಾಜಾ ಪಟೇಲ್, ಹೈದರ್ ಮೂಸಾವಾಲೆ, ವಿಕಾಸ್ ಚವ್ಹಾಣ, ಅನಿಲ್ ಪವರ್, ಪಾರ್ವತಿ ಕಾರಬಾರಿ, ಶಾರದಾಬಾಯಿ, ಅನಿತಾ ಪವರ್, ಸೇರಿದಂತೆ ಇತರರಿದ್ದರು.