ಜನರ ಸಂಸ್ಕಾರಯುತ ಬದುಕಿಗೆ ಶರಣ- ಸಂತರ ಮಾರ್ಗದರ್ಶನ ದಾರಿದೀಪ: ವಿಠ್ಠಲಗೌಡ ಪಾಟೀಲ

(ಸಂಜೆವಾಣಿ ವಾರ್ತೆ)
ಇಂಡಿ: ಸೆ.16:ಗಡಿ ಭಾಗದಲ್ಲಿ ಅನೇಕ ಶರಣ- ಸಂತ ಮಹಾಂತರು ದಾರ್ಶನಿಕ ಯುಗಪುರುಷರು ನಡೇದಾಡಿ ಈ ಭಾಗದ ಜನರಿಗೆ ಸಂಸ್ಕಾರಯುತ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸುಪುತ್ರ ಯುವ ನಾಯಕ ವಿಠ್ಠಲಗೌಡ ಪಾಟೀಲ ಹೇಳಿದರು.
ಪಟ್ಟಣದ ಅಗರಖೇಡ ರಸ್ತೆಯ ಸುಕ್ಷೇತ್ರ ಲಚ್ಯಾಣ ಮುಖ್ಯ ಪ್ರವೇಶ ದ್ವಾರದ ಮೇಲ್ಭಾಗದ ಸುಕ್ಷೇತ್ರ ಶ್ರೀ ಸಿದ್ದಲಿಂಗ ಮಹಾರಾಜರ ಹಾಗೂ ಭಂಥನಾಳ ಸಂಗನಬಸವ ಮಹಾಸ್ವಾಮಿಗಳ ನೂತನ ಮೋರ್ತಿ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದ ಅವರು ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿದ್ದ ಅನೇಕ ಪುಣ್ಯಕ್ಷೇತ್ರಗಳಿವೆ . ಇಂಡಿ ತಾಲೂಕಿನಾದ್ಯೆಂತ ಲಚ್ಯಾಣದ ಶ್ರೀಸಿದ್ದಲಿಂಗ ಮಹಾರಾಜರು, ಭಂಥನಾಳದ ಶ್ರೀಸಂಗನಬಸವ ಮಹಾಸ್ವಾಮಿಗಳು, ಗೋಳಸಾರದ ಶ್ರೀಪುಂಡಲಿಂಗ ಶಿವಯೋಗಿಗಳು, ಮಿರಗಿ ಯಲ್ಲಾಲಿಂಗ ಮಹಾರಾಜರು ಈ ಭಾಗದ ಜನರಿಗೆ ಸಂಸ್ಕಾರ ನೀಡಿರುವದರಿಂದಲೇ ಇಲ್ಲಿನ ಜನರು ಪ್ರೀತಿ, ವಿಶ್ವಾಸದ ಸಾಮರಸ್ಯ ಜೀವನಸಾಗಿಸುತ್ತಿದ್ದಾರೆ.
ನಂಜುಂಡಪ್ಪ ವರದಿಯಂತೆ ವಿಜಯಪೂರ ಜಿಲ್ಲೆ ಅದರಲ್ಲಿ ಸಿಂದಗಿ- ಇಂಡಿ ಬರಕ್ಕೆ ಹೆಸರು ಪಡೆದರೂ ಕೂಡಾ ಈ ಭಾಗದ ಜನರ ಭಕ್ತಿ ಭಾವಕ್ಕೆ ಬರ ಕಿಂಚಿತ್ತೂ ಕೊರತೆಯಿಲ್ಲ, ದೇವರ ಭಯವೇ ಜ್ಞಾನಕ್ಕೆ ಮೂಲ ಎನ್ನುವಂತೆ ಸಾರ್ವಜನಿಕ ಜೀವನದಲ್ಲಿ ದೇವರ ಬಗ್ಗೆ ನಂಬಿಕೆ ಇರಬೇಕು. ಪ್ರಪಂಚದಲ್ಲಿ ಒಂದು ಹುಲ್ಲು ಕಡ್ಡಿ ಅಲುಗಾಡಲು ದೇವರ ಸದ್ದೀಚ್ಚೇಯಿಂದ ಮಾತ್ರ ಸಾಧ್ಯೆ ಎಂದರು.
ಶ್ರೀಸಿದ್ದಲಿಂಗ ಮಹಾರಾಜರ ಹಾಗೂ ಭಂಥನಾಳದ ಶ್ರೀಸಂಗನಬಸವ ಮಹಾಸ್ವಾಮಿಗಳ ಮೋರ್ತಿ ಪಟ್ಟಣದ ಶಿವಾಜಿ ಸರ್ಕಲ್‍ದಿಂದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮಾಡಿ ಅಗರಖೇಡ ರಸ್ತೆಯ ಮಹಾದ್ವಾರಕ್ಕೆ ಬಂದು ತಲುಪಿತು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಶ್ರೀಕಾಂತ ಕುಡಿಗನೂರ, ಎ.ಪಿ ಕಾಗವಾಡ, ಚಂದು ದೇವರ, ಪ್ರಕಾಶ ಕಂಬಾರ, ಸತೀಶ ಕುಂಬಾರ, ಸುಧೀರ ಕರಕಟ್ಟಿ, ಭೀಮಾಶಂಕರ ಮೂರಮನ್, ಅವಿನಾಶ ಬಗಲಿ, ಜಾವೀದ ಮೋಮಿನ್, ಹಣಮಂತ ಅರವತ್ತು, ಅನೀಲಗೌಡ ಬಿರಾದಾರ,ಶಿವಾನಂದ ಬಿಸನಾಳ ,ರಾಮಸಿಂಗ ಕನ್ನೋಳ್ಳಿ ,ಮಲ್ಲೇಶಿ ಮುಜಗೊಂಡ, ದುಂಡು ಮುಜಗೊಂಡ, ಶಂಕರಗೌಡ ಬಿರಾದಾರ ಲಚ್ಯಾಣದ ಬ್ರಹ್ಮಾನಂದ ಜೇವೂರ ಸೇರಿದಂತೆ ಅನೇಕ ಭಕ್ತರು ಇದ್ದರು.