ಜನರ ವಿಶ್ವಾಸಕ್ಕೆ ಕಾಂಗ್ರೆಸ್ ದ್ರೋಹವೆಸಗುವುದಿಲ್ಲ:ಸಚಿವ ಪಾಟೀಲ

ಬಸವನಬಾಗೇವಾಡಿ:ಜೂ.6: ರಾಜ್ಯದ ಜನತೆ ಕಾಂಗ್ರೆಸ ಪಕ್ಷದ ಮೇಲೆ ವಿಶ್ವಾಸವಿಟ್ಟು ನಮ್ಮ ಪಕ್ಷಕ್ಕೆ ನಿಚ್ಚಳ ಬಹುಮತ ನೀಡಿದ್ದಾರೆ ಜನರ ವಿಶ್ವಾಸಕ್ಕೆ ನಮ್ಮ ಪಕ್ಷ ದ್ರೋಹ ಬಗಯುವುದಿಲ್ಲ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಯನ್ನ ಜಾರಿ ಮಾಡುವ ಮೂಲಕ ಕೊಟ್ಟ ಭರವಸೆಯನ್ನ ಈಡೇರಿಸುವ ಮೂಲಕ ಮತ ಹಾಕಿದ ಜನರ ಋಣ ತೀರಿಸುವ ಕೆಲಸವನ್ನ ಕಾಂಗ್ರೆಸ ಪಕ್ಷ ಮಾಡಿದೆ. ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಬಸವ ಬವನದಲ್ಲಿ ಕಾಂಗ್ರೆಸ ತಾಲೂಕ ಘಟಕದಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು. ಮಹಿಳಿಯರು ನಮಗೆ ಮತ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ ಅಧಿಕಾರಕ್ಕೆ ಬಂದರೆ 5 ಗ್ಯಾರೆಂಟಿ ನೀಡುವುದಾಗಿ ಚುನಾವಣೆಯಲ್ಲ ನಮ್ಮ ಪಕ್ಷದ ನಾಯಕರು ಭರವಸೆಯನ್ನ ಕೊಟ್ಟಿದ್ದರು ಅದರಂತೆ ನಾವು ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆಯನ್ನ ಜಾರಿಗೊಳಿಸಿದ್ದೆವೆ.
ರಾಜ್ಯದಲ್ಲಿ ಕಾಂಗ್ರೆಸಗೆ ನಿಚ್ಚಳ ಭವಿಷ್ಯ ಕೊಟ್ಟ ಜನತೆಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದರು.

ರಾಜ್ಯದ ಜನತೆ ಕಾಂಗ್ರೆಸಗೆ
ಕೊಟ್ಟ ಮತ ವ್ಯತ್ತ ವಾಗಲಿಲ್ಲ ಸಮಾಜದ ಪರಿವರ್ತನೆಗೆ ದಾರಿಯಾಗಿದೆ.
ಮುಂಭರುವ ದಿನಗಳಲ್ಲಿ ದೇಶದಲ್ಲಿಯೇ ನಮ್ಮ ರಾಜ್ಯ ಮಾದರಿಯಾಗಲಿದೆ.

ಚುನಾವಣೆ ಅಂದ ಮೇಲೆ ನಿಂದನೆ ಸಹಜ.
ನಿಂದನೆ ಮಾಡಿದವರನ್ನ ಸ್ವಾಗತಿಸಬೇಕು ಅಂತವರನ್ನ ಬಸವಣ್ಣ ಕೈ ಹಿಡಿಯುತ್ತಾನೆ.

ನಮ್ಮ ಪಕ್ಷದ ವರಿಷ್ಠರ ಮೇಲೆ ನಂಬಿಕೆ ಇತ್ತು ಅದಕ್ಕಾಗಿ ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡದೇ ಬೆಂಗಳೂರಿನಲ್ಲೆ ಇದ್ದೆ.
ಸಮಾಜಕ್ಕಾಗಿ ದುಡಿದವರನ್ನ ಸಮಾಜ ಕೈ ಬಿಡುವುದಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದರು.

ಇಂದು ನಾನು ಕೇವಲ ಶಾಸಕನಾಗದೆ ಸಚಿವನಾಗಿ ಮಾತನಾಡುತ್ತಿದ್ದೆನೆ ಎಂದರೇ ಅದು ನಿಮ್ಮ ಆಶೀರ್ವಾದ ಎಂದರು.

ಪ್ರತಿ ಚುನಾವಣೆಯಲ್ಲಿ ಹೊಲ ಮಾರಿದ್ದೆನೆ ಎಂದು ಜನರ ಮುಂದೆ ಸುಳ್ಳು ಹೇಳಿ ಚುನಾವಣೆಗೆ ನಿಲ್ಲುತ್ತಾರೆ. ಅವರಿಗೆ ದುಡ್ಡು ಎಲ್ಲಿಂದ ಬರುತ್ತದೆ ಎನ್ನುವುದನ್ನ ಜನ ಅರ್ಥ ಮಾಡಿಕೊಂಡಿದ್ದಾರೆ ಅವರಿಗೆ ಈ ಬಾರಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಚುನಾವಣೆಯಲ್ಲಿ ಯಾರು ನನಗೆ ಮತ ಹಾಕಿದ್ದಾರೆ ಯಾರು ಹಾಕಿಲ್ಲ ಎನ್ನುವದು ಎಲ್ಲ ನನಗೆ ಗೊತ್ತಿದೆ ಆದರೇ
ಮತ ಹಾಕದವರೇ ನನಗೆ ಮೊದಲು ಹಾರ ಹಾಕಲು ಬಂದಿದ್ದಾರೆ ಅದು ನನಗೆ ಗೊತ್ತಿದೆ . ಮುಂದೆ ನಾನು ಎಚ್ಚರದಿಂದ ಇರುತ್ತೆನೆ ನಿಮ್ಮ ಇಚ್ಚೆಯಂತೆ ನಾನು ನಿಮ್ಮ ಜೊತೆ ಇರುತ್ತೆನೆ. ಎಂದರು.

ನನ್ನ ಸೊಲಿಸಲು ಹೈದರಾಬಾದನಿಂದ ಪಕ್ಷ ತಂದರು ನನ್ನನ್ನು ಸೊಲಿಸಲು ಸಾಧ್ಯವಾಗಲಿಲ್ಲಾ ಎಂದರು.

ಮುಂಭರುವ ದಿನಗಳಲ್ಲಿ
ಇಡಿ ದೇಶವೇ ಬಂದು ಬಸವ ಜನ್ಮ ಸ್ಥಳವನ್ನ ನೋಡಬೆಕು. ಹಾಗೂ ಕ್ಷೇತ್ರವನ್ನ ನೀರಾವರಿ ಮಾಡಬೇಕು. ಜಿಲ್ಲೆಯಲ್ಲಿ ಕೋಲ್ಡ ಸ್ಟೋರೆಜ್ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಾಗಿ ಸಲಹೆಯನ್ನ ಕೊಟ್ಟಿದ್ದಾರೆ ನೀವು ಹೇಳಿರುವ ಬೇಡಿಕೆಯನ್ನ ಸಂಪೂರ್ಣ ಆಗದಿದ್ದರೂ ಬಹುತೇಕ ಬೇಡಿಕೆಯ ಈಡೇರಿಸುವಲ್ಲಿ ಪ್ರಾಮಾಣಿಕವಾಗಿ
ಪ್ರಯತ್ನಿಸುವೆ ಎಂದು ಭರವಸೆ ನೀಡಿದರು .

ಈ ಊರಿಗೆ ಇನ್ನು ಏನೇನೂ ಮಾಡಬೇಕು ಎನ್ನುವದು ನನ್ನ ಮನಸ್ಸಿನಲ್ಲಿದೆ ಹಂತ ಹಂತವಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರವನ್ನ ಮತ್ತಷ್ಟು ಅಭಿವೃದ್ದಿ ಪಡಿಸಲಾಗುವದು ಎಂದರು.

ಅಭಿವೃದ್ದಿಯೇ ನಮ್ಮ ಗುರಿ ಎಂದು ಕಾರ್ಯ ನಿರ್ವಹಿದರೆ ಕ್ಷೇತ್ರದ ಜನತೆ ಮುಂಭರುವ ಚುನಾವಣೆಯಲ್ಲಿ
50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತಿರಿ ಎಂಬ ನಂಬಿಕೆ ನನಗೆ ದಟ್ಟವಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯವಸಿಸಿದ್ದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಜಿಗಳು ಮಾತನಾಡಿ ಪಟ್ಟಣದ ಹೃದಯಬಾಗದಲ್ಲಿ ಬಯಲು ಶೌಚ ಮಾಡುವ ಜಾಗೆಯಲ್ಲಿ ಬೃಹತ್ ಬಸವ ಭವನ ನಿರ್ಮಿಸಿದ್ದಾರೆ. ಜಿಲ್ಲೆಯ
ದ್ರಾಕ್ಷಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೊಲ್ಡ ಸ್ಟೋರೆಜ್ ನಿರ್ಮಿಸುವಂತೆ ಮನವಿ ಮಾಡಿದರು.
ಸಿದ್ದಲಿಂಗ ಶ್ರೀ ಮಾತನಾಡಿ ವಿಶ್ವಗುರು ಬಸವೇಶ್ವರರ ಜನ್ಮ ಸ್ಥಳದಿಂದ ಶಾಸಕರಾಗಿ ಆಯ್ಕೆಯಾದ ಶಿವಾನಂದ ಪಾಟೀಲ ಅವರು ಬಸವೇಶ್ವರರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಶಿವಾನಂದ ಪಾಟೀಲ ಎಂದರೇ ಕಾಯಕ ಪ್ರಿಯ ಎಂಬಂತೆ ಕ್ಷತ್ರದ ಅಭಿವೃದ್ದಿಗೆ ಶ್ರಮಿಸಿದ್ದಾರೆ ಮುಂಭರುವ ದಿನಗಳಲ್ಲಿ ಬಸವನಬಾಗೇವಾಡಿಯನ್ನ ದೇಶವೇ ತಿರುಗಿ ನೋಡವಂತೆ ಅಭಿವೃದ್ದಿ ಪಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ ಚನ್ನಬಸವ ಶ್ರೀಗಳು ಮಾತನಾಡಿದರು.
ಆನಂದ ದೇವರು. ಮುಖಂಡರಾದ ಎಲ್ ಎನ್ ಅಗರವಾಲ. ಲ.ರು ಗೊಳಸಂಗಿ. ಎ.ಎಮ್ ಪಾಟೀಲ. ಅಶೋಕ ಹಾರಿವಾಳ. ಕಲ್ಲು ಸೊನ್ನದ. ಸುರೇಶಗೌಡ ಪಾಟೀಲ. ಚಂದ್ರಶೇಖರಗೌಡ ಪಾಟೀಲ. ಶೇಖರ ಗೊಳಸಂಗಿ. ರುಕ್ಮಿಣಿ ರಾಠೋಡ. ಮಲ್ಲಿಕಾರ್ಜುನ ನಾಯಕ. ಸಂಜು ಕಲ್ಯಾಣಿ. ಜಗದೇವಿ ಗುಂಡಳ್ಳಿ. ನಜೀರ ಗಣಿ. ಮತಾಬ ಬೊಮ್ಮನ್ನಳ್ಳಿ.
ರವಿ ನಾಯ್ಕೋಡಿ. ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು.