ಜನರ ಮನಸ್ಸಿಗೆ ಹತ್ತಿರದವ ಅಂಚೆಯವ ಃ ದ್ಯಾಮನಕೊಪ್ಪ

??

ಶಿಗ್ಗಾವಿ, ಡಿ 27- ಮಳೆ, ಚಳಿ, ಬೇಸಿಗೆ ಎನ್ನದೆ ಅಂಚೆಯವರ ಕಾರ್ಯ ಜನರಿಗೆ ನೇರವಾಗಿ ತಲಪುತ್ತದೆ ಮತ್ತು ಜನರಲ್ಲಿ ಬಾಂದವ್ಯ ಬೆಸೆಯುವ ಕೊಂಡಿಯಾಗಿದೆ. ಅಂಚೆ ನೀಡುವದರೊಂದಿಗೆ ಅನಕ್ಷರಸ್ತರಿಗೆ ಓದಿಹೇಳಿ ನೋವು ನಲಿವಿನ ಸಂದೇಶ ನೀಡುವ ಮೂಲಕ ಜನರ ಮನಸ್ಸಿಗೆ ಹತ್ತಿರದ ವ್ಯಕ್ತಿಯಾಗಿರುತ್ತಾನೆ ಅಂಚೆಯವನು ಎಂದು ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಹೇಳಿದರು.
ಪಟ್ಟಣದ ಶ್ರೀಚನ್ನಪ್ಪ ಕುನ್ನೂರ ಪ್ರೌಢ ಶಾಲೆ ಸಭಾ ಭವನದಲ್ಲಿ ತಾಲೂಕಿನ ಅಂಚೆ ಇಲಾಖೆ ಸಿಬ್ಬಂದಿಗಳ ವತಿಯಿಂದ ಅಂಚೆ ಇಲಾಖೆಯ ನಿರೀಕ್ಷಕ ಮೋಹನ ಮಾಳೋದೆ ಬಿಳ್ಕೋಡುಗೆ ಸಮಾರಂಭ ಹಾಗೂ ಅದೇ ಸ್ಥಾನಕ್ಕೆ ನೂತನವಾಗಿ ಆಗಮಿಸಿದ ವೆಂಕಟೇಶ ಅವರಿಗೆ ಸ್ವಾಗತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಯಾವುದೇ ಇಲಾಖೆಯ ನೌಕರರನ್ನು ಗುರುತಿಸುವುದು ಅವರ ವ್ಯಕ್ತಿಗತ ಮತ್ತು ಅವರ ಕಾರ್ಯವೈಖರಿಯ ಮೇಲೆ ಅವಲಂಬನೆಯಾಗಿರುತ್ತದೆ ಎಂದರು. ಎಲ್ಲ ಇಲಾಖೆಗಳಿಗಿಂತ ಜನರ ಪ್ರೀತಿಗೆ ಪಾತ್ರವಾದ ಇಲಾಖೆ ಅಂಚೆ ಇಲಾಖೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರೀಕ್ಷಕ ಮೋಹನ ಮಾಳೋದೆ ಸರಕಾರಿ ಕೆಲಸ ದೇವರ ಕೆಲಸ. ಇಲಾಖೆ ಒಂದು ಮನೆ ಇದ್ದಂತೆ ಎಲ್ಲ ಸಿಬ್ಬಂದಿಗಳು ಸಹೋದರತೆಯೊಂದಿಗೆ ಕಾರ್ಯ ಮಾಡಿದರೆ ಇಲಾಖೆಯ ಕೀರ್ತಿಯೊಂದಿಗೆ ನಾವು ಜನರಿಗೆ ಹತ್ತಿರವಾಗುತ್ತೇವೆ, ಆದ್ದರಿಂದ ನಮ್ಮ ಹತ್ತಿರ ಎಷ್ಟು ಒಳ್ಳೆಯ ಕೆಲಸ ಮಾಡಲು ಸಾದ್ಯವೊ ಅದನ್ನು ಮಾಡಲು ಭದ್ದರಾಗಬೇಕು ಹೊರತು ಇತರರಿಗೆ ತೊಂದರೆ ಮಾಡಿ ಸುಖ ಪಡುವುದರಲ್ಲಿ ಅರ್ಥವಿಲ್ಲ ಎಂದರು.
ಅಂಚೆ ಸಿಬ್ಬಂದಿಗಳು ಅಂಚೆ ನಿರೀಕ್ಷಕ ಮೋಹನ ಅವರು ತಮಗೆ ನೀಡಿದ ಅನುಭವ ಮತ್ತು ಸಲಹೆಗಳ ಕುರಿತು ಮಾತನಾಡಿ ಅವರು ಇನ್ನೂ ಉನ್ನತ ಸ್ಥಾನ ಅಲಂಕರಿಸಲಿ ಎಂದು ಹಾರೈಸಿದರು.
ಅಂಚೆ ಇಲಾಖೆಯ ಪ್ರಮೋದ, ಬಸವರಾಜ, ಪದ್ಮರಾಜ ಗೊಟಗೋಡಿ, ವಿಠಲ ಬೇಂದ್ರೆ, ಎಚ್.ಎನ್.ಪಾಟೀಲ ಅಂಚೆ ನಿರೀಕ್ಷಕ ಮೋಹನ ಮಾಳೋದೆ ಬೀಳ್ಕೋಡುಗೆ ಹಾಗೂ ನೂತನ ಅಂಚೆ ನಿರೀಕ್ಷಕ ವೇಂಕಟೇಶ ಹೆಚ್ ಅವರಿಗೆ ಸ್ವಾಗತ ಕೋರಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಅಂಚೆ ಇಲಾಖೆ ಶಿಗ್ಗಾವಿ ಹಾಗೂ ಗ್ರಾಮೀಣ ಅಂಚೆ ಇಲಾಖೆ ನೌಕರರ ಸಂಘದ ಪರವಾಗಿ ಮೋಹನ ಮಾಳೋದೆ ಅವರನ್ನು ಸತ್ಕರಿಸಿ ಗೌರವಿಸಿದರು.
ಮಂಜುನಾಥ ಕಳಸೂರ, ರಾಜು ಕೋರ್ಪಡೆ, ಸಿ.ಬಿ.ಹುಲಿಕಟ್ಟಿ, ಹೆಚ್.ಎಸ್.ಪೋಲಿಸಗೌಡ್ರ, ಎಸ್.ಸಿ.ಪಾಟೀಲ, ಗಂಗಾಧರ ಅರಳೀಕಟ್ಟಿ, ಸಿ.ಕೆ.ಬಡಿಗೇರ, ಟಿ.ಬಿ.ಶೇಖಣ್ಣಾ, ಎಫ್.ಹೋಳಲು, ಎಸ್.ಕೆ.ಕುಲಕರ್ಣಿ ಸೇರಿದಂತೆ ತಾಲೂಕಿನ ಅಂಚೆ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.