
ಸಂಜೆವಾಣಿ ವಾರ್ತೆ
ಸಂಡೂರು:ಏ:7: ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ರವರ ಜನ್ಮದಿನದ ಆಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಡಿ ವೈ ಎಫ್ ಐ ತಾಲೂಕು ಸಾಂಸ್ಕೃತಿಕ ಕಾರ್ಯದರ್ಶಿ ನಾಗಭೂಷಣ ರವರು ಮಾತನಾಡಿ ಡಾ,ಬಾಬು ಜಗಜೀವನ ರಾಮ್ 05 ಏಪ್ರಿಲ್ 1908 ಜನಿಸಿದ್ದು “ಬಾಬೂಜಿ” ಎಂದು ಖ್ಯಾತರಾದ ಜಗಜೀವನ ರಾಮರವರು ಸ್ವಾತಂತ್ರ್ಯ ಹೋರಾಟಗಾರರು ಅಷ್ಟೇ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು ಇವರು ಕೃಷಿಗೆ ಮಹಾತ್ವ ನೀಡಿ ಹಸಿರು ಕ್ರಾಂತಿ ಹರಿಕಾರರಂದೇ ಪ್ರಖ್ಯಾತರಾದರು. ಇವರು ದಲಿತ ಯುವಜನತೆ ಮತ್ತು ಸಮುದಾಯ ಬಾಂಧವರು ಬೆಳೆಯುವ ಮೂಲಕ ಮುಂದಾಗಬೇಕು ಎಂದರು.
ಡಿ ವೈ ಫ್ ಐ ತೋರಣಗಲ್ಲು ಗ್ರಾಮ ಘಟಕದ ಉಪಾಧ್ಯಕ್ಷರಾದ ಪಾಲ್ ಫಕೀರ್ ಅವರು ಶುಭಕೋರಿ ಮಾತನಾಡಿ ದಲಿತ ಹಿರಿಯ ಮತ್ತು ಕಿರಿಯ ಬಂಧುಗಳಿಗೆ ಮತ್ತು ಒಡನಾಡಿಗಳಿಗೆ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಶುಭಾಶಯಗಳು ಎಂದು ಇವತ್ತಿನ ದಿನಮಾನಗಳಲ್ಲಿ ದಲಿತರು ಅಸ್ಪೃಶ್ಯತೆ ದೌರ್ಜನ ಒಳಗಾಗಿ ದಲಿತರಾಗಿ ಉಳಿಯುತ್ತಿದ್ದಾರೆ ಸೌಲಭ್ಯಗಳ ವಂಚಿತರಾಗಿದ್ದಾರೆ ಹಾಗಾಗಿ ಡಾಕ್ಟರ್ ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್, ಭಗತ್ ಸಿಂಗ್ ರಂತಹ ಹಲವಾರು ಕ್ರಾಂತಿಕಾರಿಗಳ, ಹೋರಾಟಗಾರರ ತ್ಯಾಗ ಬಲಿದಾನ ಪ್ರತೀಕ ನಮ್ಮ ದೇಶ ಭಾರತ ಸ್ವಾತಂತ್ರವಾಯಿತು. ಹಾಗಾಗಿ ಮುಂದಿನ ಬಡಜನರ ಅಭಿವೃದ್ದಿ ಏಳಿಗೆಗಾಗಿ ಎಲ್ಲಾರೂ ಒಗ್ಗಟಾಗಿ ಮುಂದಾಗಿ ಶ್ರಮಿಸಿ ಈ ಸಮಾಜದ ಪ್ರತಿಯೊಬ್ಬರ ಪ್ರಜ್ಞೆ ಪೂರಕ ಜ್ಞಾನಿ ಮತ್ತು ಉದ್ಯೋಗಿಯಂತೆ ಸರಿಸಮಾನವಾಗಿ ಸೌಲಭ್ಯಗಳನ್ನು ಪಡೆಯುವ ಮೂಲಕ ಬದುಕಬೇಕು ಈ ದೇಶದಲ್ಲಿ ಜಾತಿ , ಧರ್ಮ ಭೇದವಿಲ್ಲದೆ ಸೌಹಾರ್ದವಾಗಿರಬೇಕೆಂಬುದು ಆಶಯ ಎಂದರು.
ದಲಿತ ಯುವಕರ ಸಂಘದ ಅಧ್ಯಕ್ಷರಾದ ಆಂಜನಿಪ್ಪ ರವರು ಮಾತನಾಡಿದರು, ಸಂಘಟನೆ ಹಲವು ಕಾರ್ಯಕ್ರಮಗಳು ಮಾಡಲಾಗಿದ್ದು ಅವಿಸ್ಮರಣೀಯ, ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲಿ ನಮ್ಮ ಸಂಘಟನೆ ಮತ್ತು ನಮ್ಮ ಸಮುದಾಯವು ಬೆಂಬಲವಿರುತ್ತದೆ ಎಂದರು
ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡರುಗಳಾದ ಚನ್ನಬಸಪ್ಪ, ಪರಮೇಶಪ್ಪ, ಕೆಂಪ ಹನುಮಂತಪ್ಪ ದಲಿತ ಯುವಕರ ಸಂಘದ ಮುಖಂಡರಾದ ಅಂಜೀನಪ್ಪ, ಹೊನ್ನೂರಪ್ಪರಾಮಸಾಗರ, ಅಂಜಿನಿ ರಾಮಚಂದ್ರಪ್ಪ, ದುರ್ಗಾಪ್ರಸಾದ್, ಕೊಡಲ ಹನುಮಂತಪ್ಪ , ಬಾಬು ದೇವಣ್ಣ, ಶಂಕ್ರಪ್ಪ ಓ ಹನುಮಂತ ಓರ್ ಬಾವಿ ಗುತ್ತಿಗನೂರು ,ಹನುಮಂತ , ಜಿಲ್ಲಾ ಕಾರ್ಯದರ್ಶಿ ಸ್ವಾಮಿ ತಾಲ್ಲೂಕು ಅಧ್ಯಕ್ಷರು ಶಿವು ಸಾಂಸ್ಕೃತಿಕ ಕಾರ್ಯದರ್ಶಿ ನಾಗಭೂಷಣ, ಮುಖಂಡರಾದ ಲೋಕೇಶ್, ಅಕ್ಷಯ್,ಅನಿಲ್ ಉಪಸ್ಥಿತರಿದ್ದರು.