
ಹುಮನಾಬಾದ್ :ಮಾ.11: ವಿಧಾನ ಸಭೆ ಚುನಾವಣೆ ಸಮಿಪಿಸುತ್ತಿರುವ ಹಿನ್ನಲೆ ಮತದಾರರ ಮತ ಸೆಳೆಯಲು ಸ್ಥಳೀಯ ಶಾಸಕರು ಕುಕ್ಕರ್ ವಿತರಣೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸಿಎಂ. ಫೈಜ್ ಆರೋಪಿಸಿದರು.
ಪಟ್ಟಣದ ಡಾಕ್ಟರ್ ಕಾಲೋನಿಯ ಜೆಡಿಎಸ್ ಗೃಹ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು, ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಮಾತೃ ನಮನ ಕಾರ್ಯಕ್ರಮಕ್ಕೆ ಬಂದವರಿಗೆ ಕುಕ್ಕರ್ ನೀಡುವುದಾಗಿ ಪ್ರಚಾರ ಮಾಡುವ ಮೂಲಕ ಜನ ಬೆಂಬಲದ ತೋರಿಕೆಯ ಹಿನ್ನಲೆ ಶಾಸಕ ರಾಜಶೇಖರ ಪಾಟೀಲ್ ಜನರ ಜೀವನದ ಜತೆಯಲ್ಲಿ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇತ್ತಿಚೇಗೆ ಚಾಲನೆ ನೀಡಲಾದ 10 ಕೋಟಿಯ ಅನುದಾನದಲ್ಲಿ ಗುತ್ತಿಗೆದಾರರು ನೀಡಿದ ಕಿಕ್ ಬ್ಯಾಕ್ ಅಮೌಂಟ್‍ನಿಂದ ಈ ಕುಕ್ಕರ್ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಕ್ಷೇತ್ರದಾದ್ಯಂತ ಕುಕ್ಕರ್ ವಿತರಣೆ ಮಾಡುತ್ತೆವೆ ಎಂದು ಸ್ವತಃ ಶಾಸಕರೇ ಹೇಳಿದ್ದಾರೆ. ಶಾಸಕರು ಅಭಿವೃದ್ಧಿ ಕೆಲಸ ಮಾಡುವ ಬದಲು ಕುಕ್ಕರ್ ವಿತರಣೆ ಮಾಡುದರ ಮೂಲಕ ಮತ ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸ್ವತಃ ಶಾಸಕ ರಾಜಶೇಖರ ಪಾಟೀಲ್ ಅವರೇ ಮಹಿಳೆಯರೊಂದಿಗೆ ಮಾತನಾಡಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದೆ. ಈ ಹಿನ್ನಲೆ ನಮ್ಮ ಕಾರ್ಯಕರ್ತರ ಮೂಲಕ ನಿಮ್ಮ ಮನೆ ಬಾಗಿಲಿಗೆ ಕುಕ್ಕರ್ ಕಳಿಸುತ್ತೆನೆ ಎಂದು ಹೇಳಿದ್ದಾರೆ. ಮನೆ ಬಾಗಿಲಿಗೆ ಕುಕ್ಕರ್ ಕಳಿಸುವ ಯೋಜನೆ ಇದ್ದರೆ, ರಾತ್ರಿ ಹೊತ್ತಿನಲ್ಲಿ ಪಟ್ಟಣಕ್ಕೆ ಮಹಿಳೆಯರನ್ನು ಕರೆತರುವ ಅವಶ್ಯಕತೆ ಇತ್ತಾ ಎಂದರು.
ಪೆÇಲೀಸ್ ಅಧಿಕಾರಿಗಳು ಸೋ ಮೋಟೋ ಪ್ರಕರಣ ಯಾಕೆ ದಾಖಲು ಮಾಡಿಲ್ಲ. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಪ್ರಕರಣ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕುಕ್ಕರ ವಿತರಣೆಗೆ ಹಣ ಎಲ್ಲಿಂದ ಬಂತ್ತು. ಕುಕ್ಕರ್ ವಿತರಣೆ ವೇಳೆ ಗಾಯವಾದ ಇಬ್ಬರು ಮಹಿಳೆಯರು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡರಾದ ಎ.ಎಮ್. ಕುಲಕರ್ಣಿ, ಶಿವರಾಜ ಹುಲಿ, ಬಾಬು ಬುಕಾರಿ, ಶಿವಪುತ್ರ ಮಾಳಗೆ, ರೇಖಾ ಬಾಜಿ, ಮೊಯಿಜ್ ಚಿಟಗುಪ್ಪ, ರೇಖಾ ಬಾಚಾ ಸೇರಿ ಅನೇಕರಿದ್ದರು.