ತಿರುವನಂತಪುರ, ಜು.೧- ಏಕರೂಪ ನಾಗರಿಕ ಸಂಹಿತೆ ಮೂಲಕ ಜನರ ಭಾವನೆ ಕೆರಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೂರಿದ್ದಾರೆ.
ಭಾರತದ ಬಹುತ್ವವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ವಿರೋಧಿಸೋಣ ಮತ್ತು ಸಮುದಾಯಗಳಲ್ಲಿ ಪ್ರಜಾಪ್ರಭುತ್ವ ಚರ್ಚೆಗಳ ಮೂಲಕ ಸುಧಾರಣೆಗಳನ್ನು ಬೆಂಬಲಿಸೋಣ, ”ಎಂದು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯು ಕೋಮು ವಿಭಜನೆಯನ್ನು ಆಳಗೊಳಿಸಲು ತಮ್ಮ ಬಹುಸಂಖ್ಯಾತ ಅಜೆಂಡಾವನ್ನು ಒತ್ತಿಹಿಡಿಯಲು ಸಂಘಪರಿವಾರದ ಚುನಾವಣಾ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ
ಈ ಸಂಬಂದ ಟ್ವೀಟ್ ಮಾಡಿರುವ ಅವರು ಏಕರೂಪ ನಾಗರಿಕ ಸಂಹಿತೆಭಾರತೀಯ ಬಿಜೆಪಿ “ಚುನಾವಣಾ ಕಾರ್ಯಸೂಚಿ” ಯಲ್ಲಿದೆ ಈ ಮೂಲಕ ಧರ್ಮಗಳನಡುವೆ ವಿಭಜನೆಯ ಮಾರ್ಗ ಹಿಡಿದಿದ್ದಾರೆ ಎಂದು ದೂರಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡಲು ಆ ಮೂಲಕ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರ ಮೇಲೆ ಮಾನಸಿಕವಾಗಿ ಪ್ರಭಾವ ಬೀರುವ ಹುನ್ನಾರ ನಡೆಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಡೆಯನ್ನು ಎಲ್ಲರೂ ವಿರೋದಿಸೋಣ ಈ ಮೂಲಕ ಬಹುತ್ವವನ್ನು ಅಲುಗಾಡಿಸುವ ಪ್ರಯತ್ನದ ವಿರುದ್ದ ಹೋರಾಟ ಮಾಡೋಣ ಎಂದು ಅವರು ತಿಳಿಸಿದ್ದಾರೆ.