ಜನರ ಭಾವನೆಗಳನ್ನು ಒಡೆಯುವ ಬಿಜೆಪಿ ಸರ್ಕಾರ-ಬಿ.ವಿ ನಾಯಕ

ಭಾರತ ಜೋಡೋ ಭಾರತ ಐಕ್ಯತಾ ಯಾತ್ರೆ ಪೂರ್ವಭಾವಿ ಸಭೆ
ಲಿಂಗಸುಗೂರು.ಸೆ.೧೧- ಇಂದಿನ ಬಿಜೆಪಿ ಸರ್ಕಾರ ಜನರ ಭಾವನೆಗಳನ್ನು ಒಡೆದು ಜಾತಿ, ಧರ್ಮಗಳ ಮಧ್ಯೆ ಭೇದ-ಭಾವ ಮಾಡಿ ಜನರಲ್ಲಿ ತಾರತಮ್ಯ ಮೂಡಿಸುವ ಬಿಜೆಪಿ ಸರ್ಕಾರ ಎಂದು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಬಿ.ವಿ ನಾಯಕ ಹೇಳಿದರು.
ಪಟ್ಟಣದ ಶಾಸಕರ ಕಾರ್ಯಲಯದಲ್ಲಿ ಭಾರತ ಜೋಡೋ ಭಾರತ ಐಕ್ಯತಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನರಲ್ಲಿ ಇರುವ ಏಕತೆಯನ್ನು ಒಡೆದು ದೇಶ ಆಳು ಮಾಡುವ ಸರ್ಕಾರವಾಗಿದೆ. ದೇಶದಲ್ಲಿ ಹಿಂದೂ, ಮುಸ್ಲಿಂರಿಗೆ ಜಗಳ ಹೆಚ್ಚಿ ರಾಜಕೀಯ ಮಾಡುವ ಬಿಜೆಪಿ ಸರ್ಕಾರ, ಮುಂದಿನ ದಿನಮಾನದಲ್ಲಿ ಬಿಜೆಪಿ ತಕ್ಕಪಾಠ ಕಲಿಸಬೇಕು, ಕಾಂಗ್ರೆಸ್ ಕಾರ್ಯಕರ್ತರು ಪಣ ತೊಟ್ಟು ನಿಲ್ಲಬೇಕು. ಬಿಜೆಪಿ ಅಳಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಭಾರತ ಜೋಡೂ ಯಾತ್ರೆ ಮಾಡುವುದು ರಾಜಕೀಯಕ್ಕಾಗಿ ಅಲ್ಲ ಜನರ ಮನಸ್ಸುಗಳನ್ನು ಒಂದಾಗಿಸಿ ಜನರಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳುವ ಸಲುವಾಗಿ ಜೋಡೋ ಯಾತ್ರೆ ಆರಂಭ ಮಾಡಿದೆ ಎಂದರು.
ಭಾರತ ದೇಶ ಸಮಗ್ರವಾಗಲಿ, ದೇಶ ಏಕತೆಯಿಂದ ಇರಲಿ ಎಂದು ಜೋಡೋ ಯಾತ್ರೆ ರಾಹುಲ್ ಗಾಂಧಿ ಮಾಡಿದ್ದಾರೆ, ಜೋಡೋ ಯಾತ್ರೆ ಯಶ್ವಸಿಗೊಳಿಸಿ ಕ್ಷೇತ್ರದ ಮತದಾರರು ಕಾರ್ಯಕ್ರಮ ಯಶ್ವಸಿಗೊಳಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಶಾಸಕ ಡಿ,ಎಸ್ ಹೂಲಗೇರಿ, ಕೆಪಿಸಿಸಿ ಕಾರ್ಯದರ್ಶಿ ವಸಂತಕುಮಾರ, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಪಾಮಯ್ಯ ಮುರಾರಿ, ಶರಣಪ್ಪ ಮೇಟಿ, ಡಿ,ಜಿ ಗುರಿಕಾರ ಮಾತನಾಡಿದರು.
ಈ ಸಂದರ್ಭದಲ್ಲಿ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವುದ್, ಪುರಸಭೆ ಉಪಾಧ್ಯಕ್ಷ ಮಹ್ಮದ್ ರಫಿ, ವಾಹಿಧ್ ಖಾದ್ರಿ, ವೆಂಕಟೇಶ ಗುತ್ತೆದಾರ, ಮಹಾಂತೇಶ ಪಾಟೀಲ್, ನಿಂಗಪ್ಪ ಮನಗೂಳಿ, ಪರಶುರಾಮ ನಗನೂರು, ಶಿವಾನಂದ ಐದನಾಳ, ಹೊನ್ನಪ್ಪ ಮೇಟಿ ಸೇರಿದಂತೆ ಕಾರ್ಯಕರ್ತರು ಇದ್ದರು.