ಜನರ ಭರವಸೆಯ ಪಕ್ಷ ಆಮ್ ಆದ್ಮಿ- ರುದ್ರಯ್ಯ ನವಲಿ

ಸಿಂಧನೂರು.ಮಾ.೨೯- ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಜನಪರ ಯೋಜನೆಗಳ ಜಾರಿಗಾಗಿ ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ರುದ್ರಯ್ಯ ಹಿರೇಮಠ ನವಲಿ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡರು.
ನಗರದ ಪಕ್ಷದ ಕಛೇರಿಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿತನಕ ರಾಜ್ಯದಲ್ಲಿ ಅಧಿಕಾರ ನಡೆಸಿದ ವಿವಿಧ ರಾಜಕೀಯ ಪಕ್ಷಗಳು ಯಾವುದೆ ಅಭಿವೃದ್ಧಿ ಮಾಡದೆ ಜನರಿಗೆ ಮೋಸ ಮಾಡುವ ಮೂಲಕ ಭ್ರಷ್ಟಾಚಾರ ನಡೆಸಿವೆ. ದೆಹಲಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವ ಮೂಲಕ ಆಮ್‌ಆದ್ಮಿ ಪಕ್ಷ ಜನರ ಬರವಸೆಯ ಪಕ್ಷವಾಗಿದೆ. ಆ ಕಾರಣಕ್ಕಾಗಿ ಜನ ಮತ ನೀಡಿ ಪಂಜಾಬಿನಲ್ಲಿ ಅಧಿಕಾರಕ್ಕೆ ತಂದಿದ್ದಾರೆ ಎಂದರು.
ಸರ್ವೆ ನಡೆಸಿ ಪಕ್ಷದ ಸಂಘಟನೆ ಗುರುತಿಸಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೇಟ ನೀಡಲಾಗಿದೆ. ಸಿಂಧನೂರು ಕ್ಷೇತ್ರದಿಂದ ಯುವಕರಾದ ಸಂಗ್ರಾಮ ಕಿಲ್ಲೇದ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಕ್ಷೇತ್ರದ ಮತದಾರರಲ್ಲಿ ಹಿರೇಮಠ ಮನವಿ ಮಾಡಿಕೊಂಡರು.
ಇಲ್ಲಿತನಕ ತಾಲ್ಲೂಕಿನಲ್ಲಿ ಆಡಳಿತ ನಡೆಸಿದ ಶಾಸಕರು, ಸಂಸದರು, ಸಚಿವರು ಯಾವುದೆ ಅಭಿವೃದ್ಧಿ ಕೆಲಸ ಮಾಡಿಲ್ಲ. ಇದರಿಂದ ಜನ ಬೇಸರ ಗೊಂಡು ಬದಲಾವಣೆಯನ್ನು ಬಯಸಿದ್ದಾರೆ. ಪಕ್ಷ ನನಗೆ ಟಿಕೆಟ್ ನೀಡಿದೆ ನನಗೆ ಮತ ನೀಡಿ ಗೆಲ್ಲಿಸುವ ಮುಲಕ ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡುವಂತೆ ಆಮ್ ಆದ್ಮಿ ಪಕ್ಷದ ವಿಧಾನಸಭೆಯ ಅಭ್ಯರ್ಥಿಯಾದ ಸಂಗ್ರಾಮ ಕಿಲ್ಲೇದ ಮತದಾರರಲ್ಲಿ ಮನವಿ ಮಾಡಿಕೊಂಡರು.
ತಾಲ್ಲೂಕಿನಲ್ಲಿ ವಿವಿಧ ಪಕ್ಷಗಳ ಮುಖಂಡರು ಶಾಸಕರಾಗಿದ್ದು, ಆದರೆ ಹೇಳಿಕೊಳ್ಳುವಂತೆ ಒಂದೆ ಒಂದು ಉತ್ತಮ ಕೆಲಸ ಮಾಡಿದ ಉದಾಹರಣೆ ಇಲ್ಲ ಉದಾಹರಣೆಗೆ ಹಂಪನಗೌಡ ಬಾದರ್ಲಿ, ಶಾಸಕ ವೆಂಟರಾವ ನಾಡಗೌಡರ ಅಧಿಕಾರದ ಅವಧಿಯಲ್ಲಿ ಉದ್ಘಾಟನೆಯಾದ ನಿರಂತರ ಸುದ್ದ ಕುಡಿಯುವ ನೀರು ಹಾಗೂ ಯುಜಿಡಿ ಕಾಮಗಾರಿ ಸಂಪೂರ್ಣ ಮಾಡದೆ ಕಾಮಗಾರಿಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ.
ಇಲ್ಲಿತನಕ ನಗರದ ಜನರಿಗೆ ಸುದ್ದವಾದ ಕುಡಿಯುವ ನೀರು ಪೂರೈಸಲು ಆಗಿಲ್ಲ ಯಾಕೆ ಜಲದಾರೆ ಯೋಜನೆಯ ಹೆಸರಿನಲ್ಲಿ ಸಹ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಅಭ್ಯರ್ಥಿಗಳಿಗೆ ಮತನಿಡದೆ ನಮ್ಮ ಪಕ್ಷದ ಅಭ್ಯರ್ಥಿಯಾದ ಸಂಗ್ರಾಮ ಕಿಲ್ಲೇದವರನ್ನು ಗೆಲ್ಲಿಸಬೇಕು ಎಂದು ಪಕ್ಷದ ಮುಖಂಡರಾದ ಹೆಚ್.ವಿ.ಗುಡಿ ವಕೀಲರು ಜನರಲ್ಲಿ ಮನವಿ ಮಾಡಿಕೊಂಡರು.
ಪಕ್ಷದ ಮುಖಂಡರಾದ ಕೃಷ್ಣ ಸೇರಿದಂತೆ ಇತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತರಿದ್ದರು.