(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25: ಕೇಂದ್ರ ಸಚಿವ ಕೃಷ್ಣನ್ ಪಾಲ್ ಗುರ್ಜರ್ ಅವರು ನಗರದ 14ನೇ ವಾರ್ಡಿನ ಮಿಲ್ಲರ್ ಪೇಟೆಯಲ್ಲಿ ಮನೆ ಮನೆಗೂ ತೆರಳಿ ನಗರ ಶಾಸಕ ಸೋಮಶೇಖರ ರೆಡ್ಡಿ ಜೊತೆ ಮತಯಾಚನೆ ಮಾಡಿದರು.
ಬಿಜೆಪಿ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಕೇಂದ್ರ ಸರ್ಕಾರದಿಂದ ಬಡವರ್ಗದ ಜನರಿಗೆ ಬಂದಿರುವ ಯೋಜನೆಗಳ ಬಗ್ಗೆ ಕ್ಷೇತ್ರದ ಜನತೆಗೆ ತಿಳಿಸಲಾಯ್ತು.
ಈ ಸಂದರ್ಭದಲ್ಲಿ ಭಾಜಪ ಜಿಲ್ಲಾಧ್ಯಕ್ಷ ಮುರಾರಿಗೌಡ, ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷ ಶಿವಕೃಷ್ಣ, ಮುಖಂಡರಾದ ಜನಾರ್ದನ್, ದಿನೇಶ್, ವೀರೇಶ್, ಪರಶುರಾಮ್, ಮಚ್ಚಾ ಪ್ರಸಾದ್, ಮಹಾನಗರ ಪಾಲಿಕೆ ಸದಸ್ಯರಾದ ಇಬ್ರಾಹಿಂ, ಹಾಗೂ ಕೋನಂಕಿ ತಿಲಕ್,
ಡಾ. ಅರುಣ, ಸೆವೆನ್ ಹಿಲ್ಸ್ ಸತ್ಯ, ವೀರೇಶ್, ಜಿಸಿ ಕೃಷ್ಣಾರೆಡ್ಡಿ, ಹಾಗೂ ವಾರ್ಡಿನ ಮುಖಂಡರು ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.