ಜನರ ಬಲಿಗಾಗಿ ಯಮನಂತೆ ಕಾಯುತ್ತಿದೆ ಈ ತಗ್ಗು ಗುಂಡಿ


(ಸಂಜೆವಾಣಿ ವಾರ್ತೆ)
ಕುರುಗೋಡು, ಜ, 22 ಪಟ್ಟಣದ ದಿಂದ ಕಂಪ್ಲಿಗೆ ತೆರಳುವ ಮಾರ್ಗ ಮಧ್ಯದ ಕಲ್ಲುಕಂಬ ಕ್ರಾಸ್ ನಿಂದ ಸ್ವಲ್ಪ ದೂರ ಪ್ರಯಾಣಿಸಿದರೆ ಸಾಕು ಕಾಣುವುದೇ ಯಮನಂತೆ ಬಾಯ್ ತೆರೆದುಕೊಂಡಿರುವ ಈತಗ್ಗುಗುಂಡಿ. ಈ ತಗ್ಗು ಗುಂಡಿ ಜನರ ಬಲಿಗಾಗಿ ಯಮನಂತೆ ಕಾದುಕುಳಿತಿದೆ.
ಈ ಗುಂಡಿಯಲ್ಲಿ ದಿನನಿತ್ಯ ಬೈಕ್ ಸವಾರರು ಬಿದ್ದು ಹೇಳುವವರೆಷ್ಟು, ರಾತ್ರಿ ಸಮಯದಲ್ಲಿ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಜರುಗುತ್ತಿವೆ, ಈ ರಸ್ತೆ ಗುಂಡಿಯಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸರ್ಕಾರ ರಸ್ತೆಗಳಿಗಾಗಿ ಕೋಟಿಗಟ್ಟಲೆ ಅನುದಾನವನ್ನು ಕೊಟ್ಟು, ರಸ್ತೆಗಳ ಗುಣಮಟ್ಟಕ್ಕೆ ಆದ್ಯತೆ ನೀಡದೆ,
ಇದೇ ರಸ್ತೆಯಲ್ಲಿ ಜನಪ್ರತಿನಿಧಿಗಳು ದಿನನಿತ್ಯ ಸಂಚರಿಸುತ್ತಾರೆ, ಕಾರಿನೊಳಗೆ ಕುಳಿತುಕೊಂಡು ಹಲ್ಲಾಡುತ್ತಾ ಹೋದರೆ ಕೂಡ ಗುಂಡಿ ಕಾಣದೆ ಕುರುಡು ಮೌನಕ್ಕೆ ಜಾರಿದ್ದಾರೆ ಎಂದು ರಸ್ತೆಯಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರ ಅಳಲಾಗಿದೆ.
ಅನುದಾನ ರಸ್ತೆಗೋ ಅಥವಾ ಜನ ಪ್ರತಿನಿಧಿಗಳಿಗೋ, ಗುತ್ತಿಗೆದಾರರಿಗೋ ಹಾಗೂ ಅಧಿಕಾರಿಗಳ ಜೇಬಿಗೋ ಎಂಬ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದು ಅಪಸ್ವರಕ್ಕೆ ಕಾರಣವಾಗಿದೆ.
ಈ ರಸ್ತೆಯಲ್ಲಿ ದಿನನಿತ್ಯ  ನೂರಾರು ವಾಹನಗಳು, ಬಸ್‌ಗಳು ಈ ರಸ್ತೆಯಲ್ಲಿ ದಿನ ನಿತ್ಯ ಸಂಚರಿಸುತ್ತವೆ. ಇದರಿಂದಾಗಿ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ.ಈ ತಗ್ಗು ಗುಂಡಿ ದಾಟಿದರೆ ಸಾಕು ಸ್ವಿಮ್ಮಿಂಗ್ ಬಾಸವಾಗುತ್ತದೆ ಎನ್ನುತ್ತಾರೆ ಸುತ್ತಮುತ್ತಲಿನ ಹಳ್ಳಿಯ ಜನರು.
ರಸ್ತೆಗೆ ಸಂಬಂಧಪಟ್ಟ  ಜನಪ್ರತಿನಿಧಿಗಳು,ಅಧಿಕಾರಿಗಳು ಅಥವಾ ಗುತ್ತಿಗೆದಾರರು ಈ ರಸ್ತೆಯ ತಗ್ಗು ಗುಂಡಿಯನ್ನು ಸರಿಪಡಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.