ಜನರ ಬದುಕು-ಭಾವನೆಗಳ ಮಧ್ಯದ ಚುನಾವಣೆ ಇದು: ಹೆಚ್.ಕೆ ಪಾಟೀಲ

ಬೀದರ್: ಏ.21:ಈ ಲೋಕಸಭೆ ಚುನಾವಣೆ ರಾಜ್ಯದಲ್ಲಿ 10 ತಿಂಗಳಿಂದ ಅಡಳಿತ ನಡೆಸಿ ಪಂಚ ಗ್ಯಾರಂಟಿಗಳಿಂದ 1 ಕೋಟಿ 10 ಲಕ್ಷ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಆದರೆ ಬಿಜೆಪಿಯವರು ಕೇವಲ ಭಾವನಾತ್ಮಕ ಹೇಲಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ರಾಜ್ಯದ ಕಾನೂನು ಹಾಗೂ ಸಂಸದಿಯ ವ್ಯವಹಾರಗಳ ಸಚಿವರಾದ ಹೆಚ್.ಕೆ ಪಾಟೀಲ ಹೇಳಿದರು.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ಕೇಂದ್ರದಲ್ಲಿ ನಮ್ಮ ಸರ್ಕರ ಅಧಿಕಾರಕ್ಕೆ ಬಂದರೆ ಕರ್ನಾಟಕದ ಐದು ಮಾದರಿ ಪಂಚ ಗ್ಯಾರಂಟಿಗಳನ್ನು ದೇಶಕ್ಕೂ ವಿಸ್ತರಿಸಲಾಗುವುದು. ನಿರುದ್ಯೋಗದಿಂದ ತಾಂಡವವಾಡುತ್ತಿರುವ ಈ ದೇಶದಲ್ಲಿ ಮತ್ತೆ ಉದ್ಯೋಗ ಸೃಷ್ಟಿ ಮಾಡುವ ಕಾರ್ಯ ಮಾಡಲಿದ್ದೇವೆ. ಮೋದಿ ಅವರು ಕಳೆದ 10 ವರ್ಷಗಳ ಹಿಂದೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಎಲ್ಲಿದೆ ಹಣ? ಲಲಿತ ಮೋದಿ ಹಾಗೂ ನೀರವ ಮೋದಿ ಎಂಬ ಹೆಸರಿನವರು ವಿದೇಶಕ್ಕೆ ಹಾರಿದ್ದಾರೆ. ವಿಜಯ ಮಲ್ಯಾ ಪರಾರಿಯಾಗಿರುವನು. ಕಳ್ಳರನ್ನು ಕಟ್ಟಿ ಹಾಕಲು ಸಾಧ್ಯವಾಗದ ಇವರು ದೇಶವನ್ನು ಹೇಗೆ ಸುರಕ್ಷಿತವಾಗಿಡಲು ಸಾಧ್ಯ? ಎಂದು ಪ್ರಶ್ನೆ ಮಾಡಿದರು.
ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದಲ್ಲಿ ಬರುವ ಒಟ್ಟು 12 ಲೋಕಸಭೆ ಸೀಟುಗಳು ನಾವೇ ಗೆಲ್ಲುತ್ತೇವೆ. ರಾಜ್ಯದಲ್ಲಿ ಕನಿಷ್ಟ 20 ಸೀಟುಗಳು ಗೆಲ್ಲುವುದು ಪಕ್ಕಾ. ಬೀದರ್ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಕನಿಷ್ಟ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದಾರೆ: ಈಶ್ವರ ಖಂಡ್ರೆ
ಬೀದರ್: ಜಿಲ್ಲೆಯಲ್ಲಿ ಭಗವಂತ ಖೂಬಾ ಯಾವ ಕೊಡುಗೆ ಕೊಟ್ಟಿಲ್ಲ. ಒಂದು ಲಕ್ಷ ಕೋಟಿ ಅನುದಾನ ತಂದಿರುವುದಾಗಿ ಹಸಿ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಕಾಲಾವಧಿಯಲ್ಲಿದ್ದ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅತ್ಯಂತ ಕಳಪೆ ಮಟ್ಟದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿ ರಸ್ತೆ ಅಪಘಾತಕ್ಕೆ ದಾರಿ ಮಾಡಿ ಕೊಟ್ಟಿರುವರು. ಈ ಕಳಪೆ ಕಾಮಗಾರಿಯನ್ನು ತನಿಖೆಗೊಳಪಡಿಸಲಾಗಿದೆ. ಫಸಲ್ ಬಿಮಾ ಯೋಜನೆ ಇದು ದುಡ್ಡು ಹೊಡೆಯುವ ಯೋಜನೆಯಾಗಿದ್ದು, ವಿಮಾ ಕಂಪನಿಗಳೊಂದಿಗೆ ಶಾಮಿಲಾಗಿ 650 ಕೋಟಿ ಲೂಟಿ ಹೊಡೆದಿರುವರು. ಬ್ರಿಮ್ಸ್ ನಲ್ಲಿ 96 ಸ್ವಚ್ಛತಾ ಸಿಬ್ಬಂದಿಗಳನ್ನು ಗುತ್ತಿಗೆಗೆ ಪಡೆದು ಅವರಿಗೆ ಸರಿಯಾದ ಗೌರವಧನ ನೀಡದೇ ವಂಚಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಯಕ್ತಿಕ ಟೀಕೆ ಟಿಪ್ಪಣಿಗಳನ್ನು ಮಾಡಿ ಶತಾಯುಷಿಗಳಾದ ನಮ್ಮ ತಂದೆಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಈ ಕುರಿತು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ನಮ್ಮ ತಂದೆಯವರಾದ ಡಾ.ಭೀಮಣ್ಣ ಖಂಡ್ರೆಯವರು ಸಾರಿಗೆ ಸಚಿವರಾಗಿದ್ದಾಗ ನಕಲಿ ಟಿಕೆಟ್‍ಗಳು ಮುದ್ರಿಸಿದ್ದಾರೆಂದು ಆರೋಪಿಸಿದ್ದಾರೆ. ನಕಲಿ ಟಿಕೆಟ್ ಮುದ್ರಣ ಜಾಲ ಪತ್ತೆ ಹಚ್ಚಿ ಸ್ವತಃ ಅವರೆ ತನಿಖೆ ನಡೆಸಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಜಿಲ್ಲೆಗೆ ಯಾವುದೇ ಯೋಜನೆಗಳು ತರದೇ ಬೇರೆಯವರು ತಂದ ಯೋಜನೆಗಳಿಗೆ ತನ್ನ ಹೆಸರು ಬಳಿಸಿಕೊಳ್ಳುವುದು ಖೂಬಾ ಅವರ ಹಳೆ ಚಾಳಿ. ಡಿ.ಸಿ.ಸಿ ಬ್ಯಾಂಕ್ ಮೇಲೆ ರೇಡ್ ಮಾಡಿಸಿ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಧಮ್ಕಿ ಹಾಕಿ ತಮ್ಮ ಪರ ಪ್ರಚಾರ ಮಾಡಲು ಪ್ರಚೋದಿಸಿದ್ದಾರೆ. ಹಿಂದೆ ಸೂರ್ಯಕಾಂತ ನಾಗಮಾರಪಳ್ಳಿಗೆ ಟಿಕೇಟ್ ತಪ್ಪಿಸಿದ್ದು ಭಗವಂತ ಖೂಬಾ ಅವರು ಎಂದು ಗಂಭೀರ ಆರೋಪಿಸಿದರು.
ರಾಜ್ಯದ ಪೌರಾಡಳಿತ ಸಚಿವ ರಹಿಮ್ ಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಮಾಜಿ ಶಾಸಕ ಅಶೋಕ ಖೇಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಬಾಬು ಹೊನ್ನಾ ನಾಯಕ, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೊಡೆ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಗೀತಾ ಚಿದ್ರಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮುಲಗೆ, ಜಿಲ್ಲಾ ವಕ್ತಾರ ಜಾರ್ಜ್ ಫನಾಂಡಿಸ್ ಸೇರಿದಂತೆ ಇತರೆ ಮುಖಂಡರು ಪತ್ರಿಕಾ ಗೋಷ್ಟಿಯಲ್ಲಿದ್ದರು.