ಜನರ ಪ್ರೀತಿ ಅಭಿಮಾನಕ್ಕೆ ಬೆಲೆ ಕಟ್ಟಲಾಗದು- ದದ್ದಲ್

ರಾಯಚೂರು, ಮೇ,೦೯- ಗ್ರಾಮೀಣ ಕ್ಷೇತ್ರದ ಜನರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಗ್ರಾಮಗಳಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ ರೀತಿ ನೋಡಿದರೆ ಮತ್ತೊಮ್ಮೆ ಗೆಲುವು ನಿಶ್ಚಿತ ಎಂಬ ಮಾತುಗಳು ಮತದಾರರಲ್ಲಿ ಕೇಳಿ ಬರುತ್ತಿದೆ,
ಗ್ರಾಮೀಣ ಕ್ಷೇತ್ರದ ಜನರು ತೋರುವ ಪ್ರೀತಿ ವಿಶ್ವಾಸಕ್ಕೆ ನಾನು ಯಾವಗಲೂ ಋಣಿಯಾಗಿದ್ದೇನೆ.
ಇಂದು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಡಪನೂರು ಗ್ರಾಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಬಿರುಸಿನ ಪ್ರಚಾರ ಮತ್ತು ಮತಯಾಚನೆ ಕೈಗೊಂಡು ಮಾತನಾಡಿದ ಶಾಸಕರು
ಇಡಪನೂರು ಗ್ರಾಮದ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತದೆ, ಮುಖ್ಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಿದ್ದೇನೆ, ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿಗಾಗಿ ಶ್ರಮಿಸುತ್ತೇನೆ ಮತ್ತೊಮ್ಮೆ ನನಗೆ ಆರ್ಶಿವಾದ ಮಾಡಿ ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡುತ್ತೇನೆ ಎಂದರು.
ಇಡಪನೂರು ಗ್ರಾಮದ ಜನರು ಅದ್ದೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರಿಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ.ಗ್ರಾಮದ ಜನರಿಂದ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಯಿತು,
ನಂತರ ಪುಚ್ಚಲದಿನ್ನಿ,ಮಿಡಗಲದಿನ್ನಿ,ಗಣಮೂರು, ಚಂದ್ರಬಂಡಾ ಗ್ರಾಮಗಳಲ್ಲಿಯೂ ಅಬ್ಬರದ ಪ್ರಚಾರ ಕೈಗೊಂಡರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು, ಕಾರ್ಯಕರ್ತರು, ಗ್ರಾಮದ ಜನರು ಉಪಸ್ಥಿತರಿದ್ದರು.