ಜನರ ಪ್ರೀತಿ,ವಿಶ್ವಾಸಕ್ಕಾಗಿ ಸ್ಪರ್ಧಿಸುವೆ- ಕೆ.ಎಸ್. ದಿವಾಕರ


ಸಂಡೂರು:ಏ: 17:ಪಕ್ಷ ಸಂಘಟನೆಯಾಗಲಿ, ಪಕ್ಷಕ್ಕೆ ದುಡಿದವರಾಗಲಿ ಬಿಜೆಪಿ ಪಕ್ಷಕ್ಕೆ ಬೇಕಾಗಿಲ್ಲ, ಪಕ್ಷದ ಟಿಕೇಟ್ ಬೇಕಾಗಿಲ್ಲದವರಿಗೆ ಟಿಕೇಟ್ ಕೊಟ್ಟಿರುವುದು ವ್ಯವಸ್ಥಿತವಾದ ಒಳ ಒಪ್ಪಂದವಾಗಿದೆ ಎಂದು ಬಿಜೆಪಿ ಪಕ್ಷದ ರೆಬಲ್ ಅಭ್ಯರ್ಥಿ ಕೆ.ಎಸ್. ದಿವಾಕರ್ ನೋವಿನಿಂದ ತಿಳಿಸಿದರು.
ಅವರು  ಪಕ್ಷದ ತಾಲೂಕಿನ ಎಲ್ಲಾ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಪಕ್ಷ ನಡೆದುಕೊಂಡ ರೀತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು, ಇಂದು ಹೈಕಮಾಂಡ್ ಮಾಡಿದ ದ್ರೋಹ ಎಷ್ಟು ಎಂದರೆ ಪುಟ್‍ಬಾಲ್ ರೀತಿಯಲ್ಲಿ ಉಪಯೋಗಿಸಿಕೊಂಡಿದೆ, ಬಡವನಾಗಿ ಹುಟ್ಟಿ ಪಕ್ಷಕ್ಕಾಗಿ ಶ್ರಮಿಸಿದ್ದೇನೆ, ಏಕಾ ಏಕಿ ಟಿಕೇಟ್ ಕೇಳಿಲ್ಲ, ಕಳೆದ 15 ವರ್ಷಗಳಿಂದ ಶ್ರಮಿಸಿದ್ದೇನೆ, ಇಂದು ಜನತೆಯ ತೀರ್ಮಾನದ ಮೂಲಕವೇ ನಾನು ಜನಾರ್ಧನ್ ರಡ್ಡಿಯವರ ಕೆ.ಅರ್.ಪಿ.ಪಿ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದರೆ ನೋವಾಗುತ್ತಿದೆ, ಕಾರಣ ಹಗಲಿರಳು ಪಕ್ಷಕ್ಕೆ ದುಡಿದವರಿಗೆ ಬೆಲೆ ಇಲ್ಲವಾಗಿದೆ, ಸಹೋದರರು, ನನ್ನ ತಾಯಿ ರಾಜಕೀಯ ಸಾಕು  ಮೋಸ ಮಾಡಿದ್ದಾರೆ ಎಂದು ತಿಳಿಸಿದರು, ಅದರೆ ಕಾರ್ಯಕರ್ತರ ಒತ್ತಡದಿಂದ ಅವರ ಮಗನಾಗಿ, ತಮ್ಮನಾಗಿ, ಸಹೋದರನಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ವೇದಿಕೆಯಲ್ಲಿಯೇ ದು:ಖಿತರಾದರು. ನಿಮ್ಮ ಮನೆಯ ಮಗನಾಗಿ ಕಾರ್ಯನಿರ್ವಹಿಸುತ್ತೇನೆ, ಉಡಿತುಂಬುವ ಕಾರ್ಯದಿಂದ ತಾಯಂದಿರು ಅಶೀರ್ವದಿಸಿದ್ದಾರೆ, ಯುವಕರು ಕ್ರೀಡೆಗಳಲ್ಲಿ ಭಾಗವಹಿಸಿ ಅಶೀರ್ವದಿಸಿದ್ದಾರೆ, ಹಿರಿಯರು ಮಾರ್ಗದರ್ಶನದಿಮದ ಬೆಂಬಲಿಸಿದ್ದಾರೆ, ಕೆಲಸ ಮಾಡಿದ್ದೇನೆ, ಕೂಲಿ ಕೇಳಿದೆ, ಕಾಂಗ್ರೇಸ್ ಹಾಗೂ ಕೆಲ ಮುಖಂಡರ ಹೊಂದಾಣಿಕೆ ರಾಜಕಾರಣದಿಂದ ಜನತೆ ಬೇಸತ್ತಿದ್ದಾರೆ, ಶ್ರೀ ಕುಮಾರಸ್ವಾಮಿಯ ಆಶೀರ್ವಾದಿಂದ ನಿಮ್ಮ ಮುಂದೆ ಬಂದಿದ್ದೇನೆ, ಕಾಂಗ್ರೇಸ್ ಪಕ್ಷವನ್ನು ಸೋಲಿಸುವ ಗುರಿಯಿಂದ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ಎಲ್ಲಾ ಕಾರ್ಯಕರ್ತರು ಜನಾರ್ಧನ ರಡ್ಡಿ ಪಕ್ಷದಿಂದ ಸ್ಪರ್ಧಿಸಿ ಎನ್ನುವ ಮೂಲಕ ಜನತೆಯ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಿದೆ, ಬಹಳಷ್ಟು ನಾಯಕರು ಬಹು ಕೀಳಾಗಿ ಮಾತನಾಡಿದ್ದಾರೆ, ಒಬ್ಬ ಕಾರ್ಯಕರ್ತನ ಹಿಂದೆ ನೂರಾರು ಬೆಂಬಲಿಗಲಿದ್ದಾರೆ, ನಿಮ್ಮ ಪ್ರೀತಿ, ಋಣದಿಂದ ನಾನು ಸ್ಪರ್ಧೆಗೆ ಇಳಿಯುತ್ತಿದ್ದೇನೆ ಮಂಗಳವಾರ ನಾಮಪತ್ರ ಸಲ್ಲಿಸುವ ಮೂಲಕ ನಿಮ್ಮಲ್ಲಿ ಮತ ಯಾಚಿಸುತ್ತೇನೆ ಎಂದರು. ಬಿಜೆಪಿ ಪಕ್ಷ ಪ್ರಮುಖ ನಾಯಕರನ್ನೇ ಹಾಗೂ ಗೆಲ್ಲುವವರನ್ನೇ ಗುರಿ ಮಾಡಿಕೊಂಡು ಟಿಕೇಟ್ ತಪ್ಪಿಸಿರುವುದನ್ನು ಕಂಡಾಗ ಒಳ ಒಪ್ಪಂದವೇ ಸರಿ, ಸಂಡೂರಿನ ಪ್ರಮುಖ ನಾಯಕರು ಕಾಂಗ್ರೇಸ್ ನಾಯಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಇಂದು ಬಿಜೆಪಿ ಟಿಕೇಟ್ ತಪ್ಪಿಸಿದ್ದಾರೆ, ಶ್ರೀ ರಾಮುಲು ಅವರೂ ಸಹ ಪೂರ್ಣಪ್ರಮಾಣದಲ್ಲಿ ಟಿಕೇಟ್ ಕೊಡಿಸುವ ಪ್ರಯತ್ನ ಮಾಡಿದ್ದಾರೋ, ಇಲ್ಲವೋ ಗೊತ್ತಲ್ಲ, ಅದರೆ ಸಮಾಧಾನ ಮಾಡುತ್ತೇನೆ ಎಂದಿದ್ದಾರೆ, ಉನ್ನತ ಸ್ಥಾನದಲ್ಲಿದ್ದವರೂ ಸಹ ಪೋನ್ ಮಾಡಿದ ತಡೆಯಿರಿ ಎಂದಿದ್ದಾರೆ, ಅದರೆ ಇದು ಮೂಗಿಗೆ ತುಪ್ಪ ಸವರುವ ಕೆಲಸವಾಗಿದ್ದು ಯಾವುದೇ ಕಾರಣಕ್ಕೂ ಜನರ ಪ್ರೀತಿ ವಿಶ್ವಾಸಕ್ಕೆ ದ್ರೋಹ ಬಗೆಯದೇ ಅವರ ತೀರ್ಪಿನಂತೆ ಸ್ಪರ್ಧಿಸುವ ಮೂಲಕ ಕಾಂಗ್ರೇಸ್ ಪಕ್ಷವನ್ನು ಸೋಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಒಪ್ಪಿಗೆಯನ್ನು ಬಹಿರಂಗವಾಗಿಯೇ ಕೈ ಎತ್ತುವ ಮೂಲಕ ಕೇಳಿದರು  5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹರ್ಷದಿಂದ ಕೈಎತ್ತಿ ಕೇಕೆ ಹಾಕಿ ಒಪ್ಪಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೊಂಚಿಗೇರಿ ನಾಗರಾಜ ಮಾತನಾಡಿದರು. ಮುಖಂಡರಾದ ಅಂಬರೀಶ್, ಶಿವಾನಂದಪ್ಪ, ಚೋರನೂರು ಗುರುರಾಜ, ಭಾಗದ ಕೆ.ಎಸ್.ಕ.ಕುಮಾರಸ್ವಾಮಿ, ನಾಗರಾಜ, ಕುಮಾರಸ್ವಾಮಿ, ಶಾಂತಕುಮಾರ, ಸಂಪತ್ತ, ಮಂಜಣ್ಣ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪತ್ರಕರ್ತರೊಂದಿಗೆ ಮಾತನಾಡಿ ಬಿಜೆಪಿ ಪಕ್ಷದ ಉನ್ನತ ಸಮಿತಿಯವರು ಸಂಪರ್ಕಿಸಿದ್ದಾರೆ, ಅದರೆ ನನ್ನನ್ನು ಪುಟ್‍ಬಾಲ್ ಅಡಿದ್ದಾರೆ, ಅವರಿಗೆ ಪುಟ್ ಬಾಲ್ ಮೂಲಕವೇ ಉತ್ತರವ ಕೋಡೋಣ ಎಂದರು.
ಒಂದು ಕಡೆ ಕಾಂಗ್ರೇಸ್ ಗೆದ್ದೇ ಬಿಟ್ಟೇವು ಎಂದು ಬೀಗುತ್ತಿರುವುದಕ್ಕೆ ಸೂಕ್ತ ಪೈಪೋಟಿ ನೀಡಲು ದಿವಾಕರ್ ಹಾಗೂ ಸೋಮಪ್ಪ ಮಾಡುವ ಸ್ಪಷ್ಟ ಲಕ್ಷಣಗಳು ಎದ್ದು ಕಾಣುತ್ತಿವೆ.

One attachment • Scanned by Gmail