ಜನರ ಪ್ರಾಣ ನುಂಗಲು ಬಾಯಿ ತೆರೆದ ನಿಂತ ಯುಜಿಡಿ ಗುಂಡಿಗಳು ಮುಚ್ಚಿಸುವಂತೆ: ಶೇಖರ್ ನಾಟಿಕರ ಆಗ್ರಹ

ಸೇಡಂ,ಜೂ,16: ಪಟ್ಟಣದ ಕಮಲಾವತಿ ನದಿ ಮಧ್ಯದಲ್ಲಿ ಯುಜಿಡಿ ವತಿಯಿಂದ ನಿರ್ಮಿಸಲಾಗುತ್ತಿರುವ ವೇಟ್ ವಾಲ್ ಮಾಡಲಾಗುತ್ತಿದ್ದು ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಯುಜಿಡಿಯ ಗುಂಡಿಗಳು ಜನರ ಪ್ರಾಣ ನುಂಗಲು ಬಾಯಿ ತೆರೆದು ನಿಂತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ತಮ್ಮ ಫೇಸ್ ಬುಕ್ ಲೈವ್ ಮುಖಾಂತರ ಯುಸಿಡಿ ಗುಂಡಿಗಳ ಲೈವ್ ಆಗೆ ತೋರಿಸುವ ಮೂಲಕ ಮಾತನಾಡಿದ ಅವರು ಕೆಲವು ವರ್ಷಗಳ ಹಿಂದೆ ಕಮಲಾವತಿ ನದಿಯ ಮಧ್ಯದಲ್ಲಿ ಅವೈಜ್ಞಾನಿಕವಾಗಿ ಜನರ ವಿರೋಧ ಕಟ್ಟಿಕೊಂಡು ಯುಜಿಡಿ ನಿರ್ಮಿಸಿದ ಜನಪ್ರತಿನಿಧಿಗಳು ಅಧಿಕಾರಿಗಳು ಈಗಾಗಲೇ ಒಂದು ಪ್ರಾಣ ತೆಗೆದುಕೊಂಡಿದ್ದಾರೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಇರುವಂತಹ ಗುಂಡುಗಳು ಸಹ ಜನರ ಪ್ರಾಣ ನುಂಗಲು ಕಾದನಿಂತಿವೆ ಆದರಿಂದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಯುಜಿಡಿ ಹೋಗುವಂತಹ ತೆರೆದಂತ ಗುಂಡಿಗಳಿಗೆ ಮುಚ್ಚಿಸುವ ಮೂಲಕ ಜನರ ಪ್ರಾಣ ಉಳಿಸಲು ಮುಂದಾಗಬೇಕೆಂದು ಎಂದು ಆಗ್ರಹಿಸಿದ್ದಾರೆ.