ಜನರ ನಿರ್ಲಕ್ಷ್ಯ ಹೆಚ್ಚುತ್ತಿರುವ ಕರೊನಾ

ಮುದ್ದೇಬಿಹಾಳ;ಮೇ.1: ಕರೋನ ಎರಡನೇ ಅಲೆಯು ಜಿಲ್ಲೆಯಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿ ನಿರ್ಲಕ್ಷ್ಯ ದಿಂದ ತಿರುಗುವ ಜನರನ್ನು ಅಪ್ಪಿ ಕೂಳ್ಳುತ್ತಿದೆ,

ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಕರೋನದ ಪ್ರಭಾವ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ ಏಕೆಂದರೆ ಇಲ್ಲಿ ಜನರು ಜನತಾ ಕಪೆÇ್ರ್ಯೀ ಮಧ್ಯೆ ಸಹ ಬೇಕಾಬಿಟ್ಟಿಯಾಗಿ ತಿರುಗುತ್ತಿದ್ದಾರೆ,ಸಾಮಾಜಿಕ ಅಂತರವಿಲ್ಲ ,ಮಾಸ್ಕ್ ಧಾರಣೆ ಸರಿಯಾಗಿಲ್ಲ ಜನರು ಕರೋನದ ನಿಯಮಗಳನ್ನು ಗಾಳಿಗೆ ತೂರಿ ಭಂಢತನದಿಂದ ಆಚೆ ಬರುತ್ತಿದ್ದು ಇದರಿಂದ ಕರೋನ ಪಿಡಿತರ ಸಂಖ್ಯೆ ಜಾಸ್ತಿಯಾಗುತ್ತಲೆ ಇದೆ.

ಶುಕ್ರವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಜಾಮ್ ಒಂದುವರೆ ಗಂಟೆಗೂ ಹೆಚ್ಚು ಸಮಯ ಉಂಟಾಗಿತ್ತು,ಅನಗತ್ಯ ಜನರ ಮತ್ತು ವಾಹನ ಸಂಚಾರದ ಮೇಲೆ ನಿಗಾವಹಿಸಲು ಪೂಲೀಸರು ಒಂದು ಬದಿಯ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು ಇದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಕಂಡುಬಂತು ,ಪೂಲೀಸರು ಟ್ರಾಫಿಕ್ ಜಾಮ್ ತಿಳಿಗೂಳಿಸಲು ಹರಸಾಹಸ ಪಡಬೇಕಾಯಿತು ಒಂದು ಗಂಟೆಯ ಮೇಲೆ ಟ್ರಾಫಿಕ್ ಜಾಮ್ ನಿಯಂತ್ರಣ ಕ್ಕೆ ಬಂತು;

ಅನಗತ್ಯವಾಗಿ ತಿರುಗುತಿದ್ದ ವಾಹನಗಳು ಸಿಜ್ ;

ಶುಕ್ರವಾರ ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಜನರಿಗೆ ಪೂಲೀಸರು ಬೆತ್ತದ ರುಚಿ ತೋರಿಸದರಲ್ಲದೆ 15 ಕ್ಕೂ ಹೆಚ್ಚು ಬೈಕ್ ಗಳನ್ನು ಸಿಜ್ ಮಾಡಿ ,ಸುಮ್ಮಸುಮ್ಮನೆ ತಿರುಗುವ ಜನರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಸಿಪಿಐ ಆನಂದ ವಾಗ್ಮೋಡೆ, ಪಿಎಸೈ .ಎಂ ಬಿ ಬಿರಾದಾರ ನೇತೃತ್ವದ ತಂಡ ಮಾಡಿದೆ ,ಇದರಿಂದ ಆದರೂ ಜನರು ಆಚೆ ತಿರುಗಾಡುವುದು ಕಡಿಮೆಯಾಗಲಿ.

ತಾಲೂಕ ಅಧಿಕಾರಿಗಳ ಇಲ್ಲದ ಮುದ್ದೇಬಿಹಾಳ

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ತಾಲೂಕು ದಂಡಾಧಿಕಾರಿ ತಹಶಿಲ್ದಾರ ಇಲ್ಲ ತಾಲೂಕು ಪಂಚಾಯತ ಅಧಿಕಾರಿಯು ಇಲ್ಲ ಇದರಿಂದ ಕರೋನದ ಸಂದರ್ಭದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಅಧಿಕಾರಿಗಳೆ ಇಲ್ಲದಂತಾಗಿದೆ ಇದರಿಂದ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಜಾತ್ರೆಗಳು ನಡೆಯುತ್ತಿವೆ,ಬಸರಕೋಡ ಗ್ರಾಮದಲ್ಲಿ ನಿಷೇಧದ ಮಧ್ಯೆಯು ಜಾತ್ರೆ ಮಾಡಿ ರಥದ ಚಕ್ರ ಕ್ಕೆ ಸಿಲುಕಿ ಓರ್ವ ಮೃತಪಟ್ಟ ಘಟನೆ ಹಸಿ ಇರುವಾಗಲೇ ಯರಝರಿ ಗ್ರಾಮದಲ್ಲಿ ಸಹ ಜಾತ್ರೆ ಮಾಡಿದ್ದಾರೆ, ಅದರಂತೆ ಜನರು ಸಹ ಸಾಮಾಜಿಕ ಅಂತರವನ್ನು ಮರೆತು ತರಕಾರಿ ಮತ್ತು ಇತ್ಯಾದಿ ವ್ಯಾಪಾರಕ್ಕೆ ಮುಗಿ ಬಿಳುತ್ತಿದ್ದಾರೆ, ಕರೋನದ ನಿಯಮಗಳು ಇಲ್ಲಿ ಗಾಳಿಗೆ ಹಾರಿ ಹೋಗಿವೆ,ತಾಲೂಕಿಗೆ ಕೂಡಲೇ ಕಾಯಂ ತಹಶಿಲ್ದಾರ ನೇಮಕ ಮಾಡಬೇಕಿದೆ ಮತ್ತು ಬ್ರಿಟಿಷ್ ರ ಕಾಲದಿಂದಲೂ ಇರುವ ಪೂಲೀಸ್ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಬೇಕಿದೆ,ಬೆಳೆಯುತ್ತಿರುವ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗಿದೆ ಜನರ ನಿಯಂತ್ರಣ ಕ್ಕೆ ಪೂಲೀಸ್ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಬೇಕು ಖಾಲಿ ಇರುವ ಸಿಬ್ಬಂದಿಗಳ ನೇಮಕ ಮಾಡಬೇಕು ಇದರಿಂದ ಜನರನ್ನು ನಿಯಂತ್ರಣ ಮಾಡಬಹುದಾಗಿದೆ

ಸಾರ್ವಜನಿಕರು ಕರೋನದ ಬಗ್ಗೆ ಎಚ್ಚರಿಕೆ ವಹಿಸಲಿ

ಮುದ್ದೇಬಿಹಾಳ ತಾಲ್ಲೂಕಿನ ಹಾಗೂ ಪಟ್ಟಣದ ಜನರು ಕರೋನದ ಬಗ್ಗೆ ಎಚ್ಚರಿಕೆ ವಹಿಸಬೇಕು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಗತ್ಯವಿದ್ದಲ್ಲಿ ಕೈಗವಸ ಧರಿಸಬೇಕಿದೆ

ತಾಲ್ಲೂಕಿನಲ್ಲಿ ಕರೋನ ಸೋಂಕಿತರ ಸಂಖ್ಯೆ ಮಾರ್ಚ್ ನಿಂದ ಈ ಮೇ 30 ವರಗೆ ಅಂದಾಜು 500 ಜನರು ಸೋಂಕಿತ ರ ಲ್ಲಿ ಅಂದಾಜು 300 ಜನರು ಡಿಸ್ಚಾರ್ಜ್ ಆಗಿದ್ದಾರೆ ಸದ್ಯ ಸಕ್ರಿಯ ಕೇಸ್ ತಾಲ್ಲೂಕಿನಲ್ಲಿ 200 ಇದೆ, ಎರಡನೇ ಅಲೆಯ ಸಂದರ್ಭದಲ್ಲಿ ಅಂದಾಜು 10 ಜನರು ಕರೋನ ಕ್ಕೆ ಬಲಿಯಾಗಿದ್ದಾರೆ

ಕಳೆದ ವರ್ಷ ಕರ್ನಾಟಕದಲ್ಲಿ ಅತಿ ಹೆಚ್ಚಿನ ಕರೋನ ಸೋಂಕಿತರು 42000 ಕೇಸ್ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಇದ್ದವು ಎಂಬುದು ಇಲ್ಲಿ ಸ್ಮರಿಸಬಹುದು ,ಇಂತಹ ವಿಷಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಜನರು ಅನಗತ್ಯವಾಗಿ ಆಚೆ ತಿರುಗಾಡಬಾರದು

ಪ್ರತಿ ವಾರ್ಡ್ ಗಳಲ್ಲಿ ಕರೋನ ಶಿಬಿರ ಮಾಡಲಿ

ಮುದ್ದೇಬಿಹಾಳ ಪಟ್ಟಣದ ಪ್ರತಿ ವಾರ್ಡ್ ಗಳಲ್ಲಿ ಕರೋನ ಶಿಬಿರಗಳನ್ನು ಮಾಡಿ ಪಟ್ಟಣದ ಜನರ ಕರೋನ ಪರೀಕ್ಷೆ ಮಾಡಬೇಕು ಮತ್ತು ಅದಕ್ಕೆ ಮಾತ್ರೆಗಳನ್ನು ನೀಡುವುದರ ಜೊತೆಗೆ ಪ್ರತಿ ವಾರ್ಡ್ ಗಳಲ್ಲಿ ಕರೋನ ವ್ಯಾಕ್ಸಿನ್ ಹಾಕುವ ಕೆಲಸವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಬೇಕು, ಪಟ್ಟಣದ ಜನರಲ್ಲಿ ಜ್ವರ,ನೆಗಡಿ ಊಟದ ರುಚಿ , ವಾಸನೆ ಗ್ರಹಿಕೆ ಇಲ್ಲದಿರುವುದು ಇಂತಹ ಲಕ್ಷಣಗಳು ಪ್ರತಿ ಮನೆಯ ಸದಸ್ಯರಲ್ಲಿ ಕಂಡು ಬರುತ್ತಿದೆ .

ಜನಸಾಮಾನ್ಯರ ಬಡವರ ಗೋಳು;

ಜನತಾ ಕಪೆÇ್ರ್ಯೀ ನಿಂದ , ಕೆಲಸವನ್ನು ನಂಬಿ ದುಡಿದು ತಿನ್ನುವ ಸಾಮಾನ್ಯ ವರ್ಗದ ಜನರಿಗೆ, ಬಡವರಿಗೆ ಸಮಸ್ಯೆ ಉಂಟಾಗುತ್ತಿದೆ, ಬ್ಯಾಂಕ್ ಗಳಸಾಲ,ಮಹಿಳಾಸಂಘದ ಕಂತುಗಳನ್ನು ತುಂಬಬೇಕು ಅಂಗಡಿ ಬಾಡಿಗೆ,ಮನೆಯ ನಿರ್ವಹಣೆ ಹೇಗೆ ಮಾಡಬೇಕು ಅಂತ ಗೋಳಾಡುತ್ತಿದ್ದಾರೆ, ಕಳೆದ ವರ್ಷ ಬ್ಯಾಂಕ್ ಬಡ್ಡಿ ಮನ್ನಾ ಮಾಡ್ತನೆ ಅಂತ ಹೇಳಿದರು ಮಾಡಲಿಲ್ಲ ಈ ಬಾರಿಯಾದರೂ ಬ್ಯಾಂಕ್ ಗಳ, ಸಂಘಗಳ ಕಂತುಗಳನ್ನು ಕಟ್ಟಲು ಸಮಯವಕಾಶ ನೀಡಬೇಕು ಅಥವಾ ಬಡ್ಡಿ ಮನ್ನಾ ಮಾಡಬೇಕು ಅಂತ ಜನರು ತಮ್ಮ ಅಳಲನ್ನು ತೋಡಿಕೂಳ್ಳುತ್ತಿದ್ದಾರೆ .