ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಮಾಡಿರುವೆ: ನಾಡಗೌಡ

ಸಿಂಧನೂರು,ಮಾ.೩೦- ಶಾಸಕನಾಗಿ ಸಚಿವರಾಗಿ ಕ್ಷೇತ್ರದಲ್ಲಿ ಜನರ ನಿರೀಕ್ಷೆಗೂ ಮೀರಿ ಸುಮಾರು ೧೫ ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ ತೃಪ್ತಿ ನನಗೆ ಇದೆ ಎಂದು ಶಾಸಕ ವೆಂಟರಾವ ನಾಡಗೌಡ ಹೇಳಿದರು.
ತಮ್ಮ ನಿವಾಸದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶಾಸಕರು ಹಿಂದೆ ಶಾಸಕರಾಗಿ ಆಯ್ಕೆಯಾದರು ಮಾಡಿದ ಕೆಲಸಗಳಿಂತ ನಾನು ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದು ಜನರು ಸಹ ನನ್ನ ಅಭಿವೃದ್ಧಿಪರ ಕೆಲಸ ನೋಡಿ ಈ.ಸಲ ಚುನಾವಣೆಯಲ್ಲಿ ಮತ್ತೆ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶುದ್ಧವಾದ ಕುಡಿಯುವ ನೀರು. ಏತಾ ನೀರಾವರಿ ಯೋಜನೆ. ಪಿಕಪ್‌ಗಳು ಬ್ರಿಡ್ಜ್ ಗಳ ನಿರ್ಮಾಣ. ತಾಯಿ ಮಕ್ಕಳ ಆಸ್ಪತ್ರೆ, ಶಾಲಾ ಕೊಠಡಿಗಳು ಸರ್ಕಾರಿ ಆಸ್ಪತ್ರೆಯ ಕಟ್ಟಡ ಗಳು, ಪಶು ಆಸ್ಪತ್ರೆಯ ಕಟ್ಟಡ ಗಳು, ಜಿಲ್ಲಾ ನ್ಯಾಯಾಲಯ ಮಂಜೂರು, ಬಸ್‌ಗಳು, ಸಿಸಿ ರಸ್ತೆ ಚರಂಡಿ ಕಾಮಗಾರಿಗಳು ಕೆಲವು ಸಂಪೂರ್ಣವಾದರೆ ಇನ್ನೂ ಮುಗಿಯುವ ಹಂತದಲ್ಲಿ ಇವೆ ನಗರದಲ್ಲಿ ಸಿಸಿ ರಸ್ತೆ ಚರಂಡಿಯ ಕಾಮಗಾರಿಗಳನ್ನು ಮಾಡದಂತೆ ಕಾಂಗ್ರೆಸ್‌ನವರು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದು ಕೆಲಸ ನಿಲ್ಲಿಸಿದರು. ನಾನು ಎಲ್ಲ ವಿಘ್ನಗಳನ್ನು ನಿವಾರಿಸುವ ಮೂಲಕ ನಗರದ ಜನತೆಗೆ ಸಿಸಿ ರಸ್ತೆ ಹಾಗೂ ಚರಂಡಿಯ ಕಾಮಗಾರಿಗಳನ್ನು ಮಾಡಿದ್ದೇನೆ ಇದರಿಂದ ಜನರು ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ವಾಗಿದೆ ಎಂದರು.
ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿ ರೈತರಿಗೆ ಆಗುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ನಾನು ಮೊದಲು ಆದ್ಯತೆಯಾಗಿದೆ ದೊಡ್ಡ ಕಾರ್ಖಾನೆಗಳನ್ನು ಆರಂಭಿಸಿ ತಾಲೂಕಿನ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಒದಗಿಸುವ ಮನಸು ಮಾಡಿದ್ದೇನೆ ಎಂದರು.
ಮೆಡಿಕಲ್, ಇಂಜನಿಯರಿಂಗ್, ಕಾನೂನು ಐಟಿಐ ಕಾಲೇಜುಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು ಸಹ ಕರೋನ ಇರುವದರಿಂದ ಸರ್ಕಾರ ಮಂಜೂರಾತಿಗೆ ಅನುಮತಿ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಐದು ವರ್ಷದ ಅವಧಿಯಲ್ಲಿ ಬಡವರ ಕೆಲಸಗಳು ವಿಳಂಬವಾದಾಗ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಿರುವೆ ಹೊರತು ಯಾವುದೆ ದುರುದ್ದೇಶ ಇಲ್ಲ. ಒಂದು ವೇಳೆ ನೋವಾಗಿದ್ದರೆ ಅಧಿಕಾರಿಗಳಲ್ಲಿ ಕ್ಷಮೆ ಕೇಳುವೆ ಎನ್ನುವ ಮೂಲಕ ಶಾಸಕರು ತಮ್ಮ ದೊಡ್ಡ ಗುಣವನ್ನು ತೋರಿಸಿದರು.
ನನ್ನ ಮೇಲೆ ವಿಶ್ವಾಸ ಇಟ್ಟು ನನಗೆ ಮತ ನೀಡಿ ಗೆಲ್ಲಿಸಿದ ಹಾಗೂ ಶ್ರಮಿಸಿದ ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು, ಗುರು ಹಿರಿಯರು, ವಿವಿಧ ಸಮಾಜದ ಗುರುಗಳು, ಸರ್ಕಾರಿ ಅಧಿಕಾರಿಗಳಿಗೆ ಶಾಸಕರು ಅಭಿನಂದನೆಗಳನ್ನು ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಯುವ ಘಟಕದ ನೂತನ ತಾಲೂಕಿ ಅಧ್ಯಕ್ಷರನ್ನಾಗಿ ಸುಮೀತ ತಡಕಲ್ ಇವರನ್ನು ನೇಮಕ ಮಾಡಲಾಗಿದೆ ಎಂದು ಆದೇಶ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.
ಜೆಡಿಎಸ್ ತಾಲೂಕಾಧ್ಯಕ್ಷರಾದ ಬಸವರಾಜ ನಾಡಗೌಡ, ಜಿ.ಪ.ಮಾಜಿ ಸದಸ್ಯರಾದ ಸಂಗಮೇಶ್ವರ ರಾವ್ ನಾಡಗೌಡ, ಮುಖಂಡರಾದ ನಾಗೇಶ ಹಂಚಿನಾಳ ಕ್ಯಾಂಪ್, ಶಂಕರಗೌಡ ಎಲೆಕೂಡ್ಲಗಿ ಸೇರಿದಂತೆ ಇನ್ನಿತರರು ಇದ್ದರು.