ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಪ್ರಯತ್ನ:ಖಂಡ್ರೆ

ಭಾಲ್ಕಿ:ಮಾ.3: ಪಟ್ಟಣದ ವಿವಿಧೆಡೆ ನಗರೋತ್ಥಾನ ಯೋಜನೆಯಡಿ 1.25 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಶಾಸಕ ಈಶ್ವರ ಖಂಡ್ರೆ ಚಾಲನೆ ನೀಡಿದರು. ಪಟ್ಟಣದ ವಾರ್ಡ್-1ರ ಧನಗರ ಗಲ್ಲಿ, ಬೀದರ್ ಬೇಸ್ ಖಂಡ್ರೆ ಗಲ್ಲಿ, ಕಾಲೀ ಮಸೀದಿ ಹತ್ತಿರ 60 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ವಾರ್ಡ್ 4ರ ಮಾಶೆಟ್ಟೆ ಗಲ್ಲಿ, ಸಯ್ಯದ್ ಗಲ್ಲಿ, ಖಂಡ್ರೆ ಗಲ್ಲಿ, ಕರಕಾಳೆ ಗಲ್ಲಿ, ದೇಶಮುಖ ಗಲ್ಲಿಯಲ್ಲಿ 40 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಚರಂಡಿ ಮತ್ತು ವಾರ್ಡ್ 20ರ ಲೋಖಂಡೆ ಗಲ್ಲಿಯಲ್ಲಿ ನಗರೋತ್ಥಾನ 3ರ ವಿಶೇಷ ಯೋಜನೆಯಡಿ 25 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದು ಕೊಂಡಿವೆ. ಎಲ್ಲ ಬಡಾವಣೆಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮತ್ತು ಬೀದಿದೀಪ ಅಳವಡಿಕೆಗೆ ಆದ್ಯತೆ ನೀಡಲಾಗಿದೆ. ಉದ್ಯಾನವನಗಳು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಸವಿಲೇವಾರಿ, ಸ್ವಚ್ಛತೆ ಆದ್ಯತೆ ನೀಡಲಾಗಿದೆ. ನಾನು ಪೌರಾಡಳಿತ ಸಚಿವನಿದ್ದ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿಗೆ ದಾಖಲೆ ರೀತಿಯಲ್ಲಿ 110 ಕೋಟಿ ರೂ ಅನುದಾನ ಕೊಡಿಸಿದ್ದೇನೆ.

ಅದೇ ಅನುದಾನದಲ್ಲಿ ಇನ್ನು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 20 ಕೋಟಿ ರೂ ಅನುದಾನ ಉಳಿತಾಯವಾಗಿದ್ದು, ಅಗತ್ಯ ಇರುವ ಕಡೆಗಳಲ್ಲಿ ಕಾಮಗಾರಿಗಳಿಗೆ ಟೆಂಡರ್ ಮಾಡಿಸಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

140 ಕೋಟಿ ರೂ ಅನುದಾನದಲ್ಲಿ ಶಾಶ್ವತ ಕುಡಿವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಪಟ್ಟಣದ ಎಲ್ಲ ಬಡಾವಣೆಗಳಿಗೆ ನಲ್ಲಿ ಮೂಲಕ ನಿರಂತರವಾಗಿ ಶುದ್ಧ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಮುಖ್ಯ ರಸ್ತೆಗಳು ಅಭಿವೃದ್ಧಿ ಪಡಿಸಲಾಗಿದೆ. ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ಇಂತಹ ಹತ್ತಾರೂ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡು ಜನರ ನೀರಿಕ್ಷೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದೇನೆ. ನಗರೋತ್ಥಾನ 4ರ ಯೋಜನೆಯಡಿ 7 ಕೋಟಿ ರೂ ವೆಚ್ಚದಲ್ಲಿ ಪಟ್ಟಣದ ವಿವಿಧ ಬಡಾವಣೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಸ್ವಚ್ಛ, ಸುಂದರ ಪಟ್ಟಣವನ್ನಾಗಿಸುವ ಗುರಿ ನನ್ನದ್ದಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ತರಲು ತಾವೆಲ್ಲರೂ ಶಕ್ತಿ ತುಂಬಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ನಗರ ಘಟಕದ ಅಧ್ಯಕ್ಷ ಅಬ್ದುಲ್ ನಸೀರ್, ಪುರಸಭೆ ಅಧ್ಯಕ್ಷ ಅನಿಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್, ಪುರಸಭೆ ಮಾಜಿ ಅಧ್ಯಕ್ಷರಾದ ಶೋಭಾವತಿ ದೇಶಮುಖ, ಅಶೋಕ ಮಡ್ಡೆ, ಬಸವರಾಜ ವಂಕೆ, ಸದಸ್ಯರಾದ ಅನಿತಾ ಪಂಚಾಳ, ಮಹೇಬೂಬ್, ಪ್ರಮುಖರಾದ ವಿಲಾಸ ಬಕ್ಕಾ, ಸಂಗಮೇಶ ಕಾರಾಮುಂಗೆ, ನಿರಂಜನ ಅಷ್ಟೂರೆ, ಕುಪೇಂದ್ರ ವಂಕೆ, ಸಂಗಮೇಶ ವಾಲೆ, ಕಪಿಲ ಕಲ್ಯಾಣೆ, ಶೈಲೇಶ ಚಳಕಾಪೂರೆ, ಪ್ರಶಾಂತ ಕೊಟಗೀರಾ ಸೇರಿದಂತೆ ಹಲವರು ಇದ್ದರು.


ಪಟ್ಟಣದ ವಿವಿಧೆಡೆ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳಲಿದೆ.

ಈಶ್ವರ ಖಂಡ್ರೆ ಶಾಸಕರು ಭಾಲ್ಕಿ