ಜನರ ನಿರಿಕ್ಷೆ ಹುಸಿ ಗೊಳಿಸಿದ ಬಜೆಟ್

ಬೀದರ್:ಜು.8: ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಜೆಟ್ ಮೇಲೆ ಸಹಜವಾಗಿಯೇ ನಮ್ಮ ಬೀದರ್ ಜಿಲ್ಲೆಯ ಜನ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು ಇದೀಗ ಅದು ಹುಸಿಯಾಗಿದೆ. ಬಜೆಟ್ ನಲ್ಲಿ ಜಿಲ್ಲೆಗೆ ಯಾವುದೇ ಹೇಳಿಕೊಳ್ಳುವಂತದ್ದು ಯೋಜನೆ ಏನು ಇಲ್ಲ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಜಿಲ್ಲೆಗೆ ದೊರೆತ ಪ್ರವಾಸಿ ತಾಣವಾದ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ, ಸ್ವಯಂಚಾಲಿತ ಚಾಲನಾ ಪರೀಕ್ಷಾ ಪತಗಳು, ಮಾದರಿ ವಿಶ್ವವಿದ್ಯಾಲಯ ನಿರ್ಮಾಣ, ಸಂಚಾರಿ ಕ್ಲಿನಿಕ್ ಪ್ರಾರಂಭ
ಅದೆ ಯೋಜನೆ ಮುಂದುವರಿಸಿದ್ದಾರೆ ಹಲವುಕಡೆ ಉತ್ತಮ ಮಳೆಯಾಗದೆ ರೈತರು ಸಮಸ್ಯೆ ಎದುರಿಸುವಂತಾಗಿದೆ ಕೆಲ ಕಡೆ ಮಳೆ ಹೆಚ್ಚಾಗಿ ಬೆಳೆ ಹಾನಿಯಾಗಿದೆ ಬೀದರ್ ಜಿಲ್ಲೆಗೆ ರೈತರ ಏಳಿಗೆಗಾಗಿ ಪ್ಯಾಕೇಜ್ ಘೋಷಣೆ ಮಾಡಬೇಕಾಗಿತ್ತು. ಬೀದರ್ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಜಿಲ್ಲೆಯಲ್ಲಿ 24ಘಿ7 ಕುಡಿಯುವ ನೀರು, ಜಲಜೀವನ್ ಮಿಷನ್, ಒಳಚರಂಡಿ ವ್ಯವಸ್ಥೆಯಂತಹ ಕನಿಷ್ಠ ಸೌಲಭ್ಯಗಳನ್ನು ಪೂರ್ಣಪ್ರಮಾಣದಲ್ಲಿ ಕಲ್ಪಿಸಲು ಸಾಧ್ಯವಾಗಿಲ್ಲ.
ನಮ್ಮ ಜಿಲ್ಲೆಗೆ ಇಬ್ಬರು ಸಚಿವರಿದ್ದು ಹೊಸದಾದ ಹೆಚ್ಚಿನ ಯೋಜನೆ ಜಾರಿಗೆ ತರಬಹುದು ಎನ್ನುವ ನಿರೀಕ್ಷೆ ಜನರಿಗಿತ್ತು ಅದಕ್ಕೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿಲ್ಲ ಎನ್ನುವದು ಸ್ಪಷ್ಟವಾಗಿ ಕಾಣುತ್ತಿದೆ.