ಜನರ ಧ್ವನಿ ಸಂಘಟನೆಯ ಜಿಲ್ಲಾ ಮಟ್ಟದ ಸಭೆ

ಬೀದರ,ಡಿ 4: ನಗರದ ಮಯೂರ ಬರೀದ ಶಾಹಿ ಹೋಟಲ್‍ನಲ್ಲಿ ಜನರ ಧ್ವನಿ ಸಂಘಟನೆಯ ಜಿಲ್ಲಾ ಮಟ್ಟದ ಮಹತ್ವದ ಸಭೆ ನಡೆಸಲಾಯಿತು.ಈ ಸಭೆಗೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ ಮತ್ತು ಸಂಘಟನೆಯ ಜಿಲ್ಲಾ ಹಾಗೂ ಎಲ್ಲಾ ತಾಲೂಕ ಪದಾಧಿಕಾರಿಗಳ ಜೊತೆ ಜಿಲ್ಲಾ ಮತ್ತು ರಾಜ್ಯದ ಹಾಗೂ ದೇಶದ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ಎಲ್ಲಾ ಜಾತಿ ಬಡವರಿಗೆ ಕಾನೂನಾತ್ಮಕವಾಗಿ ಹೋರಾಟ ಮಾಡಿ ನ್ಯಾಯ ಒದಗಿಸಲು ನಮ್ಮ ಜನರ ಧ್ವನಿ ಸಂಘಟನೆಯು ಸದಾ ಸಿದ್ಧ ಎಂದು ಮಹತ್ವದ ಸಭೆಯನ್ನು ಸುದೀರ್ಘವಾಗಿ ಚರ್ಚೆ ಮಾಡಲಾಯಿತು.ಇದೆ ಸಂದರ್ಭದಲ್ಲಿ ಸಂಘಟನೆಯ ಹಿರಿಯ ಮುಖಂಡರಾದ ತಿಪ್ಪಣ್ಣಾ ವಾಲಿ ಮತ್ತೋರ್ವ ಹಿರಿಯ ಮುಖಂಡರಾದ ಪ್ರಕಾಶ ಕೋಟೆ ಹಾಗೂ ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ ಸಿಂಧೆ, ಜಿಲ್ಲಾ ಉಪಾಧ್ಯಕ್ಷ ಅರವಿಂದ ಮಾಶೇಟ್ಟಿ, ಯುವ ಮುಖಂಡ ಕಿರಣ ಡಿಗ್ಗಿ, ಮತ್ತು ಸಂಘಟನೆಯ ಎಲ್ಲಾ ತಾಲೂಕ ಅಧ್ಯಕ್ಷರು ಮತ್ತು ಸಂಘಟನೆಯ ಪದಾಧಿಕಾರಿಗಳು ತಾಲೂಕ ಚಿಂಚೋಳಿ ಯುವ ಮುಖಂಡರುಗಳು ಉಪಸ್ಥಿತರಿದ್ದರು.