ಜನರ ಗೌರವಕ್ಕೆ ಒಳಗಾದ ಪತ್ರಕರ್ತನಿಗೆ ಯಾವುದೇ ಪ್ರಶಸ್ತಿ ಅವಶ್ಯ ಇಲ್ಲ: ತಗಡೂರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,31- ಸಮಾಜಕ್ಕೆ ಸ್ಪಂದಿಸಿ ಕೆಲಸ ಮಾಡುವ ಪತ್ರಕರ್ತನಿಗೆ ಜನರು ನೀಡುವ ಗೌರವವೇ ಪ್ರಶಸ್ತಿ ಇದ್ದಂತೆ. ಅದಕ್ಕಾಗಿ ಪತ್ರಕರ್ತಋಉ ಸಮಾಜಮುಖಿಗಳಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.
ಅವರು ನಿನ್ನೆ ಸಂಜೆ ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡುತ್ತಿದ್ದರು. 1932 ರಿಂದ ನಡೆದು ಬರುತ್ತಿರುವ ಸರ್ಕಾರದಿಂ ಮಾನ್ಯತೆ ಪಡೆದಿರುವ ಪತ್ರಕರ್ತರ ಏಕೈಕ ಸಂಘಟನೆ ಇದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಐದು ನೂರು ರೂ ದೇಣಿಗೆಯಿಂದ ಆರಂಭಗೊಂಡಿದ್ದು. ಇಂದು ಹೋಬಳಿ ಮಟ್ಟಕ್ಕೂ ವಿಸ್ತರಿಸಿದೆ. ನಮ್ಮದು ಕಾರ್ಯ ಮರೆತ ಪತ್ರಕರ್ತರ ಸಂಘ ಅಲ್ಲ. ಅಂತವರು ಇಲ್ಲಿರುವುದು ಬೇಡ ಎಂದರು.
ಸಮಾಜದಲ್ಲಿ ಪತ್ರಕರ್ತರು ಟೀಕೆಗಳ ಮಧ್ಯೆ ಬದುಕಬೇಕು, ಇಲ್ಲಿ ಕಾಲೆಳೆಯುವವರು ಇದ್ದಾರೆ. ಸಂಘಟನೆ ಎಂದರೆ ವಯಕ್ತಿಕ ದಾಳಿಯನ್ನು ಎದುರಿಸಬೇಕಾಗುತ್ತದೆ.  ಸತ್ಯವನ್ನು ಹೇಳದ ಪತ್ರಕರ್ತ ಇದ್ದರೇನು, ಸಮಾಜದ ಬದ್ಧತೆಗೆ ಒಳಗಾಗಿ ಕೆಲಸ ಮಾಡಬೇಕು. ಅರ್ಜಂಟ್ ಆಗಿ ಎಲ್ಲ ಆಗಬೇಕೆಂಬುವವರು ಉತ್ತಮ ಪತ್ರಕರ್ತನಾಗಲು ಸಾಧ್ಯವಿಲ್ಲ. ನಮ್ಮನ್ನು ಎದುರಿಗೆ ಕಂಡವರು ಗೌರವದಿಂದ ಮಾತನಾಡಿಸಿದಾಗ ಅದು ಎಲ್ಲಾ ಪ್ರಶಸ್ತಿಗೂ ಮಿಗಿಲಾಗಿದ್ದು.  ಆ ರೀತಿ ಬದುಕಲು ನಾವೆಲ್ಲ ಪ್ರಯತ್ನಿಸೋಣವೆಂದರು.
ಸಂಘದ ರಾಜ್ಯ ಕಾರ್ಯದರ್ಶಿ ಮತ್ತು  ಜಿಲ್ಲೆಯ ಉಸ್ತುವಾರಿಗಳಾದ  ಸೋಮಶೇಖರ ಕೆರಗೋಡು ಅವರು ಪ್ರಾಸ್ತಾವಿಕವಾಗಿ ಮಾತನಾಡಿ. ಈ ಸಂಘಟನೆ ಡಿ.ವಿ.ಜಿ ಅವರಿಂದ ಸ್ಥಾಪನೆಗೊಂಡು, ಎಂಟು ಸಾವಿರ ಸದಸ್ಯರನ್ನು ಹೊಂದಿದೆ. ಕಳೆದ ಮೂರು ವರ್ಷಗಳಿಂದ ಅಧ್ಯಕ್ಷರಾಗಿರುವ  ಶಿವಾನಂದ ತಗಡೂರು ಅವರು. ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಸಾವನ್ನಪ್ಪಿದ ಪತ್ರಕರ್ತರ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ಕೊಡಿಸಿದರು. ಅಷ್ಟೇ ಅಲ್ಲದೆ.  ಸರ್ಕಾರದಿಂದ 56 ಕೋಟಿ ರೂ ಜಾಹಿರಾತಿನ ಬಾಕಿ ಬಿಡುಗಡೆ ಮಾಡಿಸಿದರು ಅದೂ ಒಂದೇ ಬಾರಿಗೆ. ನಮಗೆ ಇನ್ನು ಅನೇಕ ಸಮಸ್ಯೆ ಇವೆ. ಅದರಲ್ಲಿ ಗ್ರಾಮೀಣರಿಗೆ ಬಸ್ ಪಾಸ್ ಮತ್ತು ಆಯುಷ್ಯ ಮಾನ್ ಆರೋಗ್ಯ ಕಾರ್ಡು ಕೊಡುವುದು.  ಕಾರ್ಡ್ ನೀಡಬೇಕಾದ  ಸಮಿತಿಯಿಂದ ಪರಿಶೀಲನೆ ಮಾಡಿ ನೀಡಲು ವಾರ್ತಾ ಇಲಾಖೆಯ ಮೇಲಾಧಿಕಾರಿಗಳು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು ಸಧ್ಯದಲ್ಲೇ ಇದು ನೆರವೇರುವ ಸಾಧ್ಯತೆ ಇದೆ ಎಂದರು. ಪತ್ರಿಕಾ ಮಾನ್ಯತೆ ಕಾರ್ಡ್ ನೀಡುವ ನಿಯಮಗಳ ಬದಲಾವಣೆಗೂ ಪ್ರಯತ್ನ ನಡೆದಿದೆ. ಇನ್ನು ವಿಳಂಬವಾಗಿರುವ ನಿವೃತ್ತ ವೇತನದ ಪ್ರಕರಣಗಳನ್ನು ಬಗೆಹರಿಸಲು ವಾರ್ತಾ ಇಲಾಖೆಯ ಮೇಲೆ ಒತ್ತಡ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ಎಂ.ರಾಜೇಶ್ವರಿ ಅವರು. ಆಡಳಿತದ ಅಂಕು ಡೊಂಕುಗಳನ್ನು ತಿದ್ದುವವರು ಪತ್ರಕರ್ತರು. ಪಾಲಿಕೆಯಿಂದ ನಗರದಲ್ಲಿ ಅವರಿಗೆ ನಿವೇಶನ ಸೌಲಭ್ಯ ಒದಗಿಸಲಿದೆಂಬ ಭರವಶೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸುದ್ದಿ ಮೂಲ ಪತ್ರಿಕೆಯ ವರದಿಗಾರ ಹೆಚ್.ಎಂ. ಮಹೇಂದ್ರ ಕುಮಾರ್ ಅವರ ಪುತ್ರಿ ಅಕ್ಷತ ಹೆಚ್.ಎಂ. ಅವರನ್ನು  ದ್ವತಿಯ ಪಿಯುಸಿಯಲ್ಲಿ  ಉತ್ತಮ ಅಂಕಗಳಿಸಿದ್ದಕ್ಕೆ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಯಾಳ್ಪಿ ವಲಿಭಾಷ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಪಾಲಿಕೆಯ ಸದಸ್ಯರಾದ ರಾಮಾಂಜನೇಯಲು, ಪಿ.ಗಾದೆಪ್ಪ, ಮಿಂಚು ಶ್ರೀನಿವಾಸಲು, ವಾರ್ತಾಧಿಕಾರಿ ಬಿ.ಕೆ.ರಾಮಲಿಂಗಪ್ಪ, ಸಂಘದ  ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ವೀರಭದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರವಿ ವೇದಿಕೆಯಲ್ಲಿ ಇದ್ದರು. ಪತ್ರಕರ್ತ ಇಮಾಮ್ ಗೋಡೇಕರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಇನ್ನಿತರ ಪದಾಧಿಕಾರಿಗಳು, ಸದಸ್ಯರು ಇದ್ದರು.