ಜನರ ಕಷ್ಟ ಅರಿಯದ ಬಿಜೆಪಿ  ಅಧಿಕಾರ ನಡೆಸಲು ಅಸಮರ್ಥ:ಸಿದ್ದರಾಮಯ್ಯ


ಸಂಜೆವಾಣಿ ವಾರ್ತೆ 
ಕುಕನೂರು ;:ಏ:೧೬-   ರಾಜ್ಯದ ಜನರು ಆಹಾರ ಧಾನ್ಯ, ಮಿತಿ ಮೀರಿದ  ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯಿಂದ ಜನ ನಲುಗಿದ್ದಾರೆ ಇಂಥ ಸನ್ನಿವೇಶದಲ್ಲಿ ಅಧಿಕಾರ ನಡೆಸಲು ಬಿಜೆಪಿಗೆ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಶನಿವಾರ ಸಂಜೆ ಇಲ್ಲಿಯ ವಿದ್ಯಾನಂದ ಗುರುಕುಲ ಶಾಲಾ ಮೈದಾನದಲ್ಲಿ
ನಡೆದ ಪ್ರಜಾಧ್ವನಿ ಹಾಗೂ ಕಾಂಗ್ರೇಸ್ ಅಭ್ಯರ್ಥಿ ಬಸವರಾಜ್ ರಾಯರೆಡ್ಡಿ ಪರ ಪ್ರಚಾರಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
ಬಿಜೆಪಿ ಪಕ್ಷದವರು ಅಧಿಕಾರ ಗದ್ದುಗೆ ಹಿಡಿಯಬೇಕಾದರೆ ಜನರಿಗೆ ಸುಳ್ಳುನ್ನು ಹೇಳಿ ಜನತೆಯ ದಾರಿ ತಪ್ಪಿಸಿ ಅಧಿಕಾರ ಅನುಭವಿಸಿದ್ದಾರೆ ಎಂದು ಬಿಜೆಪಿ ಪಕ್ಷದ ವಿರುದ್ದ ಕಿಡಿ ಕಾರಿದರು,
ತಮ್ಮ ಅವಧಿಯಲ್ಲಿ ಬಡವರು ಹಸಿವುನಿಂದ ನರಳಬಾರದೆಂದು ಅನ್ನಭಾಗ್ಯ ಯೋಜನೆ, ಶಾಲೆ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ, ಅಂತರ್ಜಲ ಮಟ್ಟ ಸುಧಾರಿಸಲು ರೈತರ ಹೊಲಗಳಲ್ಲಿ ಕೃಷಿ ಭಾಗ್ಯಯೋಜನೆಯಡಿ ಕೃಷಿ ಹೊಂಡ ನಿರ್ಮಾಣ,
ಪಟ್ಟಣಗಳಲ್ಲಿ ಕೂಲಿ ಕಾರ್ಮಿಕರು ಹೊಟ್ಟೆ ಹಸಿದಾಗ ಕಡಿಮೆ ದರದಲ್ಲಿ ಊಟ ಮಾಡಲು ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿದ್ದೇವೆ, ತಮ್ಮ ಸರಕಾರ ಅಧಿಕಾರ ಬಂದರೆ ಕೊಟ್ ೯ನಲ್ಲಿರುವ ಕೃಷ್ಣಾ ಬೀ.ಸ್ಕ್ಮಿಂ.ಯೋಜನೆ ವ್ಯಾಜ್ಯೆ  ಇತ್ಯಥ೯ಗೊಳಿಸುವುದು,ಯಲಬುರ್ಗಾ ಕ್ಷೇತ್ರದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಿ ರೈತರ ಬದುಕಿಗೆ ಆಸರೆ ಯಾಗುವುದು, ಬಿಜೆಪಿ ಸರಕಾರವು ರಾಜ್ಯ ಮತ್ತು ಕೇಂದ್ರ ದಲ್ಲಿ ಅಧಿಕಾರ ನಡೆಸಿದೆ ಆದರೆ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿ ಸ್ವೀಕರಿಸುತ್ತಿಲ್ಲ. ಪ್ರಶ್ನೆ ಮಾಡಿದ್ರೆ ಕೇಸ್, ಇಡೀ, ಐಟಿ ದಾಳಿ, ಸಿಬಿಐ ದವರನ್ನು ಛು ಬಿಡ್ತಾರೆ,ಸಂಸದ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನಹ೯ಗೊಲಿಸಿ ದ್ವೇಷದ ರಾಜಕಾರಣದಂತ ಕೀಳು ಮಟ್ಟಕ್ಕೆ ಇಳಿದಿದೆ ಎಂದು ದೂರಿದರು. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಸಮಪ೯ಕ ಬರುತ್ತಿಲ್ಲ. ಸಿ.ಎಂ.ಬೊಮ್ಮಾಯಿ ಹಾಗೂ ರಾಜ್ಯದ ೨೫ ಸಂಸದರು ಮೋದಿ ವಿರುದ್ದ ತುಟಿ ಬಿಚ್ಚುತ್ತಿಲ್ಲ.  ಮೋದಿಯವರ ಅಚ್ಚೆ ದಿನ ಎಲ್ಲಿಗೆ ಬಂತು? ಎಂದು ಪ್ರಶ್ನಿಸಿದರು. ಇನ್ನು
ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ ಆದರೆ ಬಿಜೆಪಿ ಪಕ್ಷದವರು ಹೇಳಿಕೊಳ್ಳುವಂತಹ ಯೋಜನೆಗಳನ್ನು ಮಾಡದೆ ಬರೀ ಸುಳ್ಳುನ್ನೇ ಹೇಳುತ್ತಾ ಕಾಲಹರಣ ಮಾಡಿದ್ದಾರೆ ಎಂದು ತಿಳಿಸಿದರು. ಮೆ ೧೦ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರೆಡ್ಡಿ ಅವರನ್ನು ಬಹುಮತ ದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರೆಡ್ಡಿ ಮಾತನಾಡಿ,  ರಾಜ್ಯ ಮತ್ತು ಕೇಂದ್ರದ ಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿಯಾಗಿಲ್ಲ, ಬರೀ ಜಾತಿ ಕಲಹ ಅಧಿಕವಾಗಿದೆ, ಆದ ಕಾರಣ ಚುನಾವಣೆಯಲ್ಲಿ ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್ ಗೆ ಬೆಂಬಲಿಸಿ ಆಶಿವಾ೯ದ ಮಾಡಬೇಕೆಂದು ಕೋರಿದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು,
ಕಾರ್ಯಕ್ರಮದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ,   ಬ್ಲಾಕ್ ಅಧ್ಯಕ್ಷರಾದ ಬಸವರಾಜ್ ಉಳ್ಳಾಗಡ್ಡಿ,ಹನುಮಂತ ಗೌಡ ಪಾಟೀಲ್,  ಮುಖಂಡರಾದ ಯಂಕಣ್ಣ ಯರಾಶಿ, ರಾಮಣ್ಣ ಭಜೆಂತ್ರಿ ರತ್ನಾಕರ್ ತಲ್ವಾರ್, ಗಗನ್ ನೋಟ ಗಾರ್,  ಪ್ರೇಮಾ ನೋಟಗರ್, ಸಂಗಮೇಶ್ ಗುತ್ತಿ, ಹನುಮೇಶ್ ಕಡೆಮನಿ, ಕಾಸಿಂ ಸಾಬ್ ತಳಕಲ್, ಸಿದ್ದಯ್ಯ ಕಳ್ಳಿ ಮಠ, ಸಾವಿತ್ರಿ ಗೊಲ್ಲರ, ವೀರನಗೌಡ ಬಳೂಟಗಿ,  ನೂರ್ ಅಹಮದ್ ಗುಡಿ ಹಿಂದಲ್ , ಎಂ.ಏಚ್.ರಾಜೂರ ,ರಾಮಣ್ಣ ಸಾಲಭಾವಿ ಇನ್ನಿತರರು ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು, ಸಾವಿತ್ರಿ ಮುಜಮ್ ದರ್  ಕಾಯ೯ಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಅಂಬೇಡ್ಕರ್ ವ್ರೆತ್ತದಿಂದ ತೆರೆದ ವಾಹನದಲ್ಲಿ ರೋಡ್ ಶೋ ನಡೆಯಿತು.