ಜನರ ಒಮ್ಮತದ ಮೇರೆಗೆ ಪಟ್ಟಣದಲ್ಲಿ ಮಾಸ್ಟರ್ ಪ್ಲಾನ್

ಆಳಂದ:ನ.19:ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು ಆಳಂದ ಪಟ್ಟಣಕ್ಕೆ ನಗರೋತ್ಥಾನ ಹಂತ -3 ಯೋಜನೆ ಅಡಿ 637.50 ಲಕ್ಷ ರೂ. ಗಳ ನೀರು ಸರಬರಾಜು ಕಾಮಗಾರಿಗೆ ಶಾಸಕ ಸುಭಾಷ ಆರ್. ಗುತ್ತೇದಾರ ಅವರು ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿದರು.

ಮಂಗಳವಾರ ಪಟ್ಟಣದ ಆಶ್ರಯ ಕಾಲೋನಿ ಹೆಬಳಿ ರಸ್ತೆಯ ನೀರಿನ ಟ್ಯಾಂಕಿನ ಆವರಣದಲ್ಲಿ ಏರ್ಪಡಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈಗಾಗಲೇ ದಿನಕ್ಕೆ 4.50 ಗ್ಯಾಲ್ ನೀರು ಕೊಡಬೇಕಾಗಿತ್ತು. ಅದರಲ್ಲಿ ಕೇವಲ 3 ಲಕ್ಷ ಗ್ಯಾಲ ನೀರು ಕೊಡಲಾಗುತ್ತಿದೆ. ಇನ್ನೂ ಜನತೆಗೆ ಹೊಸ ಪೈಪಲೈನ ಹಾಗೂ ಶುದ್ಧಿಕರಣ ಘಟಕದಿಂದ 4 ಲಕ್ಷ ಗ್ಯಾಲ್ ನೀರು ಕೊಡುವ ದೃಷ್ಠಯಿಂದ 637.50 ಲಕ್ಷ ರೂ. ಗಳ ಕಾವiಗಾರಿ ಇಡಲಾಗಿದೆ. ಇನ್ನೂ ಒಂದು ಟ್ಯಾಂಕ ಹೊಸ ನಿರ್ಮಾಣಕ್ಕಾಗಿ ಕೆಕೆಆರ್‍ಡಿಬಿಗೆ 3 ಕೋಟಿ ಪ್ರಸ್ಥಾವನೆ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಒಳ ಚರಂಡಿ ನಿರ್ಮಾಣಕ್ಕಾಗಿ ಸಂಬಂಧಪಟ್ಟ ರಾಜ್ಯಾಧ್ಯಕ್ಷರಿಗೆ ಗಮನಕ್ಕೆ ಅನುದಾನ ಬೇಡಿಕೆ ಇಟ್ಟಿದ್ದೇವೆ. ಆದರೆ ಪಟ್ಟಣದ ಜನತೆಯ ಒಮ್ಮತದ ಮೇರೆಗೆ ಮಾಸ್ಟರ್ ಪ್ಲಾನ್ ತಂದು ರಸ್ತೆ ಅಗಲೀಕಣಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಸದಸ್ಯರಾದ ಶ್ರೀಮತಿ ಪ್ರತಿಭಾ ಘನಾತೆ, ಅಶ್ಮೀತಾ ಚಿಟ್ಟಗೂಪಕರ, ಮೃತುಂಜಯ್ಯ ಆಲೂರೆ, ಪೀರದೋಸ ಅನ್ಸಾರಿ, ಖಾಜಿಬೀ ಪಕ್ರೋದ್ದಿನಸಾವಳಗಿ, ಅಮಜದ ಅಲಿ ಕರಜಗಿ, ನಿಂಗಮ್ಮ ಸೂರ್ಯಕಾಂತ ಹಾಗೂ ಮುಖಂಡರಾದ ಅಶೋಕ ಗುತ್ತೇದಾರ, ಮಲ್ಲಣ್ಣಾ ನಾಗೂರೆ, ಉದ್ಯಮಿ ಚನ್ನು ಪಾಟೀಲ್, ಮಂಡಲ ಅಧ್ಯಕ್ಷ ಆನಂದರಾಯ ಪಾಟೀಲ, ಕಾಮಗಾರಿ ಗುತ್ತೇದಾರ ಸತ್ಯನಾರಾಯಣ ಮತ್ತು ರಮ್ಮು ಅನ್ಸಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪುರಸಭೆ ಮುಖ್ಯಾಧಿಕಾರಿ ಬಾಬುರಾವ ವಿಭೂತೆ , ಎಇಇ ವಿಜಯಕುಮಾರ ಬಿಲಗುಂದಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.