ಜನರ ಆಶೋತ್ತಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಬಿಜೆಪಿ

ವಿಜಯಪುರ, ಆ.5-ಜನರ ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ಜನರ ಆಶೋತ್ತಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಬಿಜೆಪಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.

ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ಕಟ್ಟಿ ಭವನದಲ್ಲಿ ಜರುಗಿದ ಬಿಜೆಪಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಜನರ ಕಲ್ಯಾಣವನ್ನೇ ತನ್ನ ಧ್ಯೇಯವಾಗಿಸಿಕೊಂಡಿದೆ, ಜನರೊಂದಿಗೆ ನೇರ ಒಡನಾಟ ಹೊಂದಿರುವ ಪಕ್ಷವಾಗಿದೆ, ಕಾಂಗ್ರೆಸ್ ಪಕ್ಷ ಚುನಾವಣಾ ಬಂದಾಗ ಮಾತ್ರ ಜನರನ್ನು ನೆನಪಿನಲ್ಲಿರಿಸಿಕೊಳ್ಳುತ್ತದೆ, ಆದರೆ ಬಿಜೆಪಿಗೆ ಸದಾ ಜನರ ಧ್ಯಾನ, ಜನರೇ ಧ್ಯೇಯ ಎಂದರು. ಜವಾಬ್ದಾರಿಯುತ ಕಾರ್ಯಕರ್ತರ ಪಡೆ ಬಿಜೆಪಿಯಲ್ಲಿದೆ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪಕ್ಷವನ್ನು ಇನ್ನಷ್ಟೂ ಬಲವಾಗಿ ಸಂಘಟಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ವೈಚಾರಿಕತೆ, ದೇಶಾಭಿಮಾನವನ್ನು ಉಸಿರಾಗಿಸಿಕೊಂಡಿರುವ ಬಿಜೆಪಿ ಪಕ್ಷವನ್ನು ಮೆಚ್ಚಿ ಕೋಟ್ಯಂತರ ಕಾರ್ಯಕರ್ತರು ಬಿಜೆಪಿಗೆ ಕೈ ಜೋಡಿಸಿದ್ದಾರೆ, ದೇಶದ ಪ್ರಗತಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಧ್ಯೇಯೋದ್ದೇಶವನ್ನು ಪ್ರತಿನಿತ್ಯ ಮನಸ್ಸಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟನೆ ಮಾಡಬೇಕಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಅದಮ್ಯ ದೇಶಭಕ್ತಿ, ಜನಪರ ಕಾಳಜಿಯಿಂದ ಇಡೀ ವಿಶ್ವದಲ್ಲಿಯೇ ಮಹಾನ್ ನಾಯಕರಾಗಿ ಗುರುತಿಸಿಕೊಂಡಿದ್ದಾರೆ, ಈ ಬದ್ಧತೆ, ಕಾಳಜಿಯನ್ನು ಕಾರ್ಯಕರ್ತರು ಸ್ಪೂರ್ತಿಯಾಗಿರಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಬೆಳಗಾವಿ ವಿಭಾಗದ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಪ್ರಧಾನ ಕಾರ್ಯದರ್ಶಿಗಳಾದ ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗೂರ, ಬಸವರಾಜ್ ಬಿರಾದಾರ, ಉಮೇಶ ಕಾರಜೋಳ, ಭೀಮಾಶಂಕರ ಹದನೂರ, ಡಾ.ಸುರೇಶ ಬಿರಾದಾರ, ಡಾ.ಬಾಬು ರಾಜೇಂದ್ರ ನಾಯಕ್, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ ರವಿಕಾಂತ ಬಗಲಿ ಅನೀಲ ಜಮಾದಾರ, ಗೋಪಾಲ ಘಟಕಾಂಬಳೆ, ಚಿದಾನಂದ ಚಲವಾದಿ, ಭೀಮ್ ಸಿಂಗ್ ರಾಠೋಡ್ ಪಾಲ್ಗೊಂಡಿದ್ದರು.