
ಮಾನ್ವಿ ಪೆ ೨೬ :- ಕಳೆದ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಆಶಿರ್ವಾದದಿಂದ ದ್ವೀತಿಯ ಸ್ಥಾನ ಪಡೆದಿದ್ದು ಮರೆಯುವಂತಿಲ್ಲ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಈ ಬಾರಿಯೂ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದು ತಮ್ಮಯ ಆಶಿರ್ವಾದ ಇದ್ದೇ ಇರುತ್ತದೆ ಎಂದು ನಾನು ನಂಬಿದ್ದೇನೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಎಂ ಈರಣ್ಣ ಹೇಳಿ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು..
ಪಟ್ಟಣದ ಖಾದ್ರಿ ಫಂಕ್ಷನ್ ಹಾಲಿನಲ್ಲಿ ನಡೆದ ಹಿರಿಯ ಮುಖಂಡರ, ಎಂ ಈರಣ್ಣ ಅಭಿಮಾನಿಗಳ, ಕಾರ್ಯಕ್ರಮ ಸಮಾವೇಶವನ್ನು ದೀಪಾ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತಾನಾಡಿ ಅವರು ನಾವು ಈಗಾಗಲೇ ಕ್ಷೇತ್ರದಲ್ಲಿ ಅನೇಕ ಜನಪರ ಸೇವೆಯನ್ನು ಮಾಡಲಾಗಿದ್ದು ಮುಂದೆಯೂ ಕೂಡ ಅಭಿವೃದ್ಧಿ ಕೆಲಸದ ಗುರಿಯನ್ನು ಹೊಂದಿದ್ದೇನೆ ಎಂದರು ಅದಕ್ಕಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸೊಸೆಯಾದ ಡಾ ತನುಶ್ರೀ ಅವರು ಸ್ಪರ್ಧೆ ಮಾಡಲಿದ್ದು ತಮ್ಮಯ ಆಶಿರ್ವಾದ ಇದ್ದಲ್ಲಿ ಖಂಡಿತವಾಗಿ ನಾವು ಗೆಲುವು ಸಾಧಿಸುವುದಕ್ಕೆ ಸಾಧ್ಯ ಎಂದರು.. ನಂತರ ಅನೇಕ ಗಣ್ಯರು ಮಾತಾನಾಡಿ ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಲಾಗುತ್ತದೆ ಹಾಗೂ ಬೆಂಬಲಿಸುವಂತೆ ಪ್ರಚಾರ ಮಾಡಲಾಗುತ್ತದೆ ಎಂದರು..
ನಂತರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪ್ರತಿ ಹಳ್ಳಿಗಳಲ್ಲಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪ್ರತಿ ಪಟ್ಟಣದ ವಾರ್ಡ್ ಗಳಲ್ಲಿ, ಓವರ್ ಹೆಡ್ ಟ್ಯಾಂಕ ನಿರ್ಮಿಸಿ ಸಮಗ್ರ ಕುಡಿಯವ ನೀರಿನ ವ್ಯವಸ್ಥೆ ಮಾಡುವುದು, ಪ್ರತಿ ಹಳ್ಳಿಗಳಿಗೆ ರಸ್ತೆ, ಚರಂಡಿ ವಿದ್ಯತ್ ದ್ವೀಪ ಸಮಪ್ರಕ ಸಂಪರ್ಕ ಸೇತುವೆಗಳ ನಿರ್ಮಾಣ. ಹೋಬಳಿಗೆ ಒಂದು ಸು ಸಜ್ಜಿತ ಅಂಬುಲೇನ ಕಲ್ಪಸುವುದು. ಪ್ರತಿ ಹಳ್ಳಿಗಳಿಗೆ ಆರೋಗ್ಯ ಕಟ್ಟಡದ ವ್ಯವಸ್ಥೆ ಹಾಗೂ ತುರ್ತು ಚಿಕಿತ್ಸೆ ಆರೋಗ್ಯ ಕೇಂದ್ರ, ಪ್ರತಿ ಮೂರು ತಿಂಗಳಗೊಮ್ಮೆ ಹಳ್ಳಿಗಳಲ್ಲಿ ನುರಿತ ವೈದ್ಯ ತಂಡದಿಂದ ಆರೋಗ ತಾಪಸಾಣಾ ಕಾರ್ಯಕ್ರಮ ಮಾನಿ- ಕವಿತಾಳ ಸಿರವಾರ ಪಟ್ಟಣಗಳಲ್ಲಿ ೨೫ ಬೆಡ್ಡಿನ ಸುಸಜ್ಜಿತ ಹೇರಿಗೆ ಅಸ್ಪತ್ರೆಯನ್ನು ತಜ್ಞ ವೈದ್ಯರಿಂದ ಆರಂಭಿಸಲಾಗುವುದು,
ಶಿಕ್ಷಣ ಕ್ಷೇತ್ರ,ಆರೋಗ್ಯ, ಶಿಕ್ಷಣ, ರೈತರಿಗೆ, ಸೇರಿದಂತೆ ಮೂಲಕ ಸೌಕರ್ಯಗಳನ್ನು ಓದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು..
ಈ ಸಂದರ್ಭದಲ್ಲಿ ಅನೇಕ ಗಣ್ಯರು ಹಾಗೂ ಮಾನವಿ ಸಿರವಾರ ಕ್ಷೇತ್ರದ ಎಂ ಈರಣ್ಣನವರ ಅಭಿಮಾನಿಗಳು, ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು..