ಜನರ ಆರ್ಥಿಕ ಬಲವರ್ಧನೆಗೆ “ಸಹಕಾರ” ಅಗತ್ಯ- ಶಿವನಗೌಡ ಪಾಟೀಲ್

ರಾಯಚೂರು ಸೌಹಾರ್ದ ಪತ್ತಿನ ಸಹಕಾರಿ ೯ ನೇ ವಾರ್ಷಿಕ ಸಭೆ.
ರಾಯಚೂರು.ಸೆ.೨೫.ದೇಶದಲ್ಲಿ ಸಹಕಾರ ವ್ಯವಸ್ಥೆ ಬಡ, ಮದ್ಯಮ ಜನರ ಆರ್ಥಿಕ ಬಲವರ್ಧನೆಗಾಗಿ ನಿರಂತರ ಶ್ರಮಿಸುತ್ತಿವೆ, ಈ ಸಹಕಾರಿ ಬ್ಯಾಂಕ್ ಗಳಿಂದ ದೇಶದ ಆರ್ಥಿಕ ಸ್ಥಿರತೆ ಕಾಪಾಡುವಲ್ಲಿ ಪ್ರಮೂಖ ಪಾತ್ರವಹಿಸುತ್ತವೆ ಎಂದು ರಾಯಚೂರು ಡಿವೈಎಸ್ ಪಿ ಶಿವನಗೌಡ ಪಾಟೀಲ್ ಅಭಿಪ್ರಾಯ ತಿಳಿಸಿದರು.
ರಾಯಚೂರು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬ್ಯಾಂಕ್ ನಿಂದ ನೃಪತುಂಗ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ೯ ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿ ಮಾತನಾಡಿ, ರಾಯಚೂರು ಸೌಹಾರ್ದ ಸಹಕಾರಿ ಬ್ಯಾಂಕ್ ಎಲ್ಲಾ ಗ್ರಾಹಕರ ವಿಶ್ವಾಸದೊಂದಿಗೆ ಆರ್ಥಿಕ ಸಹಾಯದಲ್ಲಿ ಮುಚೂಣಿಯಲ್ಲಿದೆ ಎಂದು ತಿಳಿಸಿದರು.
ನಂತರ ಬೆಟ್ಟದೂರು ಆಸ್ಪತ್ರೆ ಮುಖ್ಯಸ್ಥ ಡಾ. ಜಯಪ್ರಕಾಶ ಪಾಟೀಲ್ ಹಾಗೂ ಬಸವರಾಜ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ರಾಯಚೂರು ಸೌಹಾರ್ಧ ಸಹಕಾರಿ ನಿಯಮಿತ ಬ್ಯಾಂಕ್ ನ ಎಲ್ಲಾ ಸಿಬ್ಬಂದಿಗಳು ನಯವಿನಯದಿಂದ ಗ್ರಾಹಕರ ಹಿತಕಾಪಾಡುವಲ್ಲಿ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಆಗಮಿಸಿದ್ದ
ಗಿರಿಧರ ಪೂಜಾರಿ ಮಾತನಾಡಿ, ದೇಶದಲ್ಲಿ ವರ್ಷಕ್ಕೆ ಸುಮಾರು ೮೮ ಲಕ್ಷ ವಿದ್ಯಾರ್ಥಿಗಳು ಪದವಿದರರಾಗುತ್ತಿದ್ದಾರೆ ಆದರೆ ಇದರಲ್ಲು ಕೇವಲ ೮ ಲಕ್ಷ ವಿದ್ಯಾರ್ಥಿಗಳಿಗೆ ಕೆಲಸ ಸಿಗ್ತಾಯಿದೆ, ಇನ್ನುಳಿದ ಹಲವು ವಿದ್ಯಾರ್ಥಿಗಳಿಗೆ ಸಹಕಾರಿ ವ್ಯವಸ್ಥೆ ಉದ್ಯೋಗ ನೀಡಿದೆ. ಸಹಕಾರ ಬ್ಯಾಂಕನ ಮೂಲ ಉದ್ದೇಶವೆ ಸಹಕಾರ ನೀಡುವದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಬ್ಯಾಂಕ್ ನ ಅದ್ಯಕ್ಷರಾದ ವಿಶ್ವನಾಥ ಹಿರೇಮಠ ಮಾತನಾಡಿ, ಜಿಲ್ಲೆಯ ಪ್ರಾಮಾಣಿಕ ಗ್ರಾಹಕರು ಹಾಗೂ ಸಿಬ್ಬಂದಿಗಳು ಬ್ಯಾಂಕ್ ಬೆಳವಣಿಗೆಯ ಸ್ಥಂಭಗಳಾಗಿದ್ದಾರೆ. ಎಲ್ಲರ ಪರಿಶ್ರಮದ ಕೆಲಸದಿಂದ ಸಂಸ್ಥೆ ಬೆಳವಣಿಗೆ ಸಾಧ್ಯವಾಗಿದೆ ಎಂದರು.
ಬ್ಯಾಂಕ್ ನ ಕರಿಯಪ್ಪ ನಾಯಕ ಸಹಕಾರಿಯ ವಾರ್ಷಿಕ ವರದಿಯನ್ನು ಮಂಡಿಸಿದರು. ನಮ್ಮ ಸಹಕಾರಿಯೂ ಗಣನೀಯ ಪ್ರಮಾಣದಲ್ಲಿ ಅಭಿವೃದ್ದಿಯತ್ತ ಸಾಗುತ್ತಿದೆ. ೨೦೨೦-೨೧ ನೆ ಸಾಲಿನಲ್ಲಿ ಒಟ್ಟು ೧೦,೭೩,೭೪೪ ರೂ ಗಳು ನಿವ್ವಳ ಲಾಭವಾಗಿದೆ ಎಂದು ವರದಿಯಲ್ಲಿ ಮಂಡಿಸಿದರು.
ಕಾರ್ಯಕ್ರಮದಲ್ಲಿ, ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾದ್ಯಕ್ಷರಾದ ಬಸವರಾಜ ನಾಗಡದಿನ್ನಿ, ಕಾನೂನು ಸಲಹೆಗಾರರಾದ ಇಮ್ತಿಯಾಜ್, ವೆಂಕಟೇಶ, ಹನುಮಂತ, ನಿಂಗಪ್ಪ, ಬ್ಯಾಂಕ ನ ಸಿಬ್ಬಂದಿಗಳಾದ ಅವಿನಾಶ, ದಿಲೀಪ ಕುಮಾರ,ರಾಹುಲ್ ಗೌಡ, ಮಂಜುಳಾ ರಡ್ಡಿ, ರಾಜೇಶ್ವರಿ, ಅನಿತಾ, ಶ್ರೆಯಾ, ನಾಗಾರಜ, ನರಸಿಂಹಲು, ರವಿ , ರಮೇಶ, ಮಂಜು ಸೇರಿದಂತೆ ಇತರರಿದ್ದರು.