
ಹುಮನಾಬಾದ್: ಮಾ.2:ತುರ್ತು ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಳ್ಳಿಗಳ ಬಡಜನರ ಆರೋಗ್ಯ ಸುಧಾರಣೆಗೆ ಸಂಬಧಿಸಿದತೆ ಆಂಬುಲೆನ್ಸ್ ಸೇವೆ ಅಗತ್ಯವಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ವಿತರಿಸಲಾದ ಹೈಟೇಕ್ ಆಂಬುಲೆನ್ಸ್ ಚಾಲನೆ ನೀಡಿ ಮಾತನಾಡಿದರು.
ಮತಕ್ಷೇತ್ರ ಜನರ ಬೇಡಿಕೆಂತೆ ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ೪೫ ಲಕ್ಷ ಅನುದಾನ ವೆಚ್ಚ ಮಾಡುವ ಮೂಲಕ ಹೈಟೇಕ್ ಆಂಬುಲೆನ್ಸ್ ತರಲಾಗಿದೆ. ಸರಕಾರದ ಯೋಜನೆಯ ಸದುಪಯೋಗ ಕ್ಷೇತ್ರ ಜನರು ಪಡೆದುಕೊಳ್ಳಬೇಕು. ರೋಗಿಗಳ ಆರೋಗ್ಯ ಸುಧಾರಣೆಗೆ ವೈದ್ಯಾಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ತಿಳಿಸಿದರು.
ರೋಗಿಗಳ ಆರೋಗ್ಯ ಸುಧಾರಣೆಗೆ ಪೂರಕವಾಗಿ ಇಗಾಗಲೇ ಸರಕಾರದಿಂದ ಹಾಗೂ ಎನ್‌ಜಿಓಗಳ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ಸಾಕಷ್ಟು ಯೋಜನೆಗಳನ್ನು ನೀಡಲಾಗಿದೆ. ಆಸ್ಪತ್ರೆಯ ಬೆಳವಣಿಗೆಗೆ ಸಂಬಧಿಸಿದತೆ ಸರಕಾರ ವಿವಿಧ ಯೋಜನೆಯಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ವೈದ್ಯಾಧಿಕಾರಿಗಳು ಸೂಕ್ತ ಸಮಯಲ್ಲಿ ಆಸ್ಪತ್ರೆಯಲ್ಲಿದ್ದು, ರೋಗಿಗಳ ಯೋಗಕ್ಷೇಮ ವಿಚಾರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ, ರೋಗಿಗಳ ಆರೋಗ್ಯ ಸುಧಾರಣೆಗೆ ಪೂರಕವಾದ ವಾತಾವರಣ ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದೆ. ಹೀಗಾಗಿ ಸಣ್ಣ ಸಣ್ಣ ಸಮಸ್ಯೆಗಳಿಗೂ ನಗರ ಪ್ರದೇಶದ ಆಸ್ಪತ್ರೆಗೆ ಕಳುಹಿಸಬೇಡಿ, ಇಲ್ಲಿ ಬಗೆಹರಿಯದ ಸಮಸ್ಯೆಗಳಿದ್ದರೆ ಮಾತ್ರ ಸೌಲಭ್ಯವಿರುವ ಆಸ್ಪತ್ರೆಗೆ ಕಳುಹಿಸಬೇಕು. ಜತೆಯಲ್ಲಿ ಆಸ್ಪತ್ರೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಡಾ. ನಾಗನಾಥ ಹುಲಸೂರೆ, ಡಾ. ಬಸವಂತರಾವ ಬುಮ್ಮದ್, ವಿಶ್ವ ಸೈನೀರ್, ಡಾ. ದಿಲೀಪ ಡೊಂಗ್ರೆ, ಶಿವಕುಮಾರ ಕಿವಡೆ, ಭಗವಂತ, ಶಿವಕುಮಾರ ಘಾಟಬೋರಳ್, ಸಚ್ಚಿದಾನಂದ ಮಠಪತಿ ಸೇರಿ ಅನೇಕರಿದ್ದರು.