ಜನರು ನೀಡಿದ ತೆರಿಗೆ ಹಣದಲ್ಲಿ ನಾವು ಮೆರೆಯಬಾರದು

ಲಿಂಗಸೂಗೂರು ಏ ೦೧
ನಮ್ಮ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಜನಪರ ಕಾಳಜಿಯುಳ್ಳ ಆಡಳಿತ ಮಾಡುತ್ತಿದೆ, ರಾಜ್ಯದಲ್ಲಿ ಕೂಡ ಬೊಮ್ಮಾಯಿ ಹಾಗೂ ಯಡ್ಡಿಯೂರಪ್ಪ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ ಜನರ ನಾಡಿಮಿಡಿತ ಅರಿತು ಯಶಸ್ವಿಯಾಗಿ ಅಧಿಕಾರ ನಡಿಸಿದ್ದಾರೆ, ಹಾಗಾಗಿ ಜನರ ಆಶೀರ್ವಾದ ನಮ್ಮ ಪಕ್ಷದ ಮೇಲೆ ಇದೆ ಈ ಭಾರಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಸುದರ್ಶನ್ ಸಜ್ಜನ್ ಹೇಳಿದರು.
ಅವರಿಂದು ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಬಿಜೆಪಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಂಧರ್ಭದಲ್ಲಿ ಮಾತನಾಡುತ್ತಾ ರಾಜಕೀಯಕ್ಕೆ ಬರೋದು ಜನರ ಸೇವೆ ಮಾಡಲು, ಯಾರದೋ ದುಡ್ಡು ಎಂದು ತಿಳಿದು ಅಧಿಕಾರಕ್ಕೆ ಬಂದಾ ಮೇಲೆ ಬೇಕಾಬಿಟ್ಟಿ ಕೆಲಸ ಮಾಡಬಾರದು,ಮತ ನೀಡಿದ ಪ್ರಭುಗಳನ್ನು ಯಾವತ್ತೂ ಮರೆಯಬಾರದು ಅವರ ನಂಬಿಕೆಗೆ ಮೋಸ ಮಾಡುವ ಕಾರ್ಯ ಎಂದಿಗೂ ಮಾಡಬಾರದು,ಜನರು ನೀಡಿದ ತೆರಿಗೆ ಹಣದಲ್ಲಿ ನಾವು ಮೆರೆಯಬಾರದು ಅದರ ಬದಲಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು, ಜನರು ಮತ ನೀಡಿ ಗೆಲ್ಲಿಸಿದ್ದಕ್ಕೂ ಪ್ರಯೋಜನವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಪಕ್ಷದ ಅನೇಕ ಮುಖಂಡರು ಕಾರ್ಯಕರ್ತರು ಅವರ ಜೊತೆಗೆ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.