ಜನರಿಗೆ ವ್ಯಾಕ್ಸಿನ್ ಬಗ್ಗೆ ತಪ್ಪು ಗ್ರಹಿಕೆ, ಭಯವಿದ್ದು ಸೂಕ್ತ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸೂಚನೆ

ವಿಜಯಪುರ, ಮೇ.27-ಜನರಲ್ಲಿ ಕೋವಿಡ್-19 ವ್ಯಾಕ್ಸಿನ್ ಬಗ್ಗೆ ತಪ್ಪು ಗ್ರಹಿಕೆ, ಭಯವಿದ್ದು, ಈ ವ್ಯಾಕ್ಸಿನ್ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಪಿ ಸುನಿಲ್‍ಕುಮಾರ್ ಅವರು ಸೂಚಿಸಿದ್ದಾರೆ.
ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿಂದು ಗ್ರಾಮ ಪಂಚಾಯತ್ ಮಟ್ಟದ ಟಾಸ್ಕ್ ಫೆÇೀರ್ಸ ಸಭೆ ನಡೆಸಿದ ಅವರು,ಕಾರ್ಯಪಡೆ ಸದಸ್ಯರೆಲ್ಲರು ಕೊರೊನಾ 19ರ ಬಗ್ಗೆ ಮನೆ ಮನೆಗೆ ತೆರಳಿ ಹೆಚ್ಚು ಜಾಗೃತಿ ಮೂಡಿಸಿ, ಒಬ್ಬರಿಗೊಬ್ಬರು ಸಾಮಾಜಿಕ ಅಂತರ ಹಾಗೂ ಮುಖಗವಸ, ಸ್ಯಾನಿಟೈಸರ್ ಬಳಸಲು ತಿಳಿಹೇಳಬೇಕು. 45 ವರ್ಷಕ್ಕಿಂತ ಮೇಲ್ಪಟವರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಲು ಪ್ರೆರೇಪಿಸಬೇಕು. ಗ್ರಾಮೀಣ ಭಾಗದ ಜನರಲ್ಲಿ ವ್ಯಾಕ್ಸಿನ್ ಬಗ್ಗೆ ತಪ್ಪು ಗ್ರಹಿಕೆ ಮತ್ತು ಭಯವಿದ್ದು, ವ್ಯಾಕ್ಸಿನ್ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಮನೆಮನೆಗೆ ತೆರಳಿ ಕೋವಿಡ್-19 ಸಮೀಕ್ಷೆ ಮಾಡುತ್ತಿದ್ದು ಅವರಿಗೆ ಸಹಕಾರ ನೀಡಲು ಹಾಗೂ ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಲು ಹೇಳಿದರು.
45 ವಯಸ್ಸಿನ ಮೇಲ್ಪಟ್ಟವರು ಕೂಡಲೇ ಕೋವಿಡ್-19 ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಕೊಳ್ಳಲು ತಿಳಿಸಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮಗಳಲ್ಲಿ ನಡೆಯುವ ಸಂತೆ ಜಾತ್ರೆ ಇನ್ನಿತರೆ ಸಭೆ-ಸಮಾರಂಭಗಳನ್ನು ನಿಷೇಧಿಸಿದ್ದು ಗ್ರಾಮಸ್ಥರು ಅದರಲ್ಲಿ ಪಾಲ್ಗೊಳ್ಳುವುದು ಆಗಲಿ ಅಥವಾ ಸಹಕಾರ ನೀಡುವುದಾಗಲಿ ಮಾಡಬಾರದು ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್-19 ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಹಾಗೂ ಸಾಮಾಜಿಕ ಅಂತರ,ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸಬೇಕು ಎಂದು ಹೇಳಿದರು.
ಕೋವಿಡ್-19 ಪಾಸಿಟಿವ್ ಬಂದ ವ್ಯಕ್ತಿಗಳು ಹೋಂ ಐಸೋಲೇಶನ್ ಮಾಡಿಕೊಳ್ಳಲು ತಿಳಿಸುತ್ತಾ ಸೂಕ್ತ ಚಿಕಿತ್ಸೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಲು ಹಾಗೂ ಔಷಧಿ ಉಪಚಾರವನ್ನು ತಪ್ಪದೇ ಪಡೆಯಬೇಕು ಹಾಗೂ ಸಂಖ್ಯೆ ಪ್ರಮಾಣವು ಹೆಚ್ಚಾದಲ್ಲಿ ಕೂಡಲೇ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಲು ತಿಳಿಸಿದರು.
ಗ್ರಾಮಸ್ಥರು ವಿನಾಕಾರಣ ಮನೆಯಿಂದ ಹೊರಗೆ ಬರುವುದಾಗಲಿ ಅಥವಾ ಗುಂಪು ಕೊಡುವುದಾಗಲಿ ನಿಷೇಧವಿದ್ದುಮನೆಯಿಂದ ಹೊರಗೆ ಬರದಂತೆ ಸೂಚಿಸಿದರು, ಹಾಗೂ ಕೋವಿಡ್ ವಾರಿಯರ್ಸ್ ಆದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಮಟ್ಟದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಈ ರೋಗವು ಹೆಚ್ಚಿನ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತಿದೆ. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿಕಾರ್ಯನಿರ್ವಹಿಸಲು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಜನರು ಸಾಯಂಕಾಲ ಸಮಯದಲ್ಲಿ ಚಹಾ, ಹೊಟೇಲ, ಅಂಗಡಿ ಮುಂಗಟ್ಟು ತಗೆದಿಟ್ಟು, ಜನರು ಗುಡಿ ಕಟ್ಟೆಗೆ ,ಗಿಡದ ಕಟ್ಟೆಗೆ ಕೂತು ಮಾಸ್ಕ್ ದರಿಸದೆ ಸಾಮಾಜಿಕ ಅಂತರ ಕಾಯ್ದುಕೊಳದೆ ಇರುವುದು ಗಮನಕ್ಕೆ ಬಂದಿದ್ದು, ಟಾಸ್ಕ್ ಪೆÇೀರ್ಸ್ ಸದಸ್ಯರೆಲ್ಲರು ಜನಸಾಮಾನ್ಯರಲ್ಲಿ ಕಟ್ಟುನಿಟ್ಟಾಗಿ ಸರಕಾರದ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಬೇಕು. ಮಾತು ಕೇಳದಿದ್ದಲ್ಲಿ ಪೆÇೀಲಿಸ್ ರ ನೆರವು ಪಡೆಯಬೇಕು. ಹತ್ತು ಗಂಟೆವರೆಗೆ ಮಾತ್ರ ದಿನಸಿ ಅಂಗಡಿ, ಅಗತ್ಯ ವಸ್ತುಗಳಿಗೆ ಅವಕಾಶವಿದ್ದು, ಅಷ್ಟರಲ್ಲೆ ಎಲ್ಲರೂ ಅಗತ್ಯ ವಸ್ತುಗಳು ಪಡೆದುಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಇಂಡಿ ಉಪ ವಿಭಾಗಾಧಿಕಾರಿ ರಾಹುಲ ಸಿಂಧೆ, ಮಾತನಾಡಿ ರೈತರು ಬೆಳೆದ ಉತ್ಪನ್ನ ಸಾಗಿಸಲು ಯಾವುದೆತರ ಅಡಿಪಡಿಸುವಂತಿಲ್ಲ ಎಂದು ಪೆÇೀಲಿಸರಿಗೆ ಸೂಚಿಸಲಾಗಿದೆ ಎಂದು ಹೇಳಿ ಕೋವಿಡ್ 19 ವ್ಯಾಕ್ಸಿನ್ ಪಡೆದು ಕೊಳ್ಳಲು ತಿಳಿಸಿದರು.
ಸಭೆಯಲ್ಲಿ ಪಿಡಿಓ, ನರ್ಸ್, ಆಶಾ ಕಾರ್ಯಕರ್ತೆಯರು ಈ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು 7614 ಜನ ಸಂಖ್ಯೆಯಿದ್ದು ಅದರಲ್ಲಿ 1500 ಕೂ ಅಧಿಕ ಜನ 45 ವರ್ಷ ಮೇಲ್ಪಟವರಿದ್ದು, ಒಟ್ಟು 1500 ಜನರಲ್ಲಿ 400 ಜನ ವ್ಯಾಕ್ಸಿನ ಪಡೆದಿದ್ದಾರೆಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಿಂದಗಿ ತಹಶೀಲ್ದಾರ ಸಂಜೀವಕುಮಾರ ದಾಸರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ, ಕೊಕಟನೂರ ಗ್ರಾಮ ಪಂಚಾಯತ ಪಿಡಿಒ, ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.