ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ವಿಫಲ: ವಾಟಾಳ್ ನಾಗರಾಜ್

ಮೈಸೂರು: ಮೇ.18: ಕೇಂದ್ರ ಸರ್ಕಾರ ಕರ್ನಾಟಕವನ್ನು ಕಡೆಗಣಿಸಿದೆ. ಕರೋನದಿಂದ ಮರಣ ಹೊಂದಿದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷರಾದ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಇಂದು ಬೆಳಿಗ್ಗೆ ನಗರದ ಆರ್.ಗೇಟ್ ವೃತ್ತದ ಬಳಿ ಘೋಷಣೆ ಕೂಗಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು, ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ಆಮ್ಲಜನಕ ಮತ್ತು ಲಸಿಕೆಯನ್ನು ಸಮರ್ಪಕವಾಗಿ ಪೂರೈಸಬೇಕು ಎಂದರು.
ಕರೋನ ಹೋಗಲಾಡಿಸಲು ಸರ್ಕಾರ ವಿಫಲವಾಗಿದೆ, ಸರ್ಕಾರಕ್ಕೆ ಲಾಕ್ ಡೌನ್ ಒಂದೇ ಗೊತ್ತಿರುವುದು. ನಾನಂತು ಲಾಕ್ ಸ್ಪಷ್ಟ ವಿರೋಧ ಇದು ಬಡವರ ವಿರೋಧಿ. ಸರ್ಕಾರ, ಅಧಿಕಾರಿಗಳು ಆರಾಮವಾಗಿತಿರುಗಾಡಲು ಲಾಕ್ ಡೌನ್ ಮಾಟಿದ್ದಾರೆ. ಕ್ಯಾಬಿನೆಟ್ ಸಂಪೂರ್ಣವಾಗಿ ಅಒ ಮಾತನ್ನು ಕೇಳುತ್ತಿಲ್ಲ. ಸಚಿವ ಸಂಪುಟ ಎಲ್ಲಿ ಹೋಗಿದೆ. ಜಿಲ್ಲಾ ಮಂತ್ರಿಗಳು ಏನು ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಸರ್ಕಾರಕ್ಕೆ ಒಂದು ಚಿಂತನೆ ಇಲ್ಲ. ರಾಜ್ಯದ ಪ್ರತಿಯೊಬ್ಬ ಪ್ತಜೆಗೂ ಲಸಿಕೆ ಕೊಡಬೇಕು ಎಂದು ಹೇಳಿದರು.
ಯಡಿಯೂರಪ್ಪ ಸರ್ಕಾರ ಭದ್ರವಾಗಿಲ್ಲ, ಜನರನ್ನು ಕೊಲ್ಲುತ್ತಿದ್ದಾರೆ. ಆಕ್ಸಿಜನ್ ಇಲ್ಲದೆ ಜನರು ಸಾಯುತಿದ್ದಾರೆ. ಯಡಿಯೂರಪ್ಪ ರವರು ತಮ್ಮ ಸುತ್ತ ಬೇಲಿ ಹಾಕಿಕೊಂಡಿದ್ದಾರೆ. ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಕೇಂದ್ರ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ, ಆಕ್ಸಿಜನ್ ಹಂಚಿಕೆಗಾಗಿ ಸುಪ್ರೀಂ ಕೋರ್ಟ್ ಹೋಗುವ ಪರಿಸ್ಥಿತಿ ಇದೆ. ಸಂಸದರು ಕೂಡಲೇ ರಾಜೀನಾಮೆ ನೀಡಬೇಕು. SSಐಅ & PUಅ ಪರೀಕ್ಷೆ ನಡೆಸದೆ ಪಾಸ್ ಮಾಡಬೇಕು. ಇದಕ್ಕಾ ಸರ್ಕಾರದ ವಿರುದ್ಧ ಚಳವಳಿ ಮಾಡಬೇಕಾಗುತ್ತದೆ.
ಲಾಕ್ ಡೌನ್ ಇಲ್ಲದೆ ಕರೋನ ಹೇಗೆ ಕಂಟ್ರೋಲ್ ಮಾಡಬಹುದು ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ. ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಒದಗಿಸಬೇಕು. ಆಟೋ ಚಾಲಕರು,ವ್ಯಾಪಾರಿಗಳು ಹಾಗೂ ದಿನಗೂಲಿ ನೌಕರರಿಗೆ ತಿಂಗಳಿಗೆ 10 ಸಾವಿರ ಕೊಟ್ಟು ಲಾಕ್ ಡೌನ್ ಮಾಡಿ. ಬ್ಯಾಂಕ್ ಲೋನ್ ಅಸಲು ಬಡ್ಡಿ ಮನ್ನಾ ಮಾಡಿ. ಹೊಟ್ಟೆಗೆ ಅನ್ನಕೊಡದೆ ಲಾಕ್ ಡೌನ್ ಮಾಡುವುದು ಎಷ್ಟು ಸರಿ ಎಂದರು.