ಜನರಿಗೆ ಉಚಿತ ರೇಷನ್, ವ್ಯಾಕ್ಸಿನ್ – ಸಚಿವ ಈಶ್ವರಪ್ಪ

ಸಿಂಧನೂರು.ಜು.೯-ಕೋವಿಡ್ ಸಂಕಷ್ಟದಲ್ಲಿ ಇರುವ ದೇಶದ ಜನರಿಗೆ ಪ್ರಧಾನಿ ಮೋದಿ ಉಚಿತ ರೇಷನ್ ಹಾಗೂ ವ್ಯಾಕ್ಸಿನ್ ನೀಡಲು ನಿರ್ಧರಿಸಿದ್ದು ಸ್ವಾಗತಾರ್ಹ ಮೋದಿ ಬಗ್ಗೆ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ನಗರದಲ್ಲಿ ಬಿ.ಜೆ.ಪಿ ಮುಂಖಡ ಕೆ.ವಿರೂಪಾಕ್ಷಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ೮೦ ಕೋಟಿ ಜನರಿಗೆ ಉಚಿತ ರೇಷನ್ ಹಾಗೂ ವ್ಯಾಕ್ಸಿನ್ ನೀಡುತ್ತಿದ್ದಾರೆ ಎಂದರು.
ಸಿಎಂ ಬದಲಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ರೇಣುಕಾಚಾರ್ಯ ಹಾಗೂ ಬಸವನಗೌಡ ಪಾಟೀಲ ಯತ್ನಾಳ ಇವರಿಬ್ಬರು ತುಂಟರಿದ್ದು ಇವರ ಮಾತಿಗೆ ಹೆಚ್ಚು ಬೆಲೆ ಕೊಡುವ ಅಗತ್ಯವಿಲ್ಲ ಸಿಎಂ ಬದಲಾವಣೆ ಇಲ್ಲ ಮುಂದಿನ ದಿನಗಳಲ್ಲಿ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಲ್ಲರು ಪಕ್ಷ ಬೇದ ಮರೆತು ಕೊರೊನಾವನ್ನು ಓಡಿಸೋಣ ಎಂದರು.
ಕೆ.ವಿರೂಪಾಕ್ಷಪ್ಪ ಯವರಿಗೆ ಪಕ್ಷ ಯಾವಾಗ ಸೂಕ್ತ ಸ್ಥಾನ ಮಾನ ನೀಡಲಿದೆ ಎನ್ನು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಹಿರಿಯರಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನಗಳನ್ನು ಕೊಡುವದಾಗಿ ಈಶ್ವರಪ್ಪ ಭರವಸೆ ನೀಡಿದರು.
ಉದ್ಯೋಗ ಖಾತ್ರೆ ಯೋಜನೆಯಲ್ಲಿ ಮಕ್ಕಳನ್ನು ಬಳಸುವ ಬಗ್ಗೆ ನನಗೆ ದೂರು ಬಂದಿದ್ದು ಇದರ ಬಗ್ಗೆ ತನಿಕೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಕುಡಿಯುವ ನೀರಿನ ಭ್ರಷ್ಟಾಚಾರದ ಬಗ್ಗೆ ಗ್ಯಾನೇಂದ್ರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ,ಎಂ.ಎಸ್ ಗೌಡ ,ಪೂಜಪ್ಪ ಪೂಜಾರಿ,ಎಂ.ದೊಡ್ಡ ಬಸವರಾಜ್ ,ಯಂಕೊಬ ಸಾಸಲಮರಿ ಸೇರಿದಂತೆ ಇತರರು ಪತ್ರಿಕೆ ಗೋಷ್ಠಿಯಲ್ಲಿ ಉಪಸ್ಥರಿದ್ದರು.