ಜನರಸೇವೆ ಮಾಡುವೆ: ಜಿ. ಕರೆಮ್ಮ ನಾಯಕ

ರಾಯಚೂರು,ಮೇ.೧೪- ವಿಧಾನಸಭಾ ಚುನಾವಣೆ ಫಲಿತಾಂಶ ಬಳಿಕ ನಿನ್ನೆ ರಾತ್ರಿ ದೇವದುರ್ಗ ಕ್ಷೇತ್ರದಲ್ಲಿ ಬರುವ ಜಾಗಟಕಲ್ ನಲ್ಲಿರುವ ಬಸವಣ್ಣ ದೇವರಿಗೆ ನೂತನ ಶಾಸಕರಾಗಿ ಜಯಗಳಿಸಿದ ಜಿ.ಕರೆಮ್ಮ ನಾಯಕ್ ವಿಶೇಷ ಪೂಜೆ ಸಲ್ಲಿಸಿದರು.
ಜನರು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಆ ನಂಬಿಕೆಯನ್ನು ಉಳ್ಳಿಸಿಕೊಳ್ಳುವೆ ಜನರ ಸೇವೆ ಮಾಡಲು ನನ್ನನ್ನು ಗೆಲ್ಲಿಸಿದ್ದಾರೆ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಕಾರ್ಯ ಮಾಡುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾಗಟಕಲ್ ಗ್ರಾಮದವರು ಕರೆಮ್ಮ ನಾಯಕ ಹಾಗೂ ಬುಡನಗೌಡ ಅವರನ್ನು ಅಭಿನಂದಿಸಿದರು.
ಜಿ.ಕರೆಮ್ಮ ನಾಯಕ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾದ ಬುಡ್ಡನಗೌಡ ಹಾಗೂ ಕಾರ್ಯಕರ್ತರು ಹಲವು ಹಳ್ಳಿಗಳಲ್ಲಿ ಸಂಭ್ರಮ ಆಚರಣೆಯಲ್ಲಿ ಪಾಲ್ಗೊಂಡಿದ್ದರು.