ಜನರಲ್ ಬಿಪಿನ್ ರಾವತ್‍ಗೆ ಶೃದ್ಧಾಂಜಲಿ

ಕಲಬುರಗಿ,ಡಿ.08: ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಂಗಳವಾರ ನಿಧನರಾದ ಪ್ರಯುಕ್ತ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ನಗರದ ಖಾದ್ರಿ ಚೌಕನಲ್ಲಿರುವ ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಪುಷ್ಪ, ನುಡಿ ನಮನ, ಮೌನಾಚರಣೆ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.
ದೇಶಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಲಾಯಿತು. ಕೇಂದ್ರದ ಮುಖ್ಯಸ್ಥ ಸತೀಶ ಟಿ.ಸಣಮನಿ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸದಸ್ಯರಾದ ದೇವೇಂದ್ರಪ್ಪ ಗಣಮುಖಿ, ಬಸಯ್ಯಸ್ವಾಮಿ ಹೊದಲೂರ, ಸಿದ್ದರಾಮ ತಳವಾರ, ನಾಗನಾಥ ಕಾಶೆಟ್ಟಿ, ಮಹಾದೇವ ಪಟ್ನೆ, ದತ್ತಾತ್ರಯ ಕಾಶೆಟ್ಟಿ, ಯಶ್ವಂತ್ ಬಿಲಗುಂದಿ, ಮಹೇಶ ಪರಸ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.