ಜನರಲ್ಲಿ ಭಯಭೀತಿ ಮೂಡಿಸುವುದು ಭವಿಷ್ಯವೇ ?

ಬಳ್ಳಾರಿ ಜೂ 03 : ಹಾರನಹಳ್ಳಿ ಕೋಡಿಮಠದ ಶ್ರೀಗಳು ಹೇಳಿರುವ ಭವಿಷ್ಯದ ನುಡಿಗಳು ಜನಗಳಿಗೆ ಮತ್ತಷ್ಟು ಭಯಭೀತಿ ಗೊಳಪಡಿಸುವಂತಾಗಿದೆ.
ಯಾವುದೇ ಶ್ರೀಗಳು ಜನಗಳಿಗೆ ಧೈರ್ಯ, ಆತ್ಮಸ್ಥೈರ್ಯ ಹೇಳಬೇಕೇ ವಿನಃ. ಭಯ ಬೀಳಿಸುವಂತಹ ಹೇಳಿಕೆ ಸರಿಯಾದುದಲ್ಲ ಎಂದು ನಗರದ ಕಲ್ಯಾಣ ಮಠದ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಕೋಡಿ ಮಠದ ಶ್ರೀಗಳ ಭವಿಷ್ಯದ ನುಡಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಯಾಣ ಶ್ರೀಗಳು. ಸ್ವಾಮೀಜಿಗಳು ಸಮಾಜಕ್ಕೆ ಕಷ್ಟಗಳನ್ನು ಪರಿಹರಿಸುವ, ಪರಿಹಾರ ಹೇಳಬೇಕು. ಅದು ಬಿಟ್ಟು ಭಯ ಬೀಳಿಸುವ ವಿಷಯಗಳನ್ನು ಹೇಳುವುದು ಸರಿಯಲ್ಲ. ಜನರಿಗೆ ಉತ್ತಮ‌ಕಾರಾಗಿ, ಅನ್ಯಾಯ ನಿಲ್ಲಿಸಿ, ನ್ಯಾಯದಿಂದ ನಡೆದುಕೊಳ್ಳಿ ಎಂದು‌ ಮಾರ್ಗದರ್ಶನ ಮಾಡಬೇಕು. ಈಗಾಗಲೇ ಕೋವಿಡ್ ಸಂಕಷ್ಟದಿಂದ ನೊಂದಿರುವ ಜನತಗೆ ಈ ರೀತಿ ಆಘಾತಕಾರಿ ಭವಿಷ್ಯ ಬೇಕೆ ಎಂದಿದ್ದಾರೆ.