ಜನರಲ್ಲಿ ಜೇನು ಕೃಷಿ ಆಸಕ್ತಿ ಮೂಡಲಿ: ಮಹೇಶ ಪಾಟೀಲ

ಆಲಮಟ್ಟಿ : ಮೇ.27:ಜೇನುನೊಣಗಳು ರೈತ ಸಮೂದಾಯದ ಆಪ್ತಮಿತ್ರವಾಗಿವೆ. ಅವುಗಳ ನಂಟು ಬೆಳೆಸಿಕೊಂಡರೆ ಖಂಡಿತ ಬಂಗಾರದ ಗಂಟು ಕೃಷಿ ಒಡಲಿನಲ್ಲಿ ಕಾಣಬಹುದಾಗಿದೆ. ಕಾರಣ ಗ್ರಾಮೀಣ ಪ್ರದೇಶಗಳಲ್ಲಿನ ರೈತ ಮಿತ್ರರು ಜೇನು ಮಿತ್ರರಾಗಿ ತಮ್ಮ ಆಥಿ9ಕ ಮಟ್ಟ ಸುಧಾರಿಸಿಕೊಳ್ಳಲು ಮುಂದಾಗಬೇಕು ಎಂದು ಆಲಮಟ್ಟಿ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಹೇಳಿದರು.
ಇಲ್ಲಿನ ರಾಕ್ ಉದ್ಯಾನದಲ್ಲಿ ವಿಶ್ವ ಜೇನು ದಿನಾಚರಣೆ ಅಂಗವಾಗಿ ಸಂಯೋಜಿಸಿದ್ದ ಜೇನು ಹುಳುಗಳ ಪ್ರಾಮುಖ್ಯತೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು.
ಜೇನುಗೂಡುಗಳು ಸವಿಭಾವ ನೀಡುತ್ತವೆ.ಅವುಗಳ ಒಲವು ಬೆಳೆಸಿಕೊಳ್ಳಬೇಕು. ಈ ಭಾಗದ ಜನತೆ ಜೇನು ಕೃಷಿ ಪ್ರೇಮ ಕಾಯಕದಿಂದ ಆಥಿ9ಕ ಸಫಲತೆ ಕಂಡುಕೊಳ್ಳಬೇಕು.ಆ ದಿಸೆಯಲ್ಲಿ ಜೇನು ಕೃಷಿಯ ಬಗ್ಗೆ ನಿತ್ಯವೂ ಮಾಹಿತಿ ಹಾಗೂ ಪ್ರಾಯೋಗಿಕ ತರಬೇತಿ ನೀಡುವ ಉದ್ದೇಶದಿಂದ ಆಲಮಟ್ಟಿಯ ವಿವಿಧ ಉದ್ಯಾನದಲ್ಲಿ ಜೇನು ಕೃಷಿ ಆರಂಭಿಸಲಾಗಿದೆ.ಆಸಕ್ತರು ಆಸಕ್ತಿಯಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹೇಶ ಪಾಟೀಲ ನುಡಿದರು.
ಜೇನು ತರಬೇತುದಾರ ದೇವಲಾಪುರದ ಶಿವಯೋಗಿ ಹಿರೇಮಠ ವಿಶೇಷ ಉಪನ್ಯಾಸ ನೀಡಿ, ಆಹಾರ ಉತ್ಪಾದನೆಯಲ್ಲಿ ಜೇನು ನೊಣಗಳ ಪಾತ್ರ ಅಮೂಲ್ಯ ಹಾಗೂ ಮಹತ್ವದಾಗಿದೆ. ಪರಾಗಸ್ಪರ್ಶದ ಮೂಲಕ ವಿವಿಧ ಕೃಷಿ, ತೋಟಗಾರಿಕೆ ಆಧಾರಿತ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಸಹಾಯ ಹಸ್ತ ಚಾಚುವ ಜೇನು ಹುಳಗಳು ಮನುಷ್ಯ ಹಾಗೂ ಇತರೆ ಪ್ರಾಣಿಗಳಿಗೆ ಪೌಷ್ಟಿಕ ಆಹಾರದ ಮೂಲವಾಗಿವೆ ಎಂದರು.
ಆಹಾರ ಉತ್ಪಾದನೆಯಲ್ಲಿ ಮಹತ್ವಪೂರ್ಣ ಕೊಡುಗೆ ನೀಡುವ ಜೇನುನೊಣಗಳಿಂದ ಜೇನುತುಪ್ಪ ಮತ್ತು ಇತರೆ ಜೇನಿನ ಉತ್ಪನ್ನಗಳು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಹಾಗೂ ಆದಾಯ ಒದಗಿಸುತ್ತವೆ. ಆ ಹಿನ್ನೆಲೆಯಲ್ಲಿ ಜೇನು ಕೃಷಿಯತ್ತ ಗ್ರಾಮೀಣ ಜನತೆ, ರೈತ ಸಮೂಹ ಹೆಚ್ಚು ಆಕಷಿ9ತರಾಗಬೇಕು ಎಂದು ಅವರು ಅಭಿಪ್ರಾಯಿಸಿದರು.
ಇನ್ನೋರ್ವ ಜೇನು ತರಬೇತುದಾರ ಅಶೋಕ ಹಾವನವರ ಮಾತನಾಡಿ, ಜೇನುನೊಣಗಳ ಸ್ವಾಭಾವಿಕ ಸೃಷ್ಟಿ, ಜೇನುಗೂಡಿನಿಂದಾಗುವ ಲಾಭ, ಜೇನು ಮೇನು ವಿಶೇಷತೆ ತಿಳಿಸಿದರು.
ಶಿವಯೋಗಿ ಹಿರೇಮಠ ಜೇನುಗೂಡುಗಳಿಂದ ಜೇನು ತೆಗೆದು, ಜೇನು ಪೆಟ್ಟಿಗೆಯಲ್ಲಿ ಜೇನು ಕೃಷಿ ಯಾವ ರೀತಿ ಆಗುತ್ತದೆ ? ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ, ಬೀಟ್ ಫಾರೆಸ್ಟ??9 ಪ್ರವೀಣ ಹತ್ಯಾಳಕರ,ನಾಗಪ್ಪ ಹಯ್ಯಾಳಪ್ಪ, ವಿಜಯಲಕ್ಷ್ಮಿ ರೆಡ್ಡಿ, ಅಶೋಕ ಕಾಳೆ ಇತರರು ಉಪಸ್ಥಿತರಿದ್ದರು.