ಜನರಲ್ಲಿ ಜಾಗೃತಿ ಮೂಡಿಸುವುದೇ ಆತ್ಮಹತ್ಯೆ ತಡೆಗೆ ಮದ್ದು

ಕಲಬುರಗಿ,ಸೆ.13-ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿವಸದ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಮನೋಶಾಸ್ರ್ತ ವಿಭಾಗದ ವಿಶ್ರಾಂತ ಮುಖ್ಯಸ್ಥÀ ಪೆÇ್ರೀ.ಶಿವಕುಮಾರ ಚೆಂಗಟಿಯವರು ವಿದ್ಯಾರ್ಥಿಗಳನುದ್ದೇಶಿಸಿ ಮಾತನಾಡುತ್ತ, ಇತ್ತಿಚಿಗೆ ವಿಶ್ವದಲ್ಲಿ ಆತ್ಮಹತ್ಯೆ ಏರುಗತಿಯಲ್ಲಿ ಸಾಗಿದೆ ಅದಕ್ಕೆ ಕಾರಣ ಕೌಟಂಬಿಕ ಕಲಹ, ಪ್ರೇಮ ವಿವಾಹ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿಫಲರಾಗುವುದು, ಮಾನಸಿಕ ರೋಗದಿಂದ ಬಳಲುವಿಕೆ, ಆರ್ಥಿಕ ತೊಂದರೆ- ಹೀಗೆ ಆತ್ಮ ಹತ್ಯೆಗೆ ಹಲವು ಕಾರಣಗಳುಂಟು, ಆದರೆ ಆತ್ಮಹತ್ಯೆಯೇ ಸಮಸ್ಯೆಗೆ ಪರಿಹಾರ ಅಲ್ಲ. ಆದ್ದರಿಂದ ಅಂತಹ ಜನರು ಕಂಡರೆ ಅವರಿಗೆ ಧೈರ್ಯ ಹೇಳಬೇಕು, ಪರಿಹಾರ ಕಂಡು ಹಿಡಿಯಬೇಕು, ಉಚಿತ ಮಾರ್ಗದರ್ಶನ ಮಾಡಬೇಕು ಎಂದರು.
ಮೊದಲಿಗೆ ಕು.ಪಲ್ಲವಿ ಮತ್ತು ಕು.ಪವಿತ್ರ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕಿ ಶಿವಲೀಲಾ ಬೊಮ್ಮನ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಡಾ.ವಿಜಯ ಕುಮಾರ ಪರುತೆಯವರು ಪ್ರಾಸ್ತವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ಕು.ಹೇಝಲ್ ಹಾಗೂ ಕು.ಅಶ್ವಿನಿಯರು ಆತ್ಮಹತ್ಯೆ ಕುರಿತು ಭಾಷಣ ಮಾತನಾಡಿದರು.
ಕಾರ್ಯಕ್ರಮದ ಮೊದಲು “ಆತ್ಮಹತ್ಯೆಗೆ ಕಾರಣಗಳು, ಅರಿವು ಮತ್ತು ತಡೆಗಟ್ಟುವಿಕೆ” ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಕು.ಐಶ್ಯಾ ತಹಸೀನ್ ,ಕು.ಹೇಝಲ್,ಕು.ಅನಾಮಿಕಾ,ಕು.ಅಂಜಲಿ ಕುಮಾರಿ,ಕು.ಸೃಷ್ಟಿ ಕುಲ್ಕರ್ಣಿಯವರಿಗೆ ಮುಖ್ಯಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ತದನಂತರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಾಜೇಂದ್ರ ಕೊಂಡಾ ಅವರು ಅಧ್ಯಕ್ಷೀಯ ಮಾತನಾಡಿದರು. ಕೊನೆಯಲ್ಲಿ ಛಾಯಾ ಪಾಟೀಲ್ ವಂದಿಸಿದರು.