ಜನರಬಳಿಗೆ ಸಾಹಿತ್ಯ ಪರಿಷತ್ತು


ದಾವಣಗೆರೆ.ನ.೩೦; ಸುವರ್ಣ ಕರ್ನಾಟಕ ವೇದಿಕೆಯಿಂದ 66ನೇ ಕನ್ನಡ ರಾಜ್ಯೋತ್ಸವಹಾಗೂ ಪುನೀತ್ ರಾಜಕುಮಾರ್ ಸ್ಮರಣೆ ಕಾರ್ಯಕ್ರಮವನ್ನು ತಾಲೂಕಿನ ಹೊನ್ನಮರಡಿ ಆಂಜನೇಯ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಧ್ವಜಾರೋಹಣ ನೆರವೇರಿಸಿದ ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸಕ್ಕೆ ಪರಿಚಾರಕನನ್ನಾಗಿ ನನ್ನನ್ನು ಆಯ್ಕೆ ಮಾಡಿದ ಸಮಸ್ತರಿಗೂ ನಾನುತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಕನ್ನಡ ಸಾಹಿತ್ಯಪರಿಷತ್ತನ್ನು ಜನರ ಬಳಿಗೆ ಕೊಂಡೊಯ್ಯಲು ಯೋಜನೆ ಹಾಕಿಕೊಂಡಿದ್ದೇನೆ. ಇದಕ್ಕೆಎಲ್ಲರ ಸಹಕಾರ ಅಗತ್ಯ ಎಂದರು. ಮುಂಬರುವ ನವೆಂಬರ್ ತಿಂಗಳ ಒಳಗಾಗಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಕೇಂದ್ರಗಳಲ್ಲಿ ಧ್ವಜಸ್ತಂಭ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.ಈಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ 500 ರೂ. ಸದಸ್ಯತ್ವ ಶುಲ್ಕವನ್ನು 250ರೂ.ಗಳಿಗೆ ಇಳಿಸಲು ಕೇಂದ್ರ ಸಮಿತಿಗೆ ಶಿಫಾರಸ್ಸು ಮಾಡಲಾಗುವುದು. ಈ ಹಿಂದೆನಾನು ತಾಲೂಕು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲೇ ಅತಿಹೆಚ್ಚು 5 ಸಾವಿರಹೊಸ ಸದಸ್ಯತ್ವ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯತ್ವಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು. ಇದೇ ವೇಳೆ ಕಸಾಪ ನೂತನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹಾಗೂ ಜಿಲ್ಲಾಕನ್ನಡ ರಾಜ್ಯೋತ್ಸವ ಸನ್ಮಾನ ಪುರಸ್ಕೃತ ಅಂತಾರಾಷ್ಟಿçÃಯ ಯೋಗಪಟುಹೆಚ್.ಪರಶುರಾಮ್ ಅವರುಗಳನ್ನು ಸುವರ್ಣ ಕರ್ನಾಟಕ ವೇದಿಕೆಯಿಂದಅಭಿನಂದಿಸಲಾಯಿತು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆರ್.ಸಂತೋಷ ಕುಮಾರಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ದಿಳ್ಳೆಪ್ಪ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾಯೋಗೇಶಪ್ಪ, ಸದಸ್ಯರಾದ ಸುನೀಲ್ ಕುಮಾರ್ ಕುಕ್ಕುವಾಡ, ಮಂಜುನಾಥಮತ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಮನೋಹರ, ವಾಲ್ಮೀಕಿ ವಿದ್ಯಾಪೀಠದ ಅಧ್ಯಕ್ಷಚಂದ್ರಪ್ಪ, ಮುಖ್ಯೋಪಾಧ್ಯಾಯ ಶ್ರೀನಿವಾಸ, ವೇದಿಕೆಯ ಗ್ರಾಮ ಘಟಕದಅಧ್ಯಕ್ಷ ಬಸವರಾಜ, ಅಂಜಿನಪ್ಪ, ಗಂಗಣ್ಣ, ಸಿದ್ದೇಶ, ರುದ್ರಸ್ವಾಮಿ, ಪುಟ್ಟರಾಜುಸೇರಿದಂತೆ ಗ್ರಾಮದ ಮುಖಂಡರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
———-