ಜನಮೆಚ್ಚುಗೆ ಪಡೆದ  ಯಕ್ಷಗಾನ ಬಾಲ ಕಲಾವಿದರು

ಸಂಜೆವಾಣಿ ವಾರ್ತೆ

ದಾವಣಗೆರೆ-ಫೆ.26; ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಬಂಟರ ಸಂಘದ ಸರ್ವ ಸದಸ್ಯರ ಮಹಾಸಭೆ ಇತ್ತೀಚಿಗೆ ದಾವಣಗೆರೆಯ ಕುಂದುವಾಡ ರಸ್ತೆಯಲ್ಲಿರುವ ಬಂಟರ ಭವನ ಸಭಾಂಗಣದಲ್ಲಿ ನಡೆದಿದ್ದು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಯಕ್ಷಗಾನ ಬಾಲ ಕಲಾವಿದರಾದ ನಗರದ ಸೇಂಟ್ ಪಾಲ್ಸ್ ಕಾನ್ವೆಂಟ್‌ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಶ್ರಿತ ಹಟ್ಟಿಯಂಗಡಿ ಆನಂದಶೆಟ್ಟಿ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮೃದ್ಧಿ ಹರೀಶ್ ಶೆಟ್ಟಿ ನೂಜಿಯವರು ಯಕ್ಷಗಾನ ಪ್ರದರ್ಶನದೊಂದಿಗೆ ಅತ್ಯದ್ಭುತವಾಗಿ ತಾಳಕ್ಕೆ ಸರಿಯಾಗಿ ಕುಣಿತದೊಂದಿಗೆ ನೆರೆದ ಪ್ರೇಕ್ಷಕರ ಹೃನ್ಮನ ತಣಿಸಿದರು.ಕರ್ನಾಟಕ ಕರಾವಳಿ ಜಿಲ್ಲೆಗಳ ಆರಾಧನಾ ಗಂಡು ಕಲೆ, ಯಕ್ಷಗಾನವನ್ನು ವಾಣಿಜ್ಯ ನಗರಿ ದಾವಣಗೆರೆಯಲ್ಲಿ ವೈಭವೀಕರಿಸಿದ ಈ ಯಕ್ಷಗಾನ ಬಾಲ ಕಲಾವಿದರಿಗೆ ದಾವಣಗೆರೆಯ ಯಕ್ಷರಂಗ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ಸೇರಿದಂತೆ ಸಂಸ್ಥೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು, ಯಕ್ಷ ಪ್ರೇಮಿಗಳು ಸಂಭ್ರಮದಿAದ ಮೆಚ್ಚುಗೆಯೊಂದಿಗೆ ಅಭಿನಂದಿಸಿದರು.