
ಕೆಂಭಾವಿ:ಮಾ.1:ಸರಳತೆ ಸಮಯಪ್ರಜ್ಞೆಯ ಸಾಕಾರ ಮೂರ್ತಿಯಾಗಿ ನಾಡಿನ ಜನಮಾನಸದಲ್ಲಿ ದಿವ್ಯತೆಯ ದೀಪವನ್ನು ಹಚ್ಚಿ ಸಂತ ಪರಂಪರೆಯ ಭವ್ಯತೆಯನ್ನು ಹೆಚ್ಚಿಸದವರು ಸಿದ್ದೇಶ್ವರ ಅಪ್ಪಾಜೀಯವರು ಎಂದು ವೀರಗೋಟದ ಪೂಜ್ಯರಾದ ಅಡವಿಲಿಂಗ ಮಹಾರಾಜರು ಹೇಳಿದರು,
ಪಟ್ಟಣದ ಶ್ರೀಶರಣಬವೇಶ್ವರರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಪುರಾಣಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಸಿದ್ದೇಶ್ವರ ಸ್ವಾಮಿಜೀಯವರ ದೀಪನಮನಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಸಿದ್ದೇಶ್ವರ ಸ್ವಾಮಿಗಳು ಕೂಡಾ ಒಬ್ಬರು ಅವರ ಆಚಾರ ವಿಚಾರ ಸಂತ ಪರಂಪರೆಗೆ ಮಾರ್ಗದರ್ಶನವಾಗಿದೆ. ಅವರ ಜೀವಾತಾವಧಿಯ ಕೊನೆಯವರೆಗು ಸರಳತೆಯನ್ನೆ ಮೈಗೂಡಿಸಿಕೊಂಡವರು ಕೊನೆವರೆಗು ನುಡಿದÀಂತೆ ನಡೆದವರು ಎಂದು ಹೇಳಿದರು. ನಂತರ ಮಾತನಾಡಿದ ಚಳಕಾಪೂರ ಸಿದ್ದಾರೂಢಮಠದ ಪೂಜ್ಯರಾದ ಶಂಕರಾನಂದ ಮಹಾಸ್ವಾಮೀಗಳು ಜನಸಾಮಾನ್ಯರದ್ದು ಮರೆವಿನ ಆಚಾರವಾದರೆ ತತ್ವಜ್ಞಾನದಲ್ಲಿ ಅವರ ಅರಿವಿನ ಆಚಾರವಿರುತ್ತದೆ ಸಿದ್ದೇಶ್ವರ ಶ್ರೀಗಳಲ್ಲಿ ಜಂಗಮತತ್ವವಿರುತಿತ್ತು. ಪುರಾಣ ಪ್ರಚನಗಳಿಂದ ಜಂಜಾಟದ ಬದುಕಿಗೆ ಒಂದಿಷ್ಟ ನೆಮ್ಮದಿ ಸಿಕ್ಕಂತಾಗುತ್ತದೆ, ಎಂದು ಹೇಳಿದರು,
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೆಂಭಾವಿ ಹೀರೆಮಠ ಸಂಸ್ಥಾನದ ಪೂಜ್ಯರಾದ ಷ.ಬ್ರ.ಶ್ರೀ ಚನ್ನಬಸವ ಶಿವಾರ್ಚಾರು ವಹಸಿಕೊಂಡಿದ್ದರು,ಕಾರ್ಯಕ್ರಮದಲ್ಲಿ ಗದಗ ವೀರೇಶ್ವರ ಪುಣ್ಯಾಶ್ರಮದ ಪ್ರವಚನಕಾರರಾದ ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ತೆಲ್ಲೂರ,ರಾಜಶೇಖರಯ್ಯ ಹೀರೆಮಠ,ಚನ್ನಯ್ಯಸ್ವಾಮಿ ಚಿಕ್ಕಮಠ,ಸೇರಿದಂತೆ ಊರಿನ ಹಿರಿಯರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಇದ್ದರು,ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಬಸವರಾಜ ಭಂಟನೂರ ಯಮನೇಶ ಯಾಳಗಿ, ಸೋಮನಾಥ ಯಾಳಗಿಯವರಿಂದ ಸಂಗೀತ ಸೇವೆ ನೇರವೆರಿತು, ಕಾರ್ಯಕ್ರಮವನ್ನು ಯಂಕನಗೌಡ ಪಾಟೀಲ ನಿರೂಪಿಸಿದರು ಮುರಗೇಶ ಹುಣಸಗಿ ಸ್ವಾಗತಿಸಿದರು, ಮಡಿವಾಳಪ್ಪಗೌಡ ಪೋ.ಪಾಟೀಲ ವಂದಿಸಿದರು.