“ಜನಮನ ಸೆಳೆದ ಸಾಂಸ್ಕøತಿಕ ಕಲಾ ಉತ್ಸವ”

ಕಲಬುರಗಿ :ಸೆ.13:ತಾಲ್ಲೂಕಿನ ಪಟ್ಟಣ ಗ್ರಾಮದಲ್ಲಿ ಶ್ರೀ ರಾಚಣ್ಣ ದೇವರ ದೇವಾಸ್ಥಾನದ ಆವರಣದಲ್ಲಿ ಗಾನಯೋಗಿ ಪಂಚಾಕ್ಷರಿ ಸಂಗೀತ ಕಲಾ ಸೇವಾ ಸಂಸ್ಥೆ (ರಿ) ಆಲೂರ. ಬಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಜನಮನ ಸೆಳೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಷ. ಬ್ರ. ವೀರಮಹಾಂತ ಶಿವಾಚಾರ್ಯರು ಮಹಾಂತೇಶ್ವರ ಮಠ ಚಿನಮಗೇರಾ ಅವರು ಮಾತನಾಡುತ್ತ,ಸಂಗೀತ ದಿಂದ ಮಹಾದಾನಂದ ಇದೆ ಭಗವಂತನ ಒಳಮೆಗೆ ಬಹಳ ಸಮೀಪದ ಕಲೆ ಎಂದರೆ ಅದು ಸಂಗೀತ ವಿದ್ಯೆ ಹಾಗೆಯೆ ಈ ಜಗತ್ತಿನಲ್ಲಿ ಸಂಗೀತಕ್ಕೆ ತಲೆ ದುಗದೆ ಇರುವಂಥ ಜೀವಿಯೆ ಇಲ್ಲ ಹಾಗೇನಾದರೂ ಇದ್ರೆ ಅದು ಜೀವಿಯೆ ಅಲ್ಲ ಅದು ಕಲ್ಲು ಎಂದರು ತಪ್ಪಿಲ್ಲ ಹಾಗೆಯೆ ಎಲ್ಲರಲ್ಲಿಯೂ ಸಂಗೀತ ಕಲಿಯುವ ಬೆಳೆಸುವ ಮನೋಭಾವ ಮೂಡಲಿ ಎಂದು ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಷ. ಬ್ರ. ವೀರಮಹಾಂತ ಶಿವಾಚಾರ್ಯರು ಆಶೀರ್ವಾಚನ ದಯಾಪಾಲಿಸಿದರು . ಅಧ್ಯಕ್ಷತೆಯನ್ನು ಶಿವಲಿಂಗಪ್ಪ ಬಿಸಗೊಂಡ ಗ್ರಾ.ಪಂ.ಅಧ್ಯಕ್ಷರು ಪಟ್ಟಣ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸೂರ್ಯಕಾಂತ ಪಟ್ಟಣ,ನರಸಪ್ಪ ಬಿರಾದಾರ ದೇಗಾಂವ, ನಿಲಕಂಠಯ್ಯ ಬಿ ಹಿರೇಮಠ, ಬಸಯ್ಯ ಮಠ ಪಟ್ಟಣ, ವಿಶ್ವನಾಥ ಸಾಲಿಮಠ, ರವೀಂದ್ರ ಪೆÇಲೀಸ ಪಾಟೀಲ್, ಅನೀಲಕುಮಾರ ಕಡ್ಲಾ,ಚಂದ್ರಶಾ ಕಡ್ಲಾ, ಶ್ರವಣಮಾರ ಪರಸ್ತಿ, ಅಶೋಕ ದೂ ತ್ತರಗಾಂವ, ಗುರುಶಾಂತಪ್ಪ ಪರಸ್ತಿ, ಲಿಂಗಯ್ಯ ಸ್ವಾಮಿ ಹಾಗೂ ಇನ್ನೂ ಅನೇಕ ಅತಿಥಿ ಗಣ್ಯರು ಭಾಗವಹಿಸಿದ್ದರು ಸಭಾ ನಿರೂಪಣೆಯನ್ನು ಮಹಾಲಿಂಗಯ್ಯ ಸ್ವಾಮಿ ಆಲೂರ ಬಿ ನಡೆಸಿಕೊಟ್ಟರು ಸಂಘದ ಅಧ್ಯಕ್ಷರಾದ ನಾಗಲಿಂಗಯ್ಯ ಸ್ಥಾವರಮಠ ಉಪಸ್ಥಿತರಿದ್ದರು.
ನಂತರ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಅಣ್ಣಾರಾವ್ ಶೇಳ್ಳಗಿ,ಗುರುಶಾಂತಯ್ಯ ಸ್ಥಾವರಮಠ್,ಸೈದಪ್ಪ ಸಪ್ಪನ ಗೊಳ್, ವಿಜಯಲಕ್ಷ್ಮಿ ಕೆಂಗನಾಳ್, ಸೇರಿದಂತೆ ಹಲವಾರು ಕಲಾವಿದರಿಂದ ಸಾಂಸ್ಕೃತಿಕ ಕಲಾ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು ಊರಿನ ಗ್ರಾಮಸ್ಥರು ಹಿರಿಯರು ಗಣ್ಯವ್ಯಕ್ತಿಗಳು ಮಹಿಳೆಯರು ಮುದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.