ಜನಮನ ಸೆಳೆದ ಕಲ್ಯಾಣ ಕರ್ನಾಟಕ ಸಂಗೀತ ಸಂಭ್ರಮ

ಕಲಬುರಗಿ:ಜು.26:ಇತ್ತೀಚೆಗೆ ನಗರದ ಅಂಭಾಭವಾನಿ ದೇವಸ್ಥಾನ ಆವರಣ ಜಾಧವ ಲೇಔಟ್ ಬಿದ್ದಾಪುರ ಕಾಲೋನಿಯಲ್ಲಿ ಹಮ್ಮಿಕೊಂಡ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕøತಿ ಸೇವಾ ಸಂಸ್ಥೆ (ರಿ) ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಸಂಗೀತ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ಜನ ಮನ ಸೆಳೆಯಿತು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರು ಕಾರ್ಯಕ್ರಮ ಉದ್ಘಾಟಿಸಿದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶಿವಶರಣಪ್ಪ ಕೋಬಾಳ್
ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಪಾರ್ವತಿ ರಾಜು ದೇವದುರ್ಗ, ಭೀಮಾಶಂಕರ ಮುಗಳಿ, ಓಂಕಾರೇಶ್ವರ ಘೋಷಿಮಠ, ನ್ಯಾಯವಾದಿಗಳಾದ ಶ್ರೀ ಪಿ ಎಸ್ ಮಠ, ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಾಬುರಾವ ಕೋಬಾಳ ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ಸಂಗೀತ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕಾಶವಾಣಿ ದೂರದರ್ಶನ ಜನಪ್ರಿಯ ಕಲಾವಿದರಾದ ಪ್ರಶಾಂತ ಗೋಲ್ಡ್ ಸ್ಮಿತ್ ಬಾನ್ಸೂರಿ ವಾದನ, ಶ್ರೀ ಗುರುಶಾಂತಯ್ಯ ಸ್ಥಾವರಮಠ ಸುಗಮ ಸಂಗೀತ, ಅಣ್ಣಾರಾವ ಶೇಳ್ಳಗಿ ಮತ್ತಿಮುಡ ದಾಸವಾಣಿ, ದತ್ತರಾಜ ಕಲಶೆಟ್ಟಿ ಬಂದರವಾಡ ಜಾನಪದ ಗೀತೆ, ಮಹಾಂತಪ್ಪ ಮಂದೇವಾಲ, ಸೈದಪ್ಪ ಸಪ್ಪನಗೋಳ. ತತ್ವಪದಗಳು, ಸೂರ್ಯಕಾಂತ ಡುಮ್ಮಾ , ಬಸಯ್ಯ ಗುತ್ತೇದಾರ ಜಾನಪದ ಗೀತೆ, ಬಲಭೀಮ ಎಮ್ ನೆಲೋಗಿ ಸುಗಮ ಸಂಗೀತ, ಶಿವಶರಣಪ್ಪ ಮಾಡ್ಯಾಳಕರ ವಚನ ಗಾಯನ, ಶ್ರೀಮತಿ ಪವಿತ್ರ ವಿಶ್ವನಾಥ ರಾಜನಾಳ ಸುಗಮ ಸಂಗೀತ,ಶ್ರೀಮತಿ ವಿಜಯಲಕ್ಷ್ಮಿ ಎಸ್ ಕೆಂಗನಾಳ, ಸೂರ್ಯಕಾಂತ್ ಪೂಜಾರಿ, ತತ್ವಪದಗಳು, ಸಾಗರ ಎಚ್ ಭಿಮಳ್ಳಿ,ಅನಿಲಕುಮಾರ ಮಠಪತಿ,ಇವರಿಂದ ವಚನ ಗಾಯನ ಎಲ್ಲಾ ಕಲಾವಿದರೂ ಸುಶ್ರಾವ್ಯವಾಗಿ ಹಾಡುವುದರ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ವಾದ್ಯಸಹಕಾರ ಜಗದೀಶ ಹೂಗಾರ, ನಾಗಲಿಂಗಯ್ಶ ಸ್ಥಾವರಮಠ, ಮೌನೇಶ್ ಪಂಚಾಳ್ , ವೀರಭದ್ರಯ್ಯ ಸ್ಥಾವರಮಠ, ರವಿಸ್ವಾಮಿ ಗೋಟುರ, ಅಂಬರೀಷ್ ಹೂಗಾರ,ಬದ್ರಿನಾಥ್ ಮುಡುಬಿ,ಚೇತನ ಕೋಬಾಳ ಇವರು ಎಲ್ಲಾ ಕಲಾವಿದರಿಗೆ ವಾದ್ಯ ಸಹಕಾರ ನೀಡಿದರು.ಮಲ್ಲಿಕಾರ್ಜುನ್ ಎಸ್ ರೋಣದ ಕಾರ್ಯಕ್ರಮ ನಿರೂಪಿಸದರು.ಶ್ರೀಮತಿ ನಾಗಮ್ಮ ಬಿ ಅವರು ಆಗಮಿಸಿದ್ದ ಕಲಾವಿದರಿಗೆ ಹಾಗೂ ಸಂಗೀತ ಅಭಿಮಾನಿಗಳಿಗೆ ಹಾಗೂ ಪದಾಧಿಕಾರಿಗಳಿಗೆ ವಂದನೆ ಸಲ್ಲಿಸಿದರು ಈ ಕಾರ್ಯಕ್ರಮದಲ್ಲಿ ಅಧಿಕ ಸಂಕೆಯಲ್ಲಿಪ್ರೇಕ್ಷಕರು ಭಾಗವಹಿಸಿ ಸಂಜೆಯ ರಸದೌತಣ ಪಡೆದುಕೊಂಡರು.