ಜನಮನ ಸೂರೆಗೊಂಡ ಗಾನ ಸಂಭ್ರಮ ಏ ಶಾಮ್ ಮಸ್ತಾನಿ

ಕಲಬುರಗಿ,ಆ.05: ನಗರದ ಕಲಾಮಂಡಳದಲ್ಲಿ ಸುಕಿ ಸಾಂಸ್ಕ್ರತಿಕ ಸಂಸ್ಥೆಯ ಹಿಂದಿ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕ ಕಿಶೋರ ಕುಮಾರ ಅವರ 94ನೆಯ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ವಾಯ್ಯ್ ಆಫ್ ಕಿಶೋರ ಕುಮಾರ ಎಂದೇ ಪ್ರಸಿದ್ದಿ ಪಡೆದಿರುವ ಹಿರಿಯ ಗಾಯಕ ರಮೇಶ ಜೋಶಿ ಅವರು ಕಿಶೋರ ಕುಮಾರ ಅವರ ಜನಪ್ರಿಯ ಹಾಡುಗಳನ್ನು ಹಾಡಿ ರಂಜಿಸಿದರು. ಅವರ ಮಧುರ ಗಾಯನಕ್ಕೆ ವೀಕ್ಷಕರು ತಲೆ ತೂಗಿದರು.

ಆಹ್ವಾನಿತ ಗಾಯಕರು ಲಕ್ಮೀಕಾಂತ ಸೀತನೂರ ಕಾವೇರಿ ಹಿರೇಮಠ ಅನ್ನಪೂರ್ಣ ಚವ್ಹಾಣ ಹಾಗು ಸುಕಿ ತಂಡದ ಗಾಯಕರು ಕಿರಣ ಪಾಟೀಲ, ಪ್ರಕಾಶ ದಂಡೋತಿ, ಕವಿರಾಜ ನಿಂಬಾಳ, ಏಮ ಸಂಜೀವ, ಮಹೇಶ ಕುಮಾರ ನಿಪ್ಪಾಣಿ ಅವರು ಕಿಶೋರ ಕುಮಾರ್ ಅವರ ಹಾಡುಗಳನ್ನು ಹಾಡಿ ಗಮನ ಸೆಳೆದರು.

ಕಾರ್ಯಕ್ರಮ ರಮೇಶ ಜೋಶಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ವೇದಿಕೆ ಮೇಲೆ ವಿನೋದ ಪಂಡಿತ, ಸಿದ್ಧಪ್ಪ ಭಗವತಿ ಇದ್ದರು. ಕಿರಣ ಪಾಟೀಲ ಅಧ್ಯಕ್ಷತೆವಹಿಸಿದ್ದರು.
ಎಂ. ಸಂಜೀವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ದಂಡೋತಿ ಪ್ರಾರ್ಥನೆಗೀತೆ ಹಾಡಿದರು. ಮಹಿಪಾಲ ರೆಡ್ಡಿ ಮುನ್ನೂರ ನಿರೂಪಿಸಿದರು. ಜೋಶಿ ಪರಿವಾದರು, ನಗರದ ಅಭಿಮಾನಿಗಳು, ಹಿರಿಯ ಕಲಾವಿದರು ಹಾಗೂ ಮಹಿಳೆಯರು, ಚಿತ್ರಕಲಾವಿದ ಮತ್ತು ಛಾಯಾಗ್ರಾಹಕ ನಾರಾಯಣ. ಎಂ.ಜೋಶಿ ಮುಂತಾದವರು ಇದ್ದರು. ಎಂದು ಸುಕಿ ಸಾಂಸ್ಕ್ರತಿಕ ಸಂಸ್ಥೆಯ ಕಾರ್ಯದರ್ಶಿ ಶರಣು ಪಟ್ಟಣಶೆಟ್ಟಿ ತಿಳಿಸಿದ್ದಾರೆ.