
ಆಳಂದ: ಫೆ.28:ಮೂರು ದಿನಗಳಿಂದ ಕಲಬುಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದ ಕೊನೆಯದಿನ ಭಾನುವಾರ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯ ಏಕೈಕ ಕಲಾವಿದರಾಗಿ ಪಾಲ್ಗೊಂಡಿದ್ದ ಪಿಟೀಲ ವಾದ್ಯ ಕಲಾವಿದ ಭದ್ರಿನಾಥ ಮುಡಬಿಯವರು ನುಡಿಸಿದ ಪಿಟೀಲು ವಾದನ ಜನಮನ ಸೊರೆಗೊಂಡಿತು.
ಭಿನ್ನಸಡ್ಜ್ ರಾಗ ನುಡಿಸಿದ ಅವರು, ಪಿಟೀಲು ಆಸಕ್ತರ ಮನತಣ್ಣಿಸಿದರು. ಇವರಿಗೆ ಸಾಥಿಯಾಗಿ ಸಹ ಪಿಟೀಲು ವಾದನ ನುಡಿಸಿದ ಅವರ 8 ವರ್ಷದ ಪುತ್ರ ಮಾಸ್ಟರ್ ನಿಷಾದ ಮುಡಬಿ ಸಹ ಅಷ್ಟೇ ನೈಪುಣ್ಯತೆ ವಾದನ ಪ್ರೇಕ್ಷರನ್ನು ಆಕರ್ಶಿಸಿತು. ಇದಕ್ಕೆ ತಬಲಾ ಸಾಥಿಯಾಗಿ ವಿಜೇಂದ್ರ ಸಗರ ನುಡಿಸಿದರು.
ಭದ್ರನಾಥ ಮುಡಬಿ ಅವರು ಆಳಂದ ತಾಲೂಕಿನ ಕೊರಳ್ಳಿ ಹತ್ತಿರದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯ ಸಂಗೀತ ಶಿಕ್ಷಕರೂ ಆಗಿದ್ದು ಇಲ್ಲಿನ ಅನೇಕ ವಿದ್ಯಾರ್ಥಿಗಳನ್ನು ಅವರು ಸಂಗೀತ ಪ್ರತಿಭೆಗಳನ್ನಾಗಿ ಹೊರತರತೊಡಗಿದ್ದು ಇಲ್ಲಿನ ಸೌಭಾಗ್ಯವೆನ್ನುವಂತ್ತಾಗಿದೆ.
ಕ.ಕ. ಭಾಗದಲ್ಲಿ ಬೆರಳೆಣಿಕೆಷ್ಟೇ ಜನ ಪಿಟೀಲ ವಾದಕರಲ್ಲಿ ಪ್ರಮುಖವಾಗಿರುವ ಮುಡಬಿ ಅªರೊಬ್ಬರಾಗಿದ್ದಾರೆ.್ಬ ಅಲ್ಲದೆ, ಅನೇಕ ಬಡಮಕ್ಕಳಿಗೆ ಉಚಿತ ಸಂಗೀತವು ಹೇಳಿಕೊಡುವ ಮೂಲಕ ಈ ಭಾಗದಲ್ಲಿ ಸಂಗೀತ ಕಲಾ ಪ್ರತಿಭೆಗಳನ್ನು ಬೆಳೆಸುವಲ್ಲಿ ಅವರು ಕೊಡುಗೆ ನೀಡತೊಡಿದ್ದಾರೆ. ಎರಡ್ಮೂರು ಬಾರಿ ಮೈಸೂರು ದಸರಾ ಉತ್ಸವ ಸೇರಿ ಬೃಹತ್ ಸಮಾರಂಭಗಳಲ್ಲೂ ಮುಡಬಿ ಅವರು ಪಿಟೀಲು ವಾದ್ಯ ನುಡಿಸಿ ಗಮನ ಸೆಳೆದು ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಕಲಾ ಪ್ರತಿಭೆಗಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದಕ್ಕೆ ಈ ಕಲಾವಿದನ ಪಿಟೀಲ ವಾದ್ಯವೇ ಸಾಕ್ಷಿಕರಿಸಿತು. ಆದರೆ ಅವಕಾಶಗಳಿಲ್ಲದಕ್ಕೆ ಕೊರಗು, ಸೊರಗು ಇಲ್ಲಿನವರಿಗೆ ಕಾಡತೊಡಗಿದೆ. ಇಂಥ ಉತ್ಸವ ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದಲ್ಲೊಮ್ಮೆ ಅವಕಾಶ ಕೊಟ್ಟರೆ ಅದನ್ನು ಸಾಧಿಸಿ ತೋರುವ ಕಲಾ ಸಾಧಕರು ಇಲ್ಲೂ ಇದ್ದಾರೆ ಎಂಬುದಕ್ಕೆ ಅನೇಕ ನಿದರ್ಶನಗಳು ಹುಸಿಯಾಗಲಾರವು.