ಜನಮನ ಸಂಗೀತೋತ್ಸವ ಸಾಂಸ್ಕøತಿಕ ಕಾರ್ಯಕ್ರಮ

ಕಲಬುರಗಿ:ಜ.5:ಬದುಕಿನ ಸಮೃದ್ಧಿಗೆ ಸಂಗೀತವೇ ಮದ್ದು ಸಂಗೀತವೂ ಮನಸ್ಸಿಗೆ ಸುಖ ನೀಡುವಂತಹ ಒಂದು ಸುಂದರ ಕ್ರಿಯೆಯಾಗಿದೆ. ಸಂಗೀತದ ಬೆಳವಣಿಗೆಯು ನಾಡಿನ ದೇಶದ ಸಾಂಸ್ಕøತಿಕ ಬೆಳವಣಿಗೆಗೆ ನಾಂದಿಯಾಗುತ್ತದೆ ಎಂದು ಶ್ರೀ ರಾಘು ಪತ್ತಾರ ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಾ|| ಅಂಬೇಡ್ಕರ್ ಸಾಂಸ್ಕøತಿಕ ಕಲಾ ಸಂಘ (ರಿ) ರಾಮಜಿ ನಗರ, ರೋಜಾ (ಕೆ), ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 31/12/2022 ರಂದು ಶನಿವಾರ ಮಧ್ಯಾಹ್ನ 3:30 ಗಂಟೆಗೆ ಶ್ರೀ ಮಡಿವಾಳ ಮಾಚಿದೇವ ದೇವಸ್ಥಾನ ಆವರಣದಲ್ಲಿ, ಓಂ ನಗರ, 2ನೇ ಹಂತ, ಕಲಬುರಗಿಯಲ್ಲಿ “ಜನಮನ ಸಂಗೀತೋತ್ಸವ ಸಾಂಸ್ಕøತಿಕ ಕಾರ್ಯಕ್ರಮವನ್ನು” ಜರುಗಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಶ್ರೀ ಶಿವರಾಯ ಬೋಳೆವಾಡ್ ರವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದವರು ಶ್ರೀ ಮಡಿವಾಳ ದೊಡ್ಡಮನಿ, ಶ್ರೀ ಮಹಾದೇವಪ್ಪ ತಳಕಿನ್ ಮಳಖೇಡ್, ಶ್ರೀ ಸಂಜಯ ವಗ್ಗೆ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಲಾವಿದರು ಶ್ರೀ ಅಮೃತ್ತಪ್ಪ ಜಾನಪದ ಗೀತೆ, ಶ್ರೀ ಸುಭಾಷ ತತ್ವಪದ, ಶ್ರೀ ಈಶ್ವರ ವಚನ ಗಾಯನ, ಶ್ರೀ ಅಂಬೇಡ್ಕರÀ ಭಾವಗೀತೆ, ಶ್ರೀ ವಿಠಲ್ ಸುಗಮ ಸಂಗೀತ, ವಾದ್ಯ ಸಹಕಾರವನ್ನು ರಾಜು ಅಫಜಲಪೂರ ತಬಲಾ ಸಾತ್ ನೀಡಿದರು ಹಾಗೂ ಶಿವಶರಣಪ್ಪ ಮೇಳಕುಂದಿ ಹಾರ್ಮೋನಿಯಂ ಸಾತ್ ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ಎಂದು ಡಾ|| ಅಂಬೇಡ್ಕರ ಸಾಂಸ್ಕøತಿಕ ಕಲಾ ಸಂಘದ ಅಧ್ಯಕ್ಷರಾದ ಶ್ರೀಮಂತ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.